ಬಿಜೆಪಿ (bjp)ವಿರುದ್ಧ ಮುನಿಸಿಕೊಂಡಿರುವ ಹಿರಿಯ ಮುಖಂಡ ಈಶ್ವರಪ್ಪ(eshwarappa) ಸದ್ಯ ಯಡಿಯೂರಪ್ಪ & ಫ್ಯಾಮಿಲಿ ವಿರುದ್ಧ ನಿಗಿನಿಗಿ ಕೆಂಡವಾಗಿದ್ದಾರೆ. ಸೋಮವಾರ ಬಿಜೆಪಿಯಿಂದ ಉಚ್ಛಾಟನೆಯಾದ ಬಳಿಕ ಮೊದಲ ಬಾರಿಗೆ ರಿಯಾಕ್ಷನ್ ಕೊಟ್ಟಿದ್ದಾರೆ.ಬಿಜೆಪಿಯಿಂದ ನನ್ನ ಉಚ್ಛಾಟನೆ ತಾತ್ಕಾಲಿಕವಾಗಿದ್ದು ನಾನು ಗೆದ್ದ ಬಳಿಕ ಪಕ್ಷಕ್ಕೆ ಬೇಡ ಎಂದರೂ ಕರೆದುಕೊಳ್ತಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರು ಹೇಳಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೆಎಸ್ ಈಶ್ವರಪ್ಪ ಅವರನ್ನು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಸೋಮವಾರದಂದು ಬಿಜೆಪಿಯಿಂದ 6 ವರ್ಷಗಳ ಅವಧಿಗೆ ಉಚ್ಛಾಟಿಸಲಾಗಿತ್ತು. ಈ ಬಗ್ಗೆ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗೆದ್ದ ಬಳಿಕ ನಾನೇ ಬಿಜೆಪಿಗೆ ಸೇರುತ್ತೇನೆ ಎಂದು ತಿಳಿಸಿದರು. ಬಿಜೆಪಿಯಿಂದ ನನ್ನ ಉಚ್ಛಾಟನೆ ತುಂಬಾ ತಾತ್ಕಾಲಿಕ. ತಾತ್ಕಾಲಿಕವಾಗಿ ಬಿಜೆಪಿಯಿಂದ ಹೊರಗಿದ್ದೇನೆ. ಕುತಂತ್ರದಿಂದಾಗಿ ಹೊರಗಿದ್ದೇನೆ. ನಾನು ಯಾವುದೇ ಕಾರಣಕ್ಕೂ ಈ ಜನ್ಮದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರುವುದಿಲ್ಲ. ಬಿಜೆಪಿ ನನ್ನ ತಾಯಿ, ಬಿಜೆಪಿ ಬಿಟ್ಟು ಎಲ್ಲೂ ಹೋಗೊಲ್ಲ.ಈ ಬಾರಿ ಚುನಾವಣೆಯಲ್ಲಿ ನಾನು ಗೆಲ್ಲುವುದು ಖಚಿತ. ಆ ಮೇಲೆ ಬಿಜೆಪಿಗೆ ಬೇಡ ಎಂದರೂ ಕರೆದುಕೊಳ್ತಾರೆ. ನಾನೇ ಬಿಜೆಪಿಗೆ ಸೇರುತ್ತೇನೆ ಮತ್ತು ನರೇಂದ್ರ ಮೋದಿಯವರ(narendra modi) ಪರವಾಗಿ ಕೈ ಎತ್ತುತ್ತೇನೆ ಎಂದರು. ಜಗದೀಶ್ ಶೆಟ್ಟರ್(jagadish shettar) ಅವರು ಪಕ್ಷ ಬಿಟ್ಟು ಹೋಗಿ ಕಾಂಗ್ರೆಸ್ ಸೇರಿಕೊಂಡರು. ನಾನು ಎಂದು ಕೂಡ ಬಿಜೆಪಿ ಬಿಟ್ಟು ಹೋದವನಲ್ಲ. ಕಾಂಗ್ರೆಸ್ ಗೆ ನನ್ನ ಜನ್ಮದಲ್ಲಿ ಸೇರುವುದಿಲ್ಲ. ನನ್ನ ತಾಯಿ ಭಾರತೀಯ ಜನತಾ ಪಾರ್ಟಿ ಎಂದು ಮೊದಲಿನಿಂದಲೂ ಹೇಳಿಕೊಂಡು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (yediyurappa)ಅವರು ನನ್ನ ಮಗನಿಗೆ ಟಿಕೆಟ್ ಕೊಟ್ಟು ಪ್ರಚಾರ ಮಾಡಿ ಗೆಲ್ಲಿಸುವುದಾಗಿ ಮಾತು ಕೊಟ್ಟಿದ್ದರು. ಈದರೆ ಈಗ ಉದ್ದೇಶಪೂರ್ವಕವಾಗಿ ನನ್ನನ್ನು ಮೂಲೆಗುಂಪು ಮಾಡಲು ಪ್ರಯತ್ನಿಸಿದ್ದಾರೆ ಎಂದು ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಮಧುಗಿರಿ :ಆರೋಪಿDYSP ರಾಮಚಂದ್ರಪ್ಪಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ..!
ತುಮಕೂರು:ಮಹಿಳೆಯೊಂದಿಗೆ ಅಸಭ್ಯ ವರ್ತನೆ ಪ್ರಕರಣದಲ್ಲಿ ಮಧುಗಿರಿ ಡಿವೈಎಸ್ಪಿಗೆ ಮಧುಗಿರಿ JMFC ಕೋರ್ಟ್ 14 ದಿನಗಳ ಕಾಲ ನ್ಯಾಯಾಂಗ ಬಂಧನ ಘೋಷಿಸಿದೆ. ದೂರು ನೀಡಲು ಬಂದ ಮಹಿಳೆಯೊಂದಿಗೆ ಕಚೇರಿಯಲ್ಲಿಯೇ...
Read moreDetails