![](https://pratidhvani.com/wp-content/uploads/2024/07/vijaykarnataka-5-1024x576.webp)
ಫ್ರಾನ್ಸ್, ಬೆಲ್ಜಿಯಂ, ಹಂಗರಿ, ಬಲ್ಗೇರಿಯಾ, ಇಟಲಿ ಮುಂತಾದ ಯುರೋಪಿಯನ್ ದೇಶಗಳಲ್ಲಿ ಬಲಪಂಥೀಯ, ತೀವ್ರವಾದಿ ಬಲಪಂಥೀಯ ಸರ್ಕಾರಗಳು ಅಧಿಕಾರಕ್ಕೆ ಬರುತ್ತಿದ್ದಾರೆ. ಇಂಗ್ಲೆಂಡ್ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಲೇಬರ್ ಪಕ್ಷದ ಪ್ರಧಾನಿ ಅಭ್ಯರ್ಥಿ ಕೇರ್ ಸ್ಟಾರ್ಮರ್ ಬಲಪಂಥೀಯ ಚಿಂತನೆಗಳನ್ನು ಬೆಂಬಲಿಗ, ಪ್ಯಾಲೆಸ್ತೀನ್ ವಿರುದ್ಧ ಇಸ್ರೇಲ್ ನಡೆಸಿದ ನರಮೇಧವನ್ನು ಸಮರ್ಥಿಸಿಕೊಂಡವರು.
![](https://pratidhvani.com/wp-content/uploads/2024/07/WhatsApp-Image-2024-07-05-at-21.25.09-805x1024.jpeg)
28 ಮೇ 2024ರಂದು ‘ನಾನು ಲೇಬರ್ ಪಕ್ಷವನ್ನು ಬದಲಾಯಿಸಿದ್ದೇನೆ, ನಂತರ ಬ್ರಿಟನ್ ನ್ನು ಬದಲಾಯಿಸುವೆ’ ಎಂದು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು
ರೇಲ್ವೆ, ಮೇಲ್, ಇಂಧನ, ಜನ ಸಂಪನ್ಮೂಲ ಎಲ್ಲವನ್ನೂ ರಾಷ್ಟ್ರೀಕರಣಗೊಳಿಸಲಾಗಿವುದು ಎಂದು ಹೇಳುತ್ತಿದ್ದ ಲೇಬರ್ ಪಕ್ಷದ ಪ್ರಣಾಳಿಕೆಯಲ್ಲಿ ಕೇವಲ ರೈಲ್ವೆಯನ್ನು ಮಾತ್ರ ರಾಷ್ಟ್ರೀಕರಣ ಗೊಳಿಸಲಾಗುವುದು ಎಂದು ಹೇಳಿಕೊಂಡಿದ್ದರು. ಅತಿ ಶ್ರೀಮಂತರ ಮೇಲೆ ತೆರಿಗೆ ಹೆಚ್ಚಿಸುವುದಾಗಿ ಹೇಳಿಕೊಂಡಿದ್ದ ಕಾರ್ಬಿನ್ ರ ಲೇಬರ್ ಪಕ್ಷವು ಸ್ಟಾರ್ಮರ್ ಕಾಲದಲ್ಲಿ ಈ ನಿಲುವಿನಿಂದ ಹಿಂದೆ ಸರಿಯಿತು. ಇವರು ಲೇಬರ್ ಪಕ್ಷದಿಂದ ಎಡಪಂಥೀಯ ಅಭ್ಯರ್ಥಿಗಳನ್ನು ಹೊರ ತಳ್ಳತೊಡಗಿದರು. ಇಸ್ರೇಲ್ ನಡೆಸಿದ ನರಮೇಧವನ್ನು ಅದರ ಹಕ್ಕು ಎಂದು ಹೇಳಿದ ಸ್ಟಾರ್ಮರ್ ಗೆ ಯಾವುದೇ ಸೈದ್ಧಾಂತಿಕ ಬದ್ದತೆಯಿಲ್ಲ.
ಹೀಗಾಗಿ ಲೇಬರ್ ಪಕ್ಷ ಗೆಲುವು ಸಾಧಿಸಿದರೂ ಅದು ಸ್ಟಾರ್ಮರ್ ನೇತೃತ್ವದ ಬಲಪಂಥೀಯ ಸರ್ಕಾರವಾಗಲಿದೆ, ಅನುಮಾನವೇ ಬೇಡ
![](https://pratidhvani.com/wp-content/uploads/2024/07/WhatsApp-Image-2024-07-05-at-21.35.53.jpeg)
- ಬಿ. ಶ್ರೀಪಾದ ಭಟ್