ಮಾಜಿ ಸಚಿವ ನಾಗೇಂದ್ರಗೆ (X minister B nagendra) ಎಸ್ಐಟಿ (SIT)ನೊಟೀಸ್ ನೀಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ಸಂಬಂಧ ನೋಟಿಸ್ ನೀಡಲಾಗಿದ್ದು, ಈಗಾಗಲೇ ಈ ಪ್ರಕರಣದಲ್ಲಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದೀಗ ವಿಚಾರಣೆಯನ್ನೂ ಎದುರಿಸಬೇಕಿದೆ.
ಸಿದ್ದರಾಮಯ್ಯ (Siddaramaiah) ನೇತೃತ್ವದ ರಾಜ್ಯ ಕಾಂಗ್ರೆಸ್ (ongress) ಸರ್ಕಾರ ಒಂದು ವರ್ಷದ ಸಂಭ್ರಮದಲ್ಲಿ ಇದ್ದಾಗಲೇ ಸಚಿವರೊಬ್ಬರ ತಲೆದಂಡವಾಗಿದ್ದು ಸರ್ಕಾರಕ್ಕೆ ತೀವ್ರ ಮುಜುಗರ ತಂದಿತ್ತು. ಸಿಬಿಐ(CBI) ತನಿಖೆಗೆ ಎಂಟ್ರಿ ಆಗ್ತಿದ್ದಂತೆ, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣದಲ್ಲಿ ಸಚಿವ ಬಿ. ನಾಗೇಂದ್ರ (B Nagendra) ತಲೆದಂಡ ಕೂಡ ಆಗಿತ್ತು.
ಈ ಸಂಬಂಧ ನಾಗೇಂದ್ರರನ್ನು ಈ ಹಿಂದೆ ಕರೆಸಿಕೊಂಡಿದ್ದ ಸಿಎಂ ಸಿದ್ದರಾಮಯ್ಯ ಚರ್ಚೆ ನಡೆಸಿ,ಎಸ್‌ಐಟಿ (SIT) ತನಿಖೆಯಲ್ಲಿ ಸಚಿವರ ಹೆಸರು ಉಲ್ಲೇಖವಾದ ಕಾರಣ ನಾಗೇಂದ್ರಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಸಿಎಂ ಸೂಚನೆಯಂತೆ ಈ ಹಿಂದೆ ನಾಗೇಂದ್ರ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.