2024 ರ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಖಾಡ ರಂಗೇರಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಖಾಡದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪ ಈಗಾಗಲೇ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಏಪ್ರಿಲ್ 22 ರಂದು ಅಖಾಡದಲ್ಲಿ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದ್ದು, ಈಶ್ವರಪ್ಪ ಏನು ಮಾಡುತ್ತಾರೆ? ಎಂಬ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಜೋರಾಗಿದೆ.
ಇನ್ನು ಈಶ್ವರಪ್ಪ ನಾಮಪತ್ರ ಹಿಂಪಡೆಯದಿದ್ದರೇ, ಉಚ್ಛಾಟನೆ ನಿಶ್ಚಿತ ಎಂಬ ಮಾತುಗಳು ಕೂಡ ಆರಂಭವಾಗಿದೆ. ಈಗಾಗಲೇ ಈಶ್ವರಪ್ಪರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ವಾಗ್ದಾಳಿಯನ್ನು ನಡೆಸಿದ್ದಾರೆ. ಇತ್ತ ಬಿ.ವೈ. ವಿಜಯೇಂದ್ರರಿಂದ ಈಶ್ವರಪ್ಪರಿಗೆ ಖಡಕ್ ಸಂದೇಶವು ರವಾನೆಯಾಗಿದೆ.

ಇಷ್ಟೆಲ್ಲಾ ಆದ ಬಳಿಕವು ಲೋಕಸಭಾ ಅಖಾಡಕ್ಕೆ ಎಂಟ್ರಿ ಕೊಟ್ಟಿರುವ ಈಶ್ವರಪ್ಪ, ಏಪ್ರಿಲ್ 22 ರಾಜಕೀಯ ಭವಿಷ್ಯ ತೀರ್ಮಾನ ಮಾಡಲಿದ್ದಾರೆ ಎನ್ನಲಾಗಿದೆ.
ಒಂದು ನಾಮಪತ್ರ ಹಿಂಪಡೆಯದೇ ಇದ್ದರೇ, ಉಚ್ಛಾಟನೆ ನಿಶ್ಚಿತ. ನಾಮಪತ್ರ ಹಿಂಪಡೆದ್ರೆ ಬಿಜೆಪಿಯಲ್ಲಿ ಮುಂದುವರಿಕೆ ಸುಲಭ. ಸದ್ಯ ಏಪ್ರಿಲ್ 22 ರಂದು ಈಶ್ವರಪ್ಪ
ಉಚ್ಛಾಟನೆಯೋ, ನಾಮಪತ್ರ ವಾಪಸ್ಸೋ? ಮಿಲಿಯನ್ ಡಾಲರ್ ಪ್ರಶ್ನೆಗೆ ಸಿಗಬೇಕಿದೆ ಉತ್ತರ.