ವಾಲ್ಮೀಕಿ ನಿಗಮದ (Valmiki developement board) ಹಗರಣದ ಸಂಬಂಧ ಮಾಜಿ ಸಚಿವ ಬಿ ನಾಗೇಂದ್ರ (X minister B nagendra) ಅರೆಸ್ಟ್ ಆಗುವ ಸಾಧ್ಯತೆಗಳು ದಟ್ಟವಾಗಿದೆ. ಈ ಪ್ರಕರಣದಲ್ಲಿ ಈಗಾಗಲೇ ಇ.ಡಿ (ED) ಎಮಟ್ರಿಯಾಗಿದ್ದು, 18 ಕಡೆಗಳಲ್ಲಿ ಏಕಕಲಾದಲ್ಲಿ ದಾಳಿ ನಡೆಸಿ ತೀವ್ರ ಶೋಧಕಾರ್ಯ ನಡೆಸಿದ್ದಾರೆ ಮತ್ತು ಬಿ ನಾಗೇಂದ್ರ ಆಪ್ತ ಹರೀಶ್ನ್ನ (Harish) ಕೂಡ ಈಗಾಗಲೇ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.

ಈ ಹಗರಣದಲ್ಲಿ ಸಚಿವರ ಪರವಾಗಿ ಎಲ್ಲಾ ವ್ಯವಹಾರವನ್ನೂ ನಡೆಸಿದ್ದೇ ಹರೀಶ್ ಎಂಬುದನ್ನ ತನಿಖೆಯ ವೇಳೆ ಇ.ಡಿ ಅಧಿಕಾರಿಗಳು ಕಂಡುಕೊಂಡಿದ್ದು, ಅಧಿಕಾರಿಗಳಿಗೆ ಹಣ ವರ್ಗಾವಣೆಗೆ ಒತ್ತಡ ಹೇರಿದ್ದೇ ಈ ಹರೀಶ್ ಎಂಬುದು ಗೊತ್ತಾಗಿದೆ. ಜೊತೆಗೆ ನಿಗಮದ ಎಂ ಡಿ (MD) ಆಗಿದ್ದ ಪದ್ಮನಾಭ (Padhmanab) ಈ ಹರೀಶ್ ಗೆ 25ಲಕ್ಷ ತಲುಪಿಸಿದ್ದ ವಿಚಾರ ಕೂಡ ಬಯಲಾಗಿದ್ದು, ಸಚಿವರ ಪರವಾಗಿ ಎಲ್ಲಾ ವ್ಯವಹಾರವನ್ನೂ ಈತನೇ ನಡೆಸಿರೊದು ಗೊತ್ತಾಗಿದೆ.

ಹೀಗಾಗಿ ಈಗಾಗಲೇ ಹರೀಶ್ನನ್ನ ಇ.ಡಿ (ED) ಅರೆಸ್ಟ್ ಮಾಡಿದ್ದು, ಮಾಜಿ ಸಚಿವ ಬಿ ನಾಗೇಂದ್ರರನ್ನ (8 nagendra) ಕೂಡ ಈಗಾಗಲೇ ವಿಚಾರಣೆಗೆ ಒಳಪಡಿಸಲಾಗಿದೆ. ಸುಧೀರ್ಘ ವಿಚಾರಣೆಯ ನಂತರ ಬಹುಶಃ ಇ.ಡಿ ಅಧಿಕಾರಿಗಳು ನಾಗೇಂದ್ರರನ್ನೂ ಅರೆಸ್ಟ್ ಮಾಡುವ ಸಾಧ್ಯತೆಗಳು ನಿಚ್ಚಳವಾಗಿದೆ.