ಸ್ಯಾಂಡಲ್ವುಡ್ ನಟ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ “ಕಾಂತಾರ” ಚಿತ್ರ ಈಗಾಗಲೇ ವಿಶ್ವದಾದ್ಯಂತ ಜನಮನ್ನಣೆ ಪಡೆದಿದೆ. ಸ್ವಿಜರ್ಲ್ಯಾಂಡ್ ನ ಜಿನಿವಾ ನಗರದಲ್ಲಿ ಕಳೆದ ಕೆಲವು ದಿನಗಳಿಂದ ವಿಶ್ವಸಂಸ್ಥೆಯ ವಾರ್ಷಿಕ ಸಭೆ ನಡೆಯುತ್ತಿದೆ. ಇದರಲ್ಲಿ ಪಾಲ್ಗೊಂಡಿರುವ ರಿಷಬ್ ಶೆಟ್ಟಿಈಗಾಗಲೇ ಕೆಲವು ಉಪಯುಕ್ತ ವಿಷಯಗಳ ಬಗ್ಗೆ ಅಲ್ಲಿ ಮಾತನಾಡಿದ್ದಾರೆ. ಮಾರ್ಚ್ 17 ರ ಸಂಜೆ ಜಿನಿವಾದ ಕಾಲಮಾನದ ಪ್ರಕಾರ ಸಂಜೆ 6.30ಕ್ಕೆ “ಹಾಲ್ ಸಂಖ್ಯೆ 13ರ ಪಾಥೆ ಬಾಲೆಕ್ಸರ್ಟ್” ನಲ್ಲಿ “ಕಾಂತಾರ” ಚಿತ್ರ ಪ್ರದರ್ಶನವಾಗಲಿದೆ. “ಪರ್ಮನೆಂಟ್ ಮಿಷನ್ ಆಫ್ ಟು ದಿ ಯು ಎನ್” ಹಾಗೂ ಕೆಲವು ಅಂತರಾಷ್ಟ್ರೀಯ ಸಂಸ್ಥೆಗಳು(ಜಿನಿವಾ) ಆಯೋಜಿಸಿರುವ ಈ ಪ್ರದರ್ಶನದಲ್ಲಿ ರಿಷಬ್ ಶೆಟ್ಟಿ ಅವರು ಪಾಲ್ಗೊಳ್ಳಲಿದ್ದಾರೆ. ಪ್ರದರ್ಶನದ ನಂತರ ರಿಷಬ್ ಶೆಟ್ಟಿ, ಔತಣಕೂಟದಲ್ಲಿ ಭಾಗವಹಿಸಲಿದ್ದಾರೆ ಹಾಗೂ “ಕಾಂತಾರ” ಚಿತ್ರದ ಕುರಿತು ಮಾತನಾಡಲಿದ್ದಾರೆ. ಕನ್ನಡದ ಚಿತ್ರವೊಂದು ವಿಶ್ವದಾದ್ಯಂತ ಈ ರೀತಿ ಮೆಚ್ಚುಗೆಗೆ ಪಾತ್ರವಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ