ರಾಜ್ಯದಲ್ಲಿರುವ ಕಾಂಗ್ರೆಸ್ ನೇತೃತ್ವದ ಸರ್ಕಾರವು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಆದರೆ ವಿರೋಧ ಪಕ್ಷಗಳು ಇದನ್ನು ವಿನಾಕಾರಣ ಟೀಕಿಸುತ್ತಿದೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಾಯಕರ ಹೇಳಿಕೆಗಳನ್ನು ಕೇಳಿದರೆ ದೇಶದಲ್ಲಿ ಜಾತಿ ಎಂಬುದೇ ಇಲ್ಲವೆಂಬ ಭಾವನೆ ಮೂಡುತ್ತದೆ.

ಸಮೀಕ್ಷೆ ಬಗ್ಗೆ ಸಚಿವರು ಮಾತನಾಡಿ, ಗಣತಿಯಲ್ಲಿ ಯಾವುದೇ ಗೊಂದಲಗಳಿಲ್ಲ. ಸಮೀಕ್ಷೆಯಲ್ಲಿ ಪಾಲ್ಗೊಳ್ಳುವುದು ಎಲ್ಲರ ಕರ್ತವ್ಯ, ಎಲ್ಲ ಸಮುದಾಯಕ್ಕೆ ಸೇರಿರುವವರು ಸಮೀಕ್ಷೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.