ನಿನ್ನೆ ಕರ್ನಾಟಕ ತಮಿಳುನಾಡು ಗಡಿ ಭಾಗವಾದ ಹೊಸೂರಿನಲ್ಲಿ ಎಲೆಕ್ಟಿಕ್ ಸ್ಕೂಟರ್ ಒಂದು ಚಲಾವಣೆ ಸಮಯದಲ್ಲಿಯೇ ಬೆಂಕಿಗಾಹುತಿಯಾಗಿ ಎಲ್ಲರನ್ನು ಭಯವನ್ನುಂಟು ಮಡಿತ್ತು. ಈ ಕುರಿತಾಗಿ ದೂರು ಕೂಡ ದಾಖಲಿಸಿ ತನಿಖೆ ಸಹ ಮಾಡಲಾಗಿತ್ತು.
ಈಗ ತನಿಖೆಯಲ್ಲಿ ತಿಳಿದು ಬಂದಿರುವ ಪ್ರಕಾರ, ಹಲವು ತಿಂಗಳಿನಿಂದ ಎಲಕ್ಟ್ರಿಕ್ ಸ್ಕೂಟರಿನ ಮಾಲೀಕ ಗಾಡಿಯನ್ನು ಸರಿಯಾಗಿ ಸರ್ವೀಸ್ ಮಾಡಿಸಿಲ್ಲ ಎಂದು ಕಂಪನಿಯ ಡೀಲರ್ ಹೇಳಿದ್ದಾರೆ.

ಮುಂದುವರೆದು, ನಾವೂ ಗಾಡಿಯನ್ನು ಡೆಲವರಿ ಕೊಡುವ ಸಮಯದಲ್ಲಿ ಸ್ಕೂಟರ್ ಬಳಕೆ, ಬ್ಯಾಟರಿ ನಿರ್ವಹಣೆ ಬಗ್ಗೆ ವಿವರವಾಗಿ ತಿಳಿಸಲಾಗುತ್ತದೆ ಮತ್ತು ಕೈಪಿಡಿಯಲ್ಲು ಸಹ ಇದರ ಬಗ್ಗೆ ವಿವರವಾಗಿ ತಿಳಿಸಲಾಗಿರುತ್ತದೆ. ಆದರೆ ಮಾಹನ ಮಾಲೀಕರು ಅದನ್ನು ಸರಿಯಾಗಿ ಪಾಲಿಸಿಲ್ಲ ಎಂದು ವಾಹನ ವಿತರಕರು ತಿಳಿಸಿದ್ದಾರೆ.
ನಾವು ಗ್ರಾಹಕರ ಹಿತದೃಷ್ಟಿಯಿಂದ ಆಗಾಗ ವಾಹನ ತಪಾಸಣಾ ಶಿಬಿರಗಳನ್ನು ಮಾಡುತ್ತಿರುತ್ತೇವೆ ಮತ್ತು ಗ್ರಾಹಕರಿಗೆ ಸರ್ವಿಸ್ ಬಗ್ಗೆ ತಿಳಿಸುತ್ತೇವೆ ಆದರೆ, ಈ ಗ್ರಾಹಕರು ಬಂದಿಲ್ಲದ ಕಾರಣ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.