ಯಾರೇ ಎಷ್ಟೇ ಸಮಾಧಾನ ಪಡಿಸಲು ಪ್ರಯತ್ನ ಪಟ್ಟೂ ಸುಮ್ಮನಾಗದ ಕೆಎಸ್ ಈಶ್ವರಪ್ಪ (K S Eshwarappa), ತಾವು ಶಿವಮೊಗ್ಗ (Shivamogga) ಕ್ಷೇತ್ರದಿಂದ ಪಕ್ಷೇತರರರಾಗಿ ಸ್ಪರ್ಧಿಸಿ ಶಿವಮೊಗ್ಗ ಮತ್ತು ಹಾವೇರಿ (haveri) ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳಿಗೆ ಪೆಟ್ಟು ನೀಡೋದು ಶತದಿದ್ಧ ಎಂಬಂತೆ ಯಾರ ಮಾತಿಗೂ ಕ್ಯಾರೆ ಎನ್ನದೇ ಚುನಾವಣೆಯ ಸಿದ್ಧತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಈ ಎಲ್ಲದರ ಮಧ್ಯೆ ಇದೀಗ ಅವರನ್ನ ಕಣದಿಂದ ಹಿಂದೆ ಸರಿಸುವ ಕೊನೆಯ ಪ್ರಯತ್ನವೊಂದು ನಡೆದಿದೆ. ಅದುವೆ ಅಮಿತ್ ಶಾ (amit shah) ಎಂಬ ಬ್ರಹ್ಮಾಸ್ತ್ರ !
ಸದ್ಯ 10 ಕ್ಷೇತ್ರಗಳ ಮಾಹಿತಿ ಪಡೆದು ಸಭೆ ನಡೆಸಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚೆನ್ನಪಟ್ಟಣದಲ್ಲಿ (hennapattana) ರೋಡ್ ಶೋ ನಡೆಸಲು ರಾಜ್ಯಕ್ಕೆ ಬಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಈಶ್ವರಪ್ಪನವರಿಗೆ ಕರೆ ಮಾಡಿ ಮಾತನಾಡಿದ್ದಾರೆ ಎನ್ನಲಾಗ್ತಿದೆ. ಪಕ್ಷ ನಿಮ್ಮನ್ನ ನೆನಪಿನಲ್ಲಿ ಇಟ್ಟುಕೊಂಡಿದೆ. ನಾವು ಮತ್ತೊಮ್ಮೆ ಮೋದಿಯನ್ನ (pm modi) ಪ್ರಧಾನಿ ಮಾಡಬೇಕಿದೆ. ಹೀಗಾಗಿ ನೀವು ದಯವಿಟ್ಟು ಕಣದಿಂದ ಹಿಂದೆ ಸರಿಯಿರಿ ಎಂದು ಹೇಳಿದ್ದಾರಂತೆ.
ಈ ಮೊದಲು ವಿಧಾನಸಭಾ ಟಿಕೆಟ್ ಕೈ ತಪ್ಪಿದಾಗಲೂ ಕೂಡ ಸ್ವತಃ ಪ್ರಧಾನಿ ನರೇಂದ್ರ ಮೋದಿ ಈಶ್ವರಪ್ಪನವರಿಗೆ ಕರೆ ಮಾಡಿ ಮಾತನಾಡಿದ್ದರು. ಇದೀಗ ಅಮಿತ್ ಶಾ ಈಶ್ವರಪ್ಪನವರ ಮನವೊಲಿಸಲು ಮುಂದಾಗಿದ್ದು, ಇನ್ನಾದ್ರೂ ಮುನಿಸು ಮರೆತು, ವರಿಷ್ಠರ ಮಾತಿಗೆ ಬೆಲೆಕೊಟ್ಟು ಈಶ್ವರಪ್ಪ ಕಣದಿಂದ ಹಿಂದೆ ಸರಿಯುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.