• Home
  • About Us
  • ಕರ್ನಾಟಕ
Wednesday, November 19, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

ಆಯುಷ್ಮಾನ್ ಭಾರತ ಯೋಜನೆ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ: ಬಸವರಾಜ ಬೊಮ್ಮಾಯಿ

ಪ್ರತಿಧ್ವನಿ by ಪ್ರತಿಧ್ವನಿ
October 18, 2025
in Top Story, ಕರ್ನಾಟಕ, ರಾಜಕೀಯ
0
ಆಯುಷ್ಮಾನ್ ಭಾರತ ಯೋಜನೆ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ: ಬಸವರಾಜ ಬೊಮ್ಮಾಯಿ
Share on WhatsAppShare on FacebookShare on Telegram

ಆಯುಷ್ಮಾನ್ ಭಾರತ ಯೋಜನೆಯಿಂದ ಬಡವರಿಗೆ ಹೆಚ್ಚು ಅನುಕೂಲ: ಬಸವರಾಜ ಬೊಮ್ಮಾಯಿ

ADVERTISEMENT

ಹಾವೇರಿ( ಹಿರೇಕೆರೂರು) : ಸಮಗ್ರವಾಗಿ ಎಲ್ಲರ ಆರೋಗ್ಯ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಆಯುಷ್ಮಾನ ಭಾರತ ಯೋಜನೆ ಯಶಸ್ವಿಯಾಗಬೇಕಾದರೆ ಎಲ್ಲರ ಸಹಕಾರ ಅಗತ್ಯ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಂದು ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲೂಕಿನ ತಾವರಗಿ, ದೂದಹಳ್ಳಿ, ಶ್ರೀರಾಮನಕೊಪ್ಪ, ಬೋಗಾವಿ, ಗ್ರಾಮಗಳಲ್ಲಿ ನೂತನ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡದ ಉದ್ಘಾಟನೆಯನ್ನು ನೇರವೇರಿಸಿ ಮಾತನಾಡಿದರು.


ಆರೋಗ್ಯ ಬಹಳ ಮುಖ್ಯ. ನಮಗೆ ವಯಸ್ಸಿದ್ದಾಗ ಆರೊಗ್ಯದ ಕಡೆಗೆ ಗಮನ ಹರಿಸುವುದಿಲ್ಲ. ಆದರೆ, ವಯಸ್ಸಾದ ಮೇಲೆ ಆ ಬಗ್ಗೆ ಯೋಚನೆ ಮಾಡುತ್ತೇವೆ‌. ಆದರೆ ನಾವು ಆರಂಭದಲ್ಲಿಯೇ ಆರೊಗ್ಯದ ಬಗ್ಗೆ ಗಮನ ಹರಿಸಿದರೆ ವಯಸ್ಸಾದ ಮೇಲೆ ತೊಂದರೆಗೀಡಾಗುವ ಅವಶ್ಯಕತೆ ಇರುವುದಿಲ್ಲ ಎಂದರು.
ಆರೋಗ್ಯಕ್ಕೆ ಆಹಾರಕ್ಕೆ ನೇರವಾದ ಸಂಬಂಧ ಇದೆ. ಶುಚಿಯಾಗಿರುವ, ಪೌಷ್ಟಿಕವಾಗಿರುವ ಆಹಾರವನ್ನು ತೆಗೆದುಕೊಂಡರೆ ಆರೋಗ್ಯಯುತವಾಗಿರುತ್ತೇವೆ‌. ದೇವರ ಸೃಷ್ಟಿಯಲ್ಲಿ ನಮ್ಮಲ್ಲಿ ಏನಾದರೂ ರೋಗರುಜಿನಗಳಿದ್ದರೆ ರೋಗ ನಿರೋಧಕ ಶಕ್ತಿ ಭಗವಂತ ನಮಗೆ ಕೊಟ್ಟಿದ್ದಾನೆ. ಪ್ರತಿಯೊಬ್ಬರ ದೇಹದಲ್ಲಿ ಡಾಕ್ಟರ್ ಇರುತ್ತಾನೆ. ಡಾಕ್ಟರ್ ಗೆ ನಾವು ಸಹಕಾರ ಕೊಡಬೇಕು. ಒಳಗಡೆ ಡಾಕ್ಟರನ್ನು ಕಡೆಗಣಿಸಿದರೆ ಹೊರಗಡೆ ಡಾಕ್ಟರನ್ನು ಅವಲಂಬಿಸಬೇಕಾಗುತ್ತದೆ. ಆಹಾರದಿಂದ ಒಳ್ಳೆ ಆರೋಗ್ಯ ದೊರೆಯುತ್ತದೆ.

DK Shivakumar  'Bengaluru Nadige' Programme :ಹೊಸ ಯೋಜನೆಗಳ ಮಾಹಿತಿ ಬಿಚ್ಚಿಟ್ಟ ಡಿ.ಸಿ.ಎಂ ಡಿ.ಕೆ..!

ಭಾರತದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವುದು ದೊಡ್ಡ ಸವಾಲು, ನಮ್ಮ ದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದೆ. ಇಷ್ಟು ಜನಸಂಖ್ಯೆ ಇರುವ ದೇಶದಲ್ಲಿ ಎಲ್ಲರಿಗೂ ಆರೊಗ್ಯ ಕೊಡುವುದು ಸುಲಭದ ಮಾತಲ್ಲ. ಆದರೆ, ಸಣ್ಣ ಸಣ್ಣ ದೇಶಗಳಲ್ಲಿ ಆರೋಗ್ಯ ಕಾಪಾಡುವುದು ಸುಲಭ. ಇದನ್ನು ಮನಗಂಡು 2018 ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಡಿ ದೇಶಕ್ಕೆ ಆರೋಗ್ಯದ ವಿಮಾ ಯೋಜನೆ ಮಾಡಿ, ಪ್ರತಿಯೊಬ್ಬ ನಾಗರಿಕರಿಗೆ ವಿಶೇಷವಾಗಿ ಬಡವರಿಗೆ ಆರೋಗ್ಯ ಕೊಡಲು ಐದು ಲಕ್ಷ ರೂ ವರೆಗೆ ಉಚಿತ ಚಿಕಿತ್ಸೆ ನೀಡುವ ಆಯುಷ್ಮಾನ ಭಾರತ ಯೋಜನೆ ಜಾರಿಗೆ ತಂದರು. ಇದರಿಂದ 10 ಕೋಟಿ ಕುಟುಂಬಗಳು ಪ್ರಯೋಜನ ಪಡೆದಿವೆ. ರಾಜ್ಯಗಳು ಕೂಡ ಈ ಯೋಜನೆಗೆ ಕೈ ಜೋಡಿಸಿದವು ಎಂದರು.

25 ಹೊಸ ರೋಗ ಸೇರ್ಪಡೆ
ಕಳೆದ ಬಜೆಟ್ ನಲ್ಲಿ ಸುಮಾರು 25 ಹೊಸ ರೋಗಗಳನ್ನು ಈ ಯೋಜಬೆ ವ್ಯಾಪ್ತಿಗೆ ಸೇರಿಸಿದ್ದಾರೆ. ಡಯಾಲಿಸಿಸ್, ಹಾರ್ಟ್ ಅಟ್ಯಾಕ್ ಆದರೆ, ಕಿಡ್ನಿ ಸಮಸ್ಯೆ, ಲಿವರ್ ಸಮಸ್ಯೆ ಎಲ್ಲವೂ ಸೇರಿಸಿದ್ದಾರೆ. ಆಯುಷ್ಮಾನ ಯೋಜನೆಯಿಂದ ತಾಲೂಕು ಹಾಗೂ ಜಿಲ್ಲಾಸ್ಪತ್ರೆಗಳಿಗೆ ಆದಾಯವೂ ಇದೆ‌. ಆದ್ದರಿಂದ ತಾಲೂಕಿನ ಆಸ್ಪತ್ರೆಗಳ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮತ್ತು ರೋಗಿಗಳಿಗೆ ಅನುಕೂಲವಾಗುತ್ತದೆ.ಅಲ್ಲದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ವ್ಯವಸ್ಥೆ ಆಗಿದೆ. ಹೀಗಾಗಿ ಸಮಗ್ರವಾಗಿ ಎಲ್ಲರ ಆರೋಗ್ಯ ಸುಧಾರಣೆಗೆ ಪ್ರಧಾನಿ ಮೋದಿಯವರು ಮಾಡಿರುವ ಆಯುಷ್ಮಾನ ಭಾರತ ಯೋಜನೆ ಯಶಸ್ವಿಯಾಗಬೇಕಾದರೆ ಎಲ್ಲರ ಸಹಕಾರ ಅಗತ್ಯ. ಆ ಸಹಕಾರ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.


ಹಿರೆಕೇರೂರು ತಾಲೂಕಿನಲ್ಲಿ ಇವತ್ತು ಐದು ಕಡೆ ಆಯುಷ್ಮಾನ್ ಕೇಂದ್ರ ಉದ್ಘಾಟನೆ ಮಾಡುತ್ತಿದ್ದೇವೆ. ನಾನು ಮುಖ್ಯಮಂತ್ರಿ ಆಗಿದ್ದಾಗ ಅಡಿಗಲ್ಲು ಹಾಕಿದ್ದೆ, ಈಗ ನಾನೇ ಉದ್ಘಾಟನೆ ಮಾಡುತ್ತಿದ್ದೇನೆ. ಇದು ನನಗೆ ಸಂತೋಷ ತಂದಿದೆ. ಸಾಮಾನ್ಯವಾಗಿ ಹೊಸ ಸರ್ಕಾರ ಬಂದಾಗ ಹಾಲಿ ಸಿಎಂ ಕಡೆಯಿಂದ ಉದ್ಘಾಟನೆ ಮಾಡಿಸುತ್ತಾರೆ. ನಿಮ್ಮೆಲ್ಲರ ಆಶೀರ್ವಾದ ದಿಂದ ನಾನು ಈ ಕ್ಷೇತ್ರದ ಸಂಸದ ಆಗಿದ್ದೇನೆ. ಹಾಗೂ ಹಿರೇಕೆರೂರು ಶಾಸಕರಾದ ಯು.ಬಿ. ಬಣಕಾರ ಅವರು ಎಲ್ಲರೂ ಸೇರಿ ಕೆಲಸ ಮಾಡೋಣ ಅಂತ ಹೇಳಿ ನನ್ನಿಂದ ಈ ಕಟ್ಟಡ ಉದ್ಘಾಟನೆ ಮಾಡಿಸಿದ್ದಾರೆ. ನಾನು ಬಹಳ ಸಂತೋಷದಿಂದ ಉದ್ಘಾಟನೆ ಮಾಡಿದ್ದೇನೆ. , ಅನಾರೋಗ್ಯಕ್ಕೀಡಾದವರಿಗೆ ಈ ಕೇಂದ್ರ ಪರಿಹಾರ ಕೊಡುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.

ಬಡವರಿಗೆ ಅನುಕೂಲವಾಗಲಿ
ಕರ್ನಾಟಕದಲ್ಲಿ ಒಟ್ಟು ಎರಡು ಕೋಟಿ ಆಯುಷ್ಮಾನ್ ಕಾರ್ಡ್ ಗಳಿವೆ‌. ಸುಮಾರು 63 ಲಕ್ಷ ಜನರು ಈಗಾಗಲೇ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಾವೇರಿ ಜಿಲ್ಲೆಯಲ್ಲಿ 9.76 ಲಕ್ಷ ಆಯುಷ್ಮಾನ್ ಕಾರ್ಡ್ ವಿತರಿಸಲಾಗಿದೆ. ರೋಗಿಗಳು ನೇರವಾಗಿ ಆಸ್ಪತ್ರೆಗೆ ಬರುವ ವ್ಯವಸ್ಥೆ ಆಗಬೇಕು. ಇದರ ಜೊತೆಗೆ ಬಡವರಿಗೆ ಕಡಿಮೆ ದರದಲ್ಲಿ ಔಷಧ ಸಿಗಲಿ ಅಂತ ಜನೌಷಧಿ ಕೇಂದ್ರ ಗಳನ್ನು ಮಾಡಿದರು. ಅದು ಎಲ್ಲ ಕಡೆ ಯಶಸ್ವಿಯಾಗಿ ನಡೆಯುತ್ತಿದೆ. ಅಷ್ಟೆಯಲ್ಲ ನಾವು ಕಾರ್ಮಿಕರಿಗೆ ಹಾಗೂ ಹಿರಿಯ ನಾಗರಿಕರಿಗೆ ವಿಶೇಷ ವಿಮಾ ಯೋಜನೆ ಮಾಡಿದ್ದೇವೆ‌. ಅಟಲ್ ಪೆನಷನ್ ಯೋಜನೆ, ಕಾರ್ಮಿಕರಿಗೆ ಇ ಶ್ರಮ್ ಪೋರ್ಟಲ್ ನಲ್ಲಿ ಯೋಜನೆ ಮಾಡಿದ್ದೇವೆ. ಇದರ ಬಗ್ಗೆ ಮಾಹಿತಿ ಪಡೆದು ಅದರ ಎಲ್ಲ ಲಾಭವನ್ನು ವಿವಿಧ ವಲಯದಲ್ಲಿ ಕೆಲಸ ಮಾಡುವವರು ಪಡೆಯಬೇಕು. ಹಿರೆಕೆರೂರು ತಾಲೂಕಿನಲ್ಲಿ ಆಯುಷ್ಮಾನ್ ಯೋಜನೆಯಿಂದ ಬಡವರಿಗೆ ಹೆಚ್ಚಿನ ಅನುಕೂಲವಾಗಲಿ, ಬಡವರಿಗೆ ತುರ್ತು ಚಿಕಿತ್ಸೆ ಸಿಗುವಂತಾಗಲಿ, ಆಸ್ಪತ್ರೆಗೆ ಅಗತ್ಯವಿರುವ ಸಿಬ್ಬಂದಿಯನ್ನು ಆರೋಗ್ಯ ಇಲಾಖೆ ಒದಗಿಸುವ ವಿಶ್ವಾಸ ಇದೆ. ಈ ಕಟ್ಟಡ ಅತ್ಯಂತ ಗುಣಮಟ್ಟದಿಂದ ಕೂಡಿದ್ದು, ಈ ಕೇಂದ್ರದ ಸದುಪಯೋಗ ಎಲ್ಲರಿಗೂ ಆಗಲಿ ಎಂದು ಹೇಳಿದರು.


ಈ ಸಂಧರ್ಭದಲ್ಲಿ ಶಾಸಕರಾದ ಯು.ಬಿ.ಬಣಕಾರ, ಮಾಜಿ ಶಾಸಕರಾದ ಬಿ.ಸಿ ಪಾಟೀಲ್, ಡಿ.ಎಂ ಸಾಲಿ, ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಈರಪ್ಪ ಗುಬ್ಬೇರ, ಮುಖಂಡರಾದ ಮಲ್ಲಿಕಾರ್ಜುನ ಬುರಡಿಕಟ್ಟಿ, ಲಿಂಗರಾಜ ಚಪ್ಪರದಹಳ್ಳಿ, ಪಾಲಾಕ್ಷಗೌಡ ಪಾಟೀಲ್ ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

Tags: Basavaraj Bommaibasavaraj bommai newsBasavaraj Bommaihbasavaraj bommaih on g parameshwarabasavarajbommaihbommabomma koluBOMMAIbommai 2 full moviebommai 2 moviebommai 2 movie scenesbommai 2 scenesbommai 2 songsbommai 2 tamil moviebommai 2 video songsbommai moviebommai movie reviewbommai movie songsbommai movie trailerbommai old tamil moviebommai review tamilbommai tamil moviebommai tamil reviewcm basavaraj bommaicm bommaihvariety bomma
Previous Post

KSRTCಗೆ ಲಂಡನ್ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಸಾರಿಗೆ ಸಚಿವಶ್ರೀ ರಾಮಲಿಂಗಾರೆಡ್ಡಿ ಸ್ಪಷ್ಟನೆ

Next Post

ಒಂದು ಫೋಟೋ ಸಾವಿರ ಪದಗಳಿಗೆ ಸಮ: ಸಿ.ಎಂ‌.ಸಿದ್ದರಾಮಯ್ಯ

Related Posts

ಜೈಲು ವಿಡಿಯೋ ವೈರಲ್: ದರ್ಶನ್ ಪತ್ನಿ ಹೆಸರು ತಳುಕು
ಇತರೆ / Others

ಜೈಲು ವಿಡಿಯೋ ವೈರಲ್: ದರ್ಶನ್ ಪತ್ನಿ ಹೆಸರು ತಳುಕು

by ಪ್ರತಿಧ್ವನಿ
November 19, 2025
0

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನ ವಿಡಿಯೋಗಳ ವೈರಲ್ ಸಂಬಂಧ ದಾಖಲಾಗಿರೋ ಪ್ರಕರಣದಲ್ಲಿ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೆಸರು ಕೇಳಿಬಂದಿದೆ. ವಿಡಿಯೋಗಳ ವೈರಲ್ ಸಂಬಂಧ ಪರಪ್ಪನ ಅಗ್ರಹಾರ...

Read moreDetails

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

November 18, 2025

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

November 18, 2025

KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

November 18, 2025

ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ. ಸಚಿವ ಎನ್ ಎಸ್ ಭೋಸರಾಜು

November 18, 2025
Next Post
ಒಂದು ಫೋಟೋ ಸಾವಿರ ಪದಗಳಿಗೆ ಸಮ: ಸಿ.ಎಂ‌.ಸಿದ್ದರಾಮಯ್ಯ

ಒಂದು ಫೋಟೋ ಸಾವಿರ ಪದಗಳಿಗೆ ಸಮ: ಸಿ.ಎಂ‌.ಸಿದ್ದರಾಮಯ್ಯ

Recent News

Top Story

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

by ಪ್ರತಿಧ್ವನಿ
November 18, 2025
Top Story

HD Kumarswamy: ರೂರ್ಕೆಲಾ ಉಕ್ಕು ಸ್ಥಾವರ; ₹9,000 ಕೋಟಿ ವೆಚ್ಚದ ಬೃಹತ್ ಆಧುನೀಕರಣ, ವಿಸ್ತರಣೆಗೆ ಚಾಲನೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
November 18, 2025
Top Story

KJ George: ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಶಂಕುಸ್ಥಾಪನೆ ಮಾಡಿದ ಸಚಿವ ಕೆ.ಜೆ. ಜಾರ್ಜ್..!!

by ಪ್ರತಿಧ್ವನಿ
November 18, 2025
Top Story

ಬಾಗೇಪಲ್ಲಿ ತಾಲೂಕಿನ 24 ಕೆರೆಗಳಿಗೆ ಹೆಚ್ ಎನ್ ವ್ಯಾಲಿ ನೀರು ಹರಿಸುವ ಕಾರ್ಯ ಲೋಕಾರ್ಪಣೆ. ಸಚಿವ ಎನ್ ಎಸ್ ಭೋಸರಾಜು

by ಪ್ರತಿಧ್ವನಿ
November 18, 2025
Top Story

ಮಹಿಳೆಯರಿಗೆ ಹೆಚ್ಚಿನ ಸಹಾಯ ಮಾಡಲು ಗೃಹಲಕ್ಷ್ಮೀ ಬ್ಯಾಂಕ್ ಸ್ಥಾಪನೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

by ಪ್ರತಿಧ್ವನಿ
November 18, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಜೈಲು ವಿಡಿಯೋ ವೈರಲ್: ದರ್ಶನ್ ಪತ್ನಿ ಹೆಸರು ತಳುಕು

ಜೈಲು ವಿಡಿಯೋ ವೈರಲ್: ದರ್ಶನ್ ಪತ್ನಿ ಹೆಸರು ತಳುಕು

November 19, 2025

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ: ಡಿಸಿಎಂ ಡಿ.ಕೆ. ಶಿವಕುಮಾರ್

November 18, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada