• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, November 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಪಿಎಫ್ ಹಿಂಪಡೆಯುವ ನಿಯಮಗಳಲ್ಲಿ ಮಹತ್ವದ ಬದಲಾವಣೆ | EPFO

ಪ್ರತಿಧ್ವನಿ by ಪ್ರತಿಧ್ವನಿ
October 11, 2026
in Top Story, ದೇಶ
0
EPFO Significant changes to PF withdrawal rules
Share on WhatsAppShare on FacebookShare on Telegram

ನವದೆಹಲಿ : ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ಚಂದಾದಾರರಿಗೆ ಕೇಂದ್ರ ಸರ್ಕಾರ ಮತ್ತು ಇಪಿಎಫ್ಒ ಮಹತ್ವದ ಮಾಹಿತಿಯನ್ನು ನೀಡಿದೆ. ಭವಿಷ್ಯ ನಿಧಿ (PF) ಹಣವನ್ನು ಹಿಂಪಡೆಯುವಾಗ ಅನ್ವಯವಾಗುವ ಟಿಡಿಎಸ್ (TDS) ಕಡಿತ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಜಾರಿಗೆ ತರಲಾಗಿದೆ. ಈ ಹಿಂದೆ ಟಿಡಿಎಸ್ ವಿನಾಯಿತಿ ಪಡೆಯಲು ಸಲ್ಲಿಕೆಯಾಗುತ್ತಿದ್ದ ಹಳೆಯ ಫಾರ್ಮ್‌ಗಳ ಬದಲಿಗೆ ಹೊಸ ಫಾರ್ಮ್ ಅನ್ನು ಪರಿಚಯಿಸಲಾಗಿದೆ.

ADVERTISEMENT

ಫಾರ್ಮ್ 15G ಹಾಗೂ 15H ಜಾಗಕ್ಕೆ ಫಾರ್ಮ್ 121 ಪ್ರವೇಶ

ಪಿಎಫ್ ಹಣ ವಿತ್‌ಡ್ರಾ ಮಾಡುವಾಗ ಟಿಡಿಎಸ್ ವಿನಾಯಿತಿ ಪಡೆಯಲು ಈ ಹಿಂದೆ 60 ವರ್ಷದೊಳಗಿನ ನೌಕರರು ಫಾರ್ಮ್ 15G ಹಾಗೂ ಹಿರಿಯ ನಾಗರಿಕರು ಫಾರ್ಮ್ 15H ಅನ್ನು ಸಲ್ಲಿಸಬೇಕಿತ್ತು. ಆದರೆ ಪ್ರಸ್ತುತ ಈ ಎರಡೂ ಫಾರ್ಮ್‌ಗಳ ಬದಲಾಗಿ ಕೇಂದ್ರ ಸರ್ಕಾರ ‘ಫಾರ್ಮ್ 121’ ಅನ್ನು ಜಾರಿಗೆ ತಂದಿದೆ. ಪಿಎಫ್ ಖಾತೆಯಿಂದ ಹಣ ಹಿಂಪಡೆಯುವಾಗ ಟಿಡಿಎಸ್ ಕಡಿತವಾಗದಂತೆ ತಡೆಯಲು ಇಪಿಎಫ್ಒ ಸದಸ್ಯರು ಇನ್ನು ಮುಂದೆ ಈ ಹೊಸ ಫಾರ್ಮ್ 121 ಅನ್ನು ಸಲ್ಲಿಸುವುದು ಕಡ್ಡಾಯವಾಗಿದೆ.

ಟಿಡಿಎಸ್ ಕಡಿತದ ನಿಯಮಗಳು ಮತ್ತು ಮಿತಿ

ಐದು ವರ್ಷಗಳ ನಿರಂತರ ಸೇವೆ ಪೂರ್ಣಗೊಳಿಸಿದ ನೌಕರರಿಗೆ ಪಿಎಫ್ ಹಣ ಹಿಂಪಡೆಯುವಾಗ ಯಾವುದೇ ಟಿಡಿಎಸ್ ಕಡಿತ ಅನ್ವಯಿಸುವುದಿಲ್ಲ. ಆದರೆ, ಐದು ವರ್ಷಗಳ ಸೇವಾ ಅವಧಿ ಪೂರ್ಣಗೊಳ್ಳುವ ಮೊದಲೇ ಪಿಎಫ್ ಖಾತೆಯಿಂದ 50 ಸಾವಿರ ರೂಪಾಯಿಗಿಂತ ಹೆಚ್ಚಿನ ಮೊತ್ತವನ್ನು ಹಿಂಪಡೆದರೆ ಟಿಡಿಎಸ್ ಕಡಿತವಾಗುತ್ತದೆ. ಹಿಂಪಡೆಯುವ ಮೊತ್ತ 50 ಸಾವಿರ ರೂಪಾಯಿಗಿಂತ ಕಡಿಮೆ ಇದ್ದರೆ ಯಾವುದೇ ಟಿಡಿಎಸ್ ಅನ್ವಯಿಸುವುದಿಲ್ಲ.

ಪ್ಯಾನ್ ಕಾರ್ಡ್ ಲಿಂಕ್ ಮತ್ತು ಟಿಡಿಎಸ್ ದರ

ಇಪಿಎಫ್ಒ ಪೋರ್ಟಲ್‌ನಲ್ಲಿ ಪ್ಯಾನ್ ಸಂಖ್ಯೆಯನ್ನು ಅಪ್‌ಡೇಟ್ ಮಾಡುವುದು ಅತ್ಯಂತ ಪ್ರಮುಖವಾಗಿದೆ. ಖಾತೆಗೆ ಪ್ಯಾನ್ ಲಿಂಕ್ ಆಗಿದ್ದರೆ ಶೇಕಡಾ 10 ರಷ್ಟು ಟಿಡಿಎಸ್ ಕಡಿತವಾಗಲಿದ್ದು, ಪ್ಯಾನ್ ಲಿಂಕ್ ಆಗಿರದಿದ್ದರೆ ಈ ಕಡಿತದ ಪ್ರಮಾಣ ಶೇಕಡಾ 20 ರವರೆಗೆ ಏರಿಕೆಯಾಗುವ ಸಾಧ್ಯತೆ ಇರುತ್ತದೆ.

5 ವರ್ಷಗಳ ಸೇವೆಗೂ ಮುನ್ನ ಟಿಡಿಎಸ್‌ನಿಂದ ವಿನಾಯಿತಿ ಯಾವಾಗ?

ಕೆಲವು ವಿಶೇಷ ಸಂದರ್ಭಗಳಲ್ಲಿ ಐದು ವರ್ಷಗಳ ಸೇವೆ ಪೂರ್ಣಗೊಳ್ಳದಿದ್ದರೂ ಟಿಡಿಎಸ್‌ನಿಂದ ವಿನಾಯಿತಿ ದೊರೆಯುತ್ತದೆ. ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ಬದಲಾದಾಗ ಪಿಎಫ್ ಹಣವನ್ನು ವರ್ಗಾವಣೆ (Transfer) ಮಾಡಿಕೊಂಡರೆ ಅದನ್ನು ನಿರಂತರ ಸೇವೆಯೆಂದು ಪರಿಗಣಿಸಲಾಗುತ್ತದೆ. ಇದಲ್ಲದೆ, ಗಂಭೀರ ಅನಾರೋಗ್ಯದ ಕಾರಣದಿಂದ ಹಣ ಹಿಂಪಡೆದಾಗ, ಕಂಪನಿ ಮುಚ್ಚಿದ ಕಾರಣದಿಂದ ಕೆಲಸ ಕಳೆದುಕೊಂಡಾಗ ಅಥವಾ ನೌಕರಿ ಕಳೆದುಕೊಂಡ ಸಂದರ್ಭದಲ್ಲಿ ಹಣ ಹಿಂಪಡೆದರೆ ಟಿಡಿಎಸ್ ಕಡಿತ ಅನ್ವಯಿಸುವುದಿಲ್ಲ.

ಟಿಡಿಎಸ್ ಕಡಿತವಾದರೆ ಮರುಪಾವತಿ ಹೇಗೆ?

ಒಂದು ವೇಳೆ ಪಿಎಫ್ ಹಣ ವಿತ್‌ಡ್ರಾ ಮಾಡುವಾಗ ಟಿಡಿಎಸ್ ಕಡಿತಗೊಂಡಿದ್ದರೆ ಆತಂಕಪಡುವ ಅಗತ್ಯವಿಲ್ಲ. ನೌಕರನ ಒಟ್ಟು ವಾರ್ಷಿಕ ಆದಾಯವು ಆದಾಯ ತೆರಿಗೆ ಮಿತಿಯೊಳಗೆ ಬರದಿದ್ದರೆ, ವಾರ್ಷಿಕ ಆದಾಯ ತೆರಿಗೆ ರಿಟರ್ನ್ಸ್ (ITR) ಸಲ್ಲಿಸುವ ಮೂಲಕ ಕಡಿತಗೊಂಡ ಹಣವನ್ನು ಮರುಪಾವತಿ (Refund) ರೂಪದಲ್ಲಿ ವಾಪಸ್ ಪಡೆಯಬಹುದು.

ಮೈಸೂರು ಕೇವಲ ಅರಮನೆಗಳ ನಗರವಲ್ಲ, ಅರಿವಿನ ಮನೆಗಳ ನಗರಿ : ಗವಿಮಠದ ಶ್ರೀಗಳ ಬಣ್ಣನೆ | Mysuru Dasara

Tags: changesEPFOPF withdrawal rulesSignificant
Previous Post

ಮೈಸೂರು ಕೇವಲ ಅರಮನೆಗಳ ನಗರವಲ್ಲ, ಅರಿವಿನ ಮನೆಗಳ ನಗರಿ : ಗವಿಮಠದ ಶ್ರೀಗಳ ಬಣ್ಣನೆ | Mysuru Dasara

Next Post

ಮೆಟ್ರೋ ಮತ್ತು ಇಂಟರ್ನೆಟ್ ಸೇವೆಗಳನ್ನು ಪುನರಾರಂಭಿಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ | Supreme Court

Related Posts

Awareness for Eco-friendly Diwali Celebrations in State Schools and Colleges: Education Department Order
Top Story

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಪರಿಸರ ಸ್ನೇಹಿ ದೀಪಾವಳಿ ಆಚರಣೆಗೆ ಜಾಗೃತಿ : ಶಿಕ್ಷಣ ಇಲಾಖೆ ಆದೇಶ

by Shivakumar
November 6, 2026
0

ಬೆಂಗಳೂರು: ದೀಪಾವಳಿ (Deepavali) ಹಬ್ಬದ ಸಂದರ್ಭದಲ್ಲಿ ಪಟಾಕಿಗಳ ಬಳಕೆಯಿಂದ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಲು ಹಾಗೂ ವಿದ್ಯಾರ್ಥಿಗಳಲ್ಲಿ ಪರಿಸರ ಸ್ನೇಹಿ ಹಬ್ಬದ ಮಹತ್ವವನ್ನು ತಿಳಿಸಲು ಶಾಲಾ ಶಿಕ್ಷಣ ಮತ್ತು...

Read moreDetails
Scouts and Guides Foundation Day: Flag sticker released by Higher Education Minister Basavaraj Rayareddy

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥಾಪನಾ ದಿನ: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರಿಂದ ಧ್ವಜ ಚೀಟಿ ಬಿಡುಗಡೆ

November 6, 2026
Recruitment for Kalyana Karnataka to be conducted via KEA instead of KPSC: Minister Priyank Kharge issues firm directive

ಕೆಪಿಎಸ್‌ಸಿ ಬದಲು ಕೆಇಎ ಮೂಲಕ ಕಲ್ಯಾಣ ಕರ್ನಾಟಕದ ನೇಮಕಾತಿ : ಸಚಿವ ಪ್ರಿಯಾಂಕ್ ಖರ್ಗೆ ಖಡಕ್ ಸೂಚನೆ

November 6, 2026
Blending of up to 31.2% ethanol in petrol: Karnataka government seeks clarification from the Centre

ಪೆಟ್ರೋಲ್‌ನಲ್ಲಿ ಶೇ. 31.2 ರವರೆಗೆ ಎಥೆನಾಲ್ ಮಿಶ್ರಣ : ಕೇಂದ್ರದಿಂದ ವಿವರಣೆ ಕೇಳಿದ ಕರ್ನಾಟಕ ಸರ್ಕಾರ

November 6, 2026
Minister Shivalinge Gowda inaugurates the Hasanamba cooking competition and distributes prizes

ಹಾಸನಾಂಬ ಅಡುಗೆ ಸ್ಪರ್ಧೆಗೆ ಸಚಿವ ಶಿವಲಿಂಗೇಗೌಡ ಅವರಿಂದ ಚಾಲನೆ, ಬಹುಮಾನ ವಿತರಣೆ

November 6, 2026
Next Post
Resume Metro and internet services: Supreme Court's significant directive to the Central Government

ಮೆಟ್ರೋ ಮತ್ತು ಇಂಟರ್ನೆಟ್ ಸೇವೆಗಳನ್ನು ಪುನರಾರಂಭಿಸಿ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ | Supreme Court

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada