ರಾಜ್ಯ ಸರ್ಕಾರವು ಸೆಪ್ಟಂಬರ್ 22 ರಿಂದ ನಡೆಸಲಿರುವ ಜನಗಣತಿ ಸಮೀಕ್ಷೆಯ ಸಂದರ್ಭದಲ್ಲಿ ಧರ್ಮ ಕಾಲಂ ನಲ್ಲಿ : “ಹಿಂದೂ” ಎಂದು ನಮೂದಿಸಬೇಕು. ಜಾತಿ ಕಾಲಂ ನಲ್ಲಿ : “ಅವರವರ” ಸಮುದಾಯದ ಹೆಸರುಗಳನ್ನು ನಮೂದಿಸಬೇಕು. (ಉದಾ: ದೇವಾಂಗ / ತೊಗಟವೀರ / ಕುರುಹಿನ ಶೆಟ್ಟಿ / ಪದ್ಮಶಾಲಿ / ಪಟ್ಟಸಾಲಿ / ಹಟಗಾರ / ಸೆಂಗುಂದರ್) ಕುಲ ಕಸುಬು ಕಾಲಂ ನಲ್ಲಿ :“ನೇಕಾರಿಕೆ” ಎಂದು ನಮೂದಿಸಬೇಕು ಎಂದು ನಿರ್ಧರಿಸಿದ್ದಾಗಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಎಸ್. ಸೋಮಶೇಖರ್ ಅವರು ತಿಳಿಸಿದ್ದಾರೆ.

ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ವೈ.ಹೆಚ್. ವೆಂಕಟರಮಣಪ್ಪ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರ್ಕಾರದಿಂದ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ದಿನಾಂಕ: 22.09.2025 ರಿಂದ 07.10.2025 ರವರೆಗೆ ನಡೆಸುತ್ತಿರುವುದರ ಕುರಿತು ಚರ್ಚಿಸಲು ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟ (ರಿ), ಇವರ ವತಿಯಿಂದ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು.
ಸಭೆಯಲ್ಲಿ ನೇಕಾರ ಸಮುದಾಯಗಳ ಎಲ್ಲಾ ಒಳ ಪಂಗಡಗಳ ಮಠಾದೀಶರುಗಳಾದ ಶ್ರೀಶ್ರೀಶ್ರೀ ದಯಾನಂದಪುರಿ ಮಹಾಸ್ವಾಮೀಜಿಯವರು, ಶ್ರೀಶ್ರೀಶ್ರೀ ಬಸವರಾಜ ಪಟ್ಟದಾರ್ಯ ಸ್ವಾಮೀಜಿಯವರು, ಶ್ರೀಶ್ರೀಶ್ರೀ ಪ್ರಭುಲಿಂಗ ಸ್ವಾಮೀಜಿಯವರು, ಶ್ರೀಶ್ರೀಶ್ರೀ ದಿವ್ಯಾನಂದಗಿರಿ ಸ್ವಾಮೀಜಿಯವರು, ಶ್ರೀಶ್ರೀಶ್ರೀ ಶಿವಶಂಕರ ಸ್ವಾಮೀಜಿಯವರು, ಶ್ರೀಶ್ರೀಶ್ರೀ ಈಶ್ವರಾನಂದ ಸ್ವಾಮೀಜಿಯವರು, ಹಾಗೂ ಶ್ರೀ ಮಂಜುನಾಥ ಸ್ವಾಮೀಜಿಯವರುಗಳು ದಿವ್ಯ ಸಾನಿಧ್ಯವನ್ನು ವಹಿಸಿದ್ದರು.

ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷರಾದ ಬಿ.ಎಸ್. ಸೋಮಶೇಖರ್ ರವರ ಅಧ್ಯಕ್ಷತೆಯಲ್ಲಿ ಈ ಸ¨ ನಡೆಯಿತು. ಸೋಮಶೇಖರ್ ಅವರು ಮಾತನಾಡುತ್ತ, ಕರ್ನಾಟಕ ನೇಕಾರ ಸಮುದಾಯದ ಒಳ ಪಂಗಡಗಳಾದ ದೇವಾಂಗ, ತೊಗಟವೀರ, ಕುರುಹಿನಶೆಟ್ಟಿ, ಪದ್ಮಶಾಲಿ, ಪಟ್ಟಸಾಲಿ, ಹಟಗಾರ, ಕೋಷ್ಠಿ ಸೆಂಗುಂದರ್ ಮುಂತಾದ ಜಾತಿಗಳನ್ನು ಒಳಗೊಂಡಿರುವ ಹಿಂದಿನಿಂದಲೂ ನೇಕಾರಿಕೆಯನ್ನೇ ಕುಲವೃತ್ತಿಯನ್ನಾಗಿ ಮಾಡಿಕೊಂಡಿರುವ ಪಂಗಡಗಳ ಬಾಂಧವರು ಯಾವ ರೀತಿಯಲ್ಲಿ ಜನಗಣತಿಯ ಫಾರಂ ಅನ್ನು ತುಂಬಬೇಕು ಎಂಬುದನ್ನು ಚರ್ಚಿಸಿ ಅಂತಿಮವಾಗಿ ಸ್ವಾಮೀಜಿಗಳೆಲ್ಲರೂ ತೆಗೆದುಕೊಳ್ಳುವ ನಿರ್ಣಯದಂತೆ ನಡೆದುಕೊಳ್ಳಲಾಗುವುದು ಎಂದರು.

ಈ ಸಭೆÉಯಲ್ಲಿ ಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಸಂಸ್ಥಾಪಕ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ, ಕರ್ನಾಟಕ ರಾಜ್ಯ ದೇವಾಂಗ ಸಂಘದ ರಾಜ್ಯಾಧ್ಯಕ್ಷ ರವಿಂದ್ರ ಪಿ. ಕಲಬುರ್ಗಿ, ಸ್ವಕುಳಸಾಲಿ ಸಮಾಜದ ರಾಜ್ಯಾಧ್ಯಕ್ಷ ಚಂದ್ರಶೇಖರ ಭಂಡಾರಿ, ಪಟ್ಟಸಾಲಿ ಸಾಮಾಜದ ಅಧ್ಯಕ್ಷ ಶಿವಪ್ಪ ಶೆಟ್ಟರು, ಕುರುಹಿನ ಶೆಟ್ಟಿ ಸಮಾಜದ ಅಧ್ಯಕ್ಷ ಲಿಂಗೇಶ್ವg, ಪದ್ಮಶಾಲಿ ಸಮಾಜದ ಅಧ್ಯಕ್ಷ ಬಲಭದ್ರ ಜಗದೀಶ, ಹಟಗಾರ ಸಮಾಜದ ಅಧ್ಯಕ್ಷ ಸುರೇಶ ಭದ್ರಣ್ಣವರ, ಶೆಟ್ಟಿಗಾರ್ ಸಮಾಜದ ಅಧ್ಯಕ್ಷ ದಯಾನಂದ ಶೆಟ್ಟಿಗಾರ, ಸೆಂಗುಂದರ ಸಮಾಜದ ಅಧ್ಯಕ್ಷ ಪಿಚಂಡಿ, ಶ್ರೀ ಗಾಯತ್ರಿ ಪೀಠ ಮಹಾಸಂಸ್ಥಾನ ಟ್ರಸ್ಟ್‍ನ ಅಧ್ಯಕ್ಷರಾದ ಪಿ.ಆರ್. ಗಿರಿಯಪ್ಪ, ಕರ್ನಾಟಕ ರಾಜ್ಯ ದೇವಾಂಗ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ರಾಜೇಶ್, ದೇವಾಂಗ ಸೇವಾ ಸಮಾಜ ಕರ್ನಾಟಕ, ವಸಂತಪುರ, ಬೆಂಗಳೂರು ಇದರ ಅಧ್ಯಕ್ಷ ಎಂ.ಪಿ. ಉಮಾಶಂಕರ್, ಮುರುಗೇಶ್ ಕಟ್ಲಿಮಟ್ಟಿ, ಉಪಾಧ್ಯಕ್ಷರು, ಡಿ.ಸಿ.ಸಿ. ಬ್ಯಾಂಕ್, ಬಾಗಲಕೋಟೆ, ಎಂ. ಜಗದೀಶ್, ದೇವಾಂಗ ಸಮಾಜದ ರಾಷ್ಟ್ರೀಯ ಅಧ್ಯಕ್ಷರಾದ ಅರುಣ್ ವರೋಡೆ, ಮಹಾರಾಷ್ಟ್ರ ಇನ್ನೂ ಮುಂತಾದ ನೇಕಾರ ಸಮುದಾಯದ ಮುಖಂಡರು, ಹಿರಿಯರು, ಮಹಿಳಾ ಸಂಘದ ಕಾರ್ಯಕರ್ತರುಗಳು ಆಗಮಿಸಿದ್ದರು. ಪ್ರಮುಖವಾಗಿ ನೇಕಾರ ಸಮುದಾಯಗಳ ಪತ್ರಿಕಾ ಮಾಧ್ಯಮ ಬಾಂಧವರು ಆಗಮಿಸಿದ್ದರು.

ಜನಗಣತಿಯ ಅನುಸೂಚನೆಯ ಫಾರಂನಲ್ಲಿ ನೇಕಾರ ಸಮುದಾಯಗಳ ಅಡಿಯಲ್ಲಿ ಬರುವ ಎಲ್ಲಾ ಜಾತಿಗಳ ಕುಟುಂಬ ಸದಸ್ಯರುಗಳು ಯಾವ ರೀತಿಯಲ್ಲಿ ಮಾಹಿತಿಯನ್ನು ನೀಡಬೇಕು ಎಂಬುದರು ಕುರಿತು ಸುದೀರ್ಘವಾದ ಚರ್ಚೆ ನಡೆಯಿತು ಎಂದು ವಿವರಿಸಿದರು. ಸದಸ್ಯರು ಯಾವುದೇ ವೃತ್ತಿಯನ್ನು ಮಾಡುತ್ತಿದ್ದರೂ ಸಹ “ನೇಕಾರಿಕೆ” ಎಂದೇ ನಮೂದಿಸಬೇಕು. ನೇಕಾರ ಸಮುದಾಯದ ಎಲ್ಲಾ ಮಠಾಧೀಶರುಗಳು ಒಮ್ಮತದಿಂದ ತೆಗೆದುಕೊಂಡ ಈ ನಿರ್ಣಯಕ್ಕೆ ಸಭೆಯು ಒಮ್ಮತದಿಂದ ಒಪ್ಪಿಗೆಯನ್ನು ಸೂಚಿಸಿತು ಎಂದರು.









