• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Monday, April 13, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

Eshwarappa Defends Statement Against Aajan : ಪ್ರತಿಭಟನೆಗೆಲ್ಲ ಹೆದರುವನಲ್ಲ: ಆಜಾನ್ ವಿರುದ್ಧ ಹೇಳಿಕೆಗೆ ಈಶ್ವರಪ್ಪ ಸಮರ್ಥನೆ

Any Mind by Any Mind
March 16, 2023
in Top Story, ಕರ್ನಾಟಕ, ಸಿನಿಮಾ
0
Eshwarappa Defends Statement Against Aajan : ಪ್ರತಿಭಟನೆಗೆಲ್ಲ ಹೆದರುವನಲ್ಲ: ಆಜಾನ್ ವಿರುದ್ಧ ಹೇಳಿಕೆಗೆ ಈಶ್ವರಪ್ಪ ಸಮರ್ಥನೆ
Share on WhatsAppShare on FacebookShare on Telegram

ಶಿವಮೊಗ್ಗ: ಮಾ.16: ಅಜಾನ್ ಕೂಗ್ತಾರೆ, ಅಲ್ಲಾ ಕಿವುಡಾಗಿದ್ದಾನ..? ಇದು ನಿಲ್ಲುತ್ತೆ ಎಂದು ಹೇಳಿಕೆ ನೀಡಿ ಮುಸ್ಲಿಂ ಸಮುದಾಯದ ಕೆಂಗಣ್ಣಿಗೆ ಗುರಿಯಾಗಿದ್ದ ಮಾಜಿ ಸಚಿವ ಹಾಗೂ ಶಿವಮೊಗ್ಗ ಶಾಸಕ ಕೆಎಸ್ ಈಶ್ವರಪ್ಪ ತಮ್ಮ ಹೇಳಿಕೆ ಪುನಃ ಸಮರ್ಥಿಸಿಕೊಂಡಿದ್ದಾರೆ. ಶಿವಮೊಗ್ಗದಲ್ಲಿಂದು ಮಾತನಾಡಿ, ಈ ತರಹ ನನ್ನ ವಿರುದ್ಧ ಪ್ರತಿಭಟನೆ ಮಾಡುವವರ ಬಗ್ಗೆ ನಾನು ತಲೆಕೆಡಿಸಿಕೊಳ್ಳಲ್ಲ ಎಂದರು.

ADVERTISEMENT

ಇದನ್ನ ಯಾವುದನ್ನು ಲೆಕ್ಕಕ್ಕೆ ಇಟ್ಟುಕೊಳ್ಳುವುದಿಲ್ಲ. ಜನಸಾಮಾನ್ಯರ ಮನಸ್ಸಿನಲ್ಲಿ ಏನಿದೆ..? ಅದನ್ನು ನಾನು ಬಾಯಿ ಬಿಟ್ಟು ಹೇಳುತ್ತೇನೆ. ಅನೇಕರಿಗೆ ಹೇಳುವುದಕ್ಕೆ ಆಗುವುದಿಲ್ಲ.‌ ನಾನು ಹೇಳುತ್ತೇನೆ. ಆಜಾನ್ ಕೂಗೋದ್ರಿಂದ ವಿದ್ಯಾರ್ಥಿಗಳಿಗೆ ಎಷ್ಟು ತೊಂದರೆ ಆಗುತ್ತದೆ ಎಂದು ಪೋಷಕರಿಗೆ ಗೊತ್ತಿದೆ. ವಿದ್ಯಾರ್ಥಿಗಳಿಗೂ ಗೊತ್ತಿದೆ. ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಈ ಆಜಾನ್ ತೊಂದರೆ ಏನು ಅಂತ ಗೊತ್ತು. ಯಾರೋ ಪ್ರತಿಭಟನೆ ಮಾಡ್ತಾರೆ ನನ ವಿರುದ್ಧ ಅಂತ ನಾನು ಬಹಿರಂಗವಾಗಿ ಹೇಳದೆ ಇರೋದಕ್ಕೆ ಆಗೋದಿಲ್ಲ. ಈ ಸಂಬಂಧ ಸುಪ್ರೀಂ ಕೋರ್ಟ್ ಜಡ್ಜ್ಮೆಂಟ್ ಕೂಡ ಕೊಟ್ಟಿದೆ. ಬೇರೆಯವರಿಗೆ ತೊಂದರೆ ಆಗದಂತೆ ಇವರು ಆಜಾನ್ ಕೂಗಬೇಕು ಎಂದು ಸೂಚಿಸಿದೆ. ರಾತ್ರಿ 10 ರಿಂದ ಬೆಳಗ್ಗೆ 6 ಗಂಟೆ ತನಕ ಆಜಾದ್ ಸಂಪೂರ್ಣ ನಿಷೇಧ ಇದೆ. ಇದಾಗ್ಯೂ ನಾನು ನೀಡಿರುವ ಹೇಳಿಕೆ ವಿರುದ್ಧ ಪ್ರತಿಭಟನೆ ಮಾಡುತ್ತಾರೆ ಎಂದರೆ ಏನು ಮಾಡಲು ಆಗುವುದಿಲ್ಲ. ಜನಸಾಮಾನ್ಯರ ಭಾವನೆಗಳನ್ನು ನಾನು ಹೇಳುವವನೇ. ಎಷ್ಟು ಪ್ರತಿಭಟನೆ ಮಾಡಿದರು ನಾನು ಎದುರಿಸಲು ಸಿದ್ಧ ಎಂದರು.

ಮೂಡಿಗೆರೆ ಕುಮಾರಸ್ವಾಮಿ ವಿರುದ್ಧ ಬಿಜೆಪಿ ಮುಖಂಡರ ಪ್ರತಿಭಟನೆ ಸಂಬಂಧ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಚುನಾಯಿತ ಪ್ರತಿನಿಧಿಗಳ ವಿರುದ್ಧ ಪ್ರತಿಭಟನೆಗೆ ಅವಕಾಶವಿದೆ. ಇಲ್ಲ ಅಂತ ನಾನು ಹೇಳೋದಿಲ್ಲ. ಅವಕಾಶ ಇಲ್ಲ ಅಂದರೆ ಅದನ್ನು ಪ್ರಜಾಪ್ರಭುತ್ವ ಎಂದು ಹೇಳಲಾಗದು. ಪ್ರತಿಭಟನೆ ಮಾಡಿರೋದು ಸರಿಯೋ ತಪ್ಪು ಎಂದು ಪ್ರತಿಭಟನೆ ಮಾಡಿದವರು ಯೋಜನೆ ಮಾಡಬೇಕು. ಸರಿ ಎನ್ನುವ ಹಾಗಿದ್ದರೆ ನಾವು ಎದುರಿಸಬೇಕು. ಸರಿಯಲ್ಲ ಎಂದರೆ ತಿದ್ದಿಕೊಳ್ಳಬೇಕು. ಇದೇ ವ್ಯವಸ್ಥೆ.! ಜನ ಪ್ರತಿನಿಧಿಗಳು ಮಾಡಿರುವ ಕೆಲಸ ಅಸಮಾಧಾನವಿದ್ದರೆ, ಸಹಜವಾಗಿ ಈ ತರಹ ಆಗುತ್ತದೆ. ಆಗ ನಾವು ಬೇಸರ ಮಾಡದೇ ಜನಗಳ ಬಳಿ ಹೋಗಿ ಕೂತುಕೊಳ್ಳಬೇಕು. ಅದನ್ನು ಸರಿ ಮಾಡುವ ಕೆಲಸವನ್ನು ಮಾಡಬೇಕು. ಇಲ್ಲವಾದರೆ ಯಾರೋ ಏನೋ ಹೇಳಿಕೊಂಡು ಹೋಗುತ್ತಾರೆ ಅದು ಹಾಗೆ ನಡೆದುಕೊಂಡು ಹೋಗುತ್ತದೆ. ಇನ್ನು ಕೆಲವರು ಬೇಕು ಎಂದೇ ಪ್ರತಿಭಟನೆ ಮಾಡುತ್ತಾರೆ. ಅದನ್ನು ಕೂಡ ನಾವು ಒಪ್ಪೋದಿಲ್ಲ. ಅವರು ಹೇಳಿದ ಹಾಗೆ ನಾವು ಕೇಳಲು ಆಗುವುದಿಲ್ಲ. ಎಂದರು.

ಸಚಿವ ವಿ ಸೋಮಣ್ಣ ವಿಚಾರದಲ್ಲಿ ಪ್ರತಿಕ್ರಿಯೆ ನೀಡಲು ಈಶ್ವರಪ್ಪ ಹಿಂದೆ ಮುಂದೆ ನೋಡಿದರು. ದೆಹಲಿಗೆ ಹೋಗಿ ಬಂದ ಮೇಲೆ ಮತ್ತೆ ಯಾಕೆ ನೀವು ಅದನ್ನು ಹಿಡ್ಕೊಳ್ತೀರ..? ಸಮಾಧಾಮ ಆಗಿದೆ ಎಂದು ಸೋಮಣ್ಣನೇ ಹೇಳಿದ್ದಾರೆ. ಭಾರತೀಯ ಜನತಾ ಪಾರ್ಟಿಯಲ್ಲಿ ಒಂದು ವ್ಯವಸ್ಥೆ ಇದೆ. ಯಾರಿಗೆ ಅಸಮಾಧಾನ ಇರುತ್ತೋ ಅವರನ್ನ ದೆಹಲಿಗೆ ಕರೆದು ಮಾತನಾಡಿ ಕಳಿಸುವ ರೂಢಿ ಇದೆ. ಸೋಮಣ್ಣ ಅವರಿಗೆ ಈಗ ಸಮಾಧಾನ ಆಗಿದೆ. ಮತ್ತೆ ಯಾಕೆ ಹೇಳುತ್ತೀರಿ ಎಂದು ಈಶ್ವರಪ್ಪ ಹರಿಹಾಯ್ದರು. ಅವರಿಗೆ ಇವರಿಗೆ ಬೇಸರ ಆಗ್ತಾ ಇರುತ್ತೆ, ಅದು ಸಹಜ‌. ಕೇಂದ್ರ ನಾಯಕರು ಮಾತನಾಡಿದ್ದಾರೆ ಹಾಗಾಗಿ ಗೊಂದಲಗಳಿಲ್ಲ ಎಂದು ಈಶ್ವರಪ್ಪ ಹೇಳಿದರು.

Tags: BJPBJP GovernmentCongress Partyks EswarappaprotestSDPIಎಚ್ ಡಿ ಕುಮಾರಸ್ವಾಮಿನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

Unfinished Akkamahadevi Putthali : ಪೂರ್ಣಗೊಳ್ಳದ ಅಕ್ಕಮಹಾದೇವಿ ಪುತ್ಥಳಿ ಉದ್ಘಾಟನೆಗೆ ಸಿಎಂ ಆಗಮನ : ಕಾಂಗ್ರೆಸ್ ಆಕ್ರೋಶ

Next Post

ಸ್ವಿಜರ್ಲ್ಯಾಂಡ್ನ ಜಿನಿವಾ ನಗರದಲ್ಲಿ “ಕಾಂತಾರ” ಸಿನಿಮಾ ಪ್ರದರ್ಶನ

Related Posts

ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ
ಕರ್ನಾಟಕ

ನಿಯಮಬಾಹಿರ ವಾಹನ ತಪಾಸಣೆ ನಿಲ್ಲಿಸಲು ಡಿಜಿಪಿಗೆ ಮನವಿ

by ಪ್ರತಿಧ್ವನಿ
April 13, 2026
0

ಬೆಂಗಳೂರು, ಏ. 09: ರಾಜ್ಯದಲ್ಲಿ ಗೃಹ ರಕ್ಷಕದಳ ಹಾಗೂ ಸಶಸ್ತ್ರ ಪೊಲೀಸ್ ಸಿಬ್ಬಂದಿಗಳಿಂದ ನಡೆಯುತ್ತಿರುವ ನಿಯಮಬಾಹಿರ ವಾಹನ ತಪಾಸಣೆಗಳನ್ನು ತಕ್ಷಣ ನಿಲ್ಲಿಸುವಂತೆ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ...

Read moreDetails
‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

‘ಕೋಟಿಗೊಬ್ಬ’ ರಿ-ರಿಲೀಸ್: ಮೊದಲ ದಿನದ ಕಲೆಕ್ಷನ್ ಎಷ್ಟು?

April 12, 2026
ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

ಪ್ರಚೋದನಕಾರಿ ಭಾಷಣ ಆರೋಪ: ಚಕ್ರವರ್ತಿ ಸೂಲಿಬೆಲೆ ವಿರುದ್ಧ  ಸುಮೊಟೊ ಪ್ರಕರಣ

April 12, 2026
ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

ಟಿಸಿಎಸ್ ಘಟಕದ ವಿರುದ್ಧ ಗಂಭೀರ ಆರೋಪ: ಅಂಡರ್‌ಕವರ್ ಕಾರ್ಯಾಚರಣೆಯಲ್ಲಿ ಪ್ರಕರಣ ಬಯಲು

April 12, 2026
ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

ಖ್ಯಾತ ಗಾಯಕಿ ಆಶಾ ಭೋಂಸ್ಲೆ ವಿಧಿವಶ

April 12, 2026
Next Post
ಸ್ವಿಜರ್ಲ್ಯಾಂಡ್ನ ಜಿನಿವಾ ನಗರದಲ್ಲಿ “ಕಾಂತಾರ” ಸಿನಿಮಾ ಪ್ರದರ್ಶನ

ಸ್ವಿಜರ್ಲ್ಯಾಂಡ್ನ ಜಿನಿವಾ ನಗರದಲ್ಲಿ "ಕಾಂತಾರ" ಸಿನಿಮಾ ಪ್ರದರ್ಶನ

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada