
ಹಾವೇರಿ:ಇನ್ನೂ ನಾಲ್ಕು ಜನ್ಮ ಎತ್ತಿದರೂ ಒಂದೂ ಗ್ಯಾರಂಟಿ ತೆಗೆದು ಹಾಕೋಕೆ ಸಾಧ್ಯ ಆಗಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಹಾವೇರಿಯ ಶಿಗ್ಗಾವಿಯಲ್ಲಿ ಮಾತನಾಡಿದ ಡಿಸಿಎಂ, ಇದು ಕಾಂಗ್ರೆಸ್ನ ಗ್ಯಾರಂಟಿ. ಪ್ರತಿ ತಿಂಗಳು ಪ್ರತಿ ಕುಟುಂಬಕ್ಕೆ 5 ಸಾವಿರ ಹಣ ಸಂದಾಯವಾಗುತ್ತಿದೆ ಎಂದಿದ್ದಾರೆ.

ಮಹಾರಾಷ್ಟ್ರ ಬಿಜೆಪಿ ನಾಯಕರು ನಮ್ಮನ್ನು ನೋಡ್ತಿದ್ದಾರೆ. ನಮ್ಮ ಯೋಜನೆಗಳನ್ನು ಕಾಪಿ ಮಾಡ್ತಿದಾರೆ. ನಿಮ್ಮ ಮನೆ ಬಾಗಿಲಿಗೆ ಲಕ್ಷ್ಮಿ ಬಂದಿದಾಳೆ, ನಿಮ್ಮ ಮನೆ ಬಾಗಿಲಿಗೆ ಬೆಳಕು ಬಂದಿದೆ. ನಮ್ಮಣ್ಣ ಬಸವರಾಜ ಬೊಮ್ಮಾಯಿ ಅವರನ್ನ ಕೇಳ್ತೇನೆ.. ಕ್ಷೇತ್ರದಲ್ಲಿ ಒಂದು ಯೋಜನೆ ಮಾಡಿರೋದನ್ನು ತೋರಿಸಲಿ ಎಂದು ಸವಾಲು ಹಾಕಿದ್ದಾರೆ.





ಬಡವರ ಹೊಟ್ಟೆಗೆ ತೊಂದರೆ ಮಾಡಬಾರದು. ಕಾಂಗ್ರೆಸ್ ಅಭ್ಯರ್ಥಿ ಪಠಾಣ್ ಧರ್ಮ ಯಾವುದಾದರೂ ಇರಲಿ, ಈ ನೆಲ ಭಾವೈಕ್ಯತೆ ನೆಲ. ಬಿಜೆಪಿ ಅವರು ಬರೀ ಜಾತಿ ರಾಜಕಾರಣ ಮಾಡ್ತಾರೆ. ವರದಾ ನದಿಯಿಂದ ಗ್ರಾಮಕ್ಕೆ ಆಗ್ತಿರೋ ತೊಂದರೆ ತಪ್ಪಿಸ್ತೇನೆ. ಚುನಾವಣೆ ಮುಗಿಯುತ್ತಿದ್ದಂತೆಯೇ ತಂಡವೊಂದವನ್ನು ಕಳಿಸ್ತೇನೆ. ನಿಮ್ಮ ಸಮಸ್ಯೆ ಪರಿಹರಿಸ್ತೇನೆ ಎಂದು ತವರು ಮೆಳ್ಳಳ್ಳಿ ಗ್ರಾಮದಲ್ಲಿ ಭರವಸೆ ನೀಡಿದ್ದಾರೆ.