ಭಾರತ(India) ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ(Test Series) 4ನೇ ಟೆಸ್ಟ್ ಪಂದ್ಯಕ್ಕೆ ಇಂಗ್ಲೆಂಡ್(England) ತಂಡವನ್ನು ಪ್ರಕಟಿಸಲಾಗಿದ್ದು, ಗೆಲುವಿನ ಒತ್ತಡದಲ್ಲಿರುವ ಆಂಗ್ಲರ ಪಡೆ ಎರಡು ಪ್ರಮುಖ ಬದಲಾವಣೆಯೊಂದಿಗೆ ಕಣಕ್ಕಿಳಿಯಲಿದೆ.
ಉಭಯ ತಂಡಗಳ ನಡುವಿನ 4ನೇ ಟೆಸ್ಟ್ ಪಂದ್ಯ(Test Match) ರಾಂಚಿ(Ranchi)ಯಲ್ಲಿ ಫೆ.23ರ ಶುಕ್ರವಾರ(Friday) ಆರಂಭಗೊಳ್ಳಿದ್ದು, ಪಂದ್ಯಕ್ಕಾಗಿ ಭರ್ಜರಿ ತಯಾರಿ ಮಾಡಿಕೊಂಡಿರುವೆ ಬೆನ್ ಸ್ಟೋಕ್ಸ್(Ben Stokes) ಸಾರಥ್ಯದ ಇಂಗ್ಲೆಂಡ್ ತನ್ನ ಪ್ಲೇಯಿಂಗ್ ಇಲವೆನ್ ಪ್ರಕಟಿಸಿದೆ. 4ನೇ ಟೆಸ್ಟ್‌ಗಾಗಿ ಓಲ್ಲಿ ರಾಬಿನ್ಸನ್ ಹಾಗೂ ಶೊಯೆಬ್ ಬಶೀರ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದ್ದು, ಮಾರ್ಕ್ ವುಡ್ ಹಾಗೂ ರೆಹಾನ್ ಅಹ್ಮದ್ ಅವರುಗಳನ್ನು ತಂಡದಿಂದ ಕೈಬಿಟ್ಟಿದೆ.

ಐದು ಪಂದ್ಯಗಳ(Five Matches) ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಇಂಗ್ಲೆಂಡ್ ನಂತರದಲ್ಲಿ ನಡೆದ ಎರಡು ಪಂದ್ಯಗಳಲ್ಲಿ ಸೋಲಿನ ಆಘಾತ ಕಂಡಿದೆ. ಹೀಗಾಗಿ 5 ಪಂದಗಳ ಸರಣಿಯಲ್ಲಿ 2-1ರ ಹಿನ್ನಡೆಯೊಂದಿಗೆ 4ನೇ ಟೆಸ್ಟ್‌ನಲ್ಲಿ ಕಣಕ್ಕಿಳಿಯುತ್ತಿರುವ ಇಂಗ್ಲೆಂಡ್(England) ಗೆಲುವಿನ ಒತ್ತಡದಲ್ಲಿದೆ.
4ನೇ ಟೆಸ್ಟ್‌ಗೆ ಇಂಗ್ಲೆಂಡ್ ತಂಡ:
ಝಾಕ್ ಕ್ರಾಲಿ, ಬೆನ್ ಡಕೆಟ್, ಓಲ್ಲಿ ಪಾಪ್, ಜೋ ರೂಟ್, ಜಾನಿ ಬೈರ್ಸ್ಟೋವ್, ಬೆನ್ ಸ್ಟೋಕ್ಸ್, ಬೆನ್ ಫೋಕ್ಸ್, ಟಾಮ್ ಹಾರ್ಟ್ಲಿ, ಓಲ್ಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್, ಶೊಯೆಬ್ ಬಶೀರ್.
#TeamIndia #England #BenStokes #TestSeries #4thTest #Ranchi