• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, July 23, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಚೆನ್ನಮ್ಮ ಸಮಾಧಿ ಬಳಿ ಭಾವುಕ ಮಾತು; ಒಂದೂವರೆ ವರ್ಷದ ನೋವು ಹಂಚಿಕೊಂಡ ಕುಮಾರಸ್ವಾಮಿ

ಪ್ರತಿಧ್ವನಿ by ಪ್ರತಿಧ್ವನಿ
July 22, 2026
in Top Story
0
ಚೆನ್ನಮ್ಮ ಸಮಾಧಿ ಬಳಿ ಭಾವುಕ ಮಾತು; ಒಂದೂವರೆ ವರ್ಷದ ನೋವು ಹಂಚಿಕೊಂಡ ಕುಮಾರಸ್ವಾಮಿ
Share on WhatsAppShare on FacebookShare on Telegram

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚೆನ್ನಮ್ಮ ಅವರ ಸಮಾಧಿ ಬಳಿ ಮೂರನೇ ದಿನದ ಹಾಲು-ತುಪ್ಪ ಕಾರ್ಯದ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಭಾವುಕರಾಗಿ ಮಾತನಾಡಿದರು. ಕಳೆದ ಒಂದೂವರೆ ವರ್ಷಗಳಿಂದ ತಾಯಿ ಅನುಭವಿಸಿದ ಮಾನಸಿಕ ಹಾಗೂ ದೈಹಿಕ ನೋವನ್ನು ನೆನೆದು ಕಣ್ಣೀರಿಟ್ಟ ಅವರು, ಕುಟುಂಬದಲ್ಲಿ ನಡೆದ ಕೆಲವು ಘಟನೆಗಳು ತಾಯಿಗೆ ತೀವ್ರ ಆಘಾತ ಉಂಟುಮಾಡಿದ್ದವು ಎಂದು ಹೇಳಿದರು.

ADVERTISEMENT

ಪರೋಕ್ಷವಾಗಿ ಪ್ರಜ್ವಲ್ ರೇವಣ್ಣ ಪ್ರಕರಣವನ್ನು ಉಲ್ಲೇಖಿಸಿದ ಕುಮಾರಸ್ವಾಮಿ, “ಅವನನ್ನು ಯಾವಾಗ ಕರೆದುಕೊಂಡು ಬರ್ತೀಯಪ್ಪ?” ಎಂದು ತಾಯಿ ಪದೇ ಪದೇ ಕೇಳುತ್ತಿದ್ದರು. ಆ ಪ್ರಶ್ನೆ ಇಂದಿಗೂ ತಮ್ಮ ಮನಸ್ಸನ್ನು ಕಾಡುತ್ತಿದೆ ಎಂದು ಭಾವುಕರಾದರು.

“ತಾಯಿ ಕಳೆದ ಒಂದೂವರೆ ವರ್ಷಗಳಿಂದ ಹಾಸಿಗೆ ಹಿಡಿದಿದ್ದರು. ನೆನಪಿನ ಶಕ್ತಿ ಕುಂದಿ, ಯಾರನ್ನೂ ಸರಿಯಾಗಿ ಗುರುತಿಸಲಾಗದ ಸ್ಥಿತಿಯಲ್ಲಿದ್ದರು. ಆದರೂ ಮನೆಗೆ ಬಂದ ಪ್ರತಿಯೊಬ್ಬರಿಗೂ ‘ಊಟ ಮಾಡಿದೀರಾ? ಊಟ ಮಾಡಿ’ ಎನ್ನುವುದು ಅವರ ಬಾಯಿಂದ ಹೊರಬರುವ ಮೊದಲ ಮಾತಾಗಿತ್ತು. ಅಷ್ಟೇ ಅಲ್ಲ, ನನ್ನನ್ನು ಮತ್ತು ನನ್ನ ಇಬ್ಬರು ತಂಗಿಯರನ್ನು ಮಾತ್ರ ಅವರು ಕೊನೆಯವರೆಗೂ ಗುರುತಿಸುತ್ತಿದ್ದರು,” ಎಂದು ನೆನಪಿಸಿಕೊಂಡರು.

HDKumaraswamy on Chennamma: ಜನರು ತೋರಿಸಿದ ಪ್ರೀತಿ ಗೌರವದ ಬಗ್ಗೆ ಭಾವುಕರಾಗಿ ಮಾತಾಡಿದ ಕುಮಾರಣ್ಣ #pratidhvani

ಕುಟುಂಬದ ಸಂಕಷ್ಟದ ದಿನಗಳಲ್ಲೂ ತಾಯಿ ಎಲ್ಲರ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಅವರ ಅಗಲಿಕೆ ನಮ್ಮ ಕುಟುಂಬಕ್ಕೆ ತುಂಬಲಾರದ ನಷ್ಟವಾಗಿದೆ. ತಾಯಿಯ ಆಶೀರ್ವಾದ ಮತ್ತು ಅವರು ಬೋಧಿಸಿದ ಮೌಲ್ಯಗಳನ್ನು ಜೀವನದುದ್ದಕ್ಕೂ ಪಾಲಿಸಿಕೊಂಡು ಜನಸೇವೆ ಮುಂದುವರಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.

ಚೆನ್ನಮ್ಮ ಅವರ ಸಮಾಧಿ ಬಳಿ ವೇದಮಂತ್ರಗಳ ನಡುವೆ ಹಾಲು-ತುಪ್ಪ ಕಾರ್ಯ ನೆರವೇರಿತು. ದೇವೇಗೌಡ ಕುಟುಂಬದ ಸದಸ್ಯರು, ಬಂಧು-ಬಳಗ ಹಾಗೂ ಜೆಡಿಎಸ್ ಮುಖಂಡರು ಪೂಜೆಯಲ್ಲಿ ಭಾಗವಹಿಸಿ ಅವರಿಗೆ ಭಕ್ತಿಪೂರ್ವಕ ನಮನ ಸಲ್ಲಿಸಿದರು.

Tags: ChennammaChennamma CremationChennamma FuneralChennamma SamadhiDeve Gowda FamilyEmotional momentHassan NewsHD Deve Gowdahd kumaraswamy newsJDSkannada newskarnataka newsKarnataka PoliticsKumaraswamy Emotional Speechpolitical newsPrajwal Revanna
Previous Post

‘ಟಾಕ್ಸಿಕ್’ ಬಗ್ಗೆ ಯಶ್ ಅಭಿಮಾನಿಗಳಿಗೆ ನಿರ್ಮಾಪಕರಿಂದ ಬಿಗ್ ಅಪ್‌ಡೇಟ್!

Next Post

ಯಾರು ಈ ಅಭಿಜೀತ್ ದಿಪ್ಕೆ? ಕೆಲವೇ ದಿನಗಳಲ್ಲಿ ವೈರಲ್ ಆದ ‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದಿರುವ ಯುವಕನ ಕಥೆ ಇಲ್ಲಿದೆ

Related Posts

ಯಾರು ಈ ಅಭಿಜೀತ್ ದಿಪ್ಕೆ? ಕೆಲವೇ ದಿನಗಳಲ್ಲಿ ವೈರಲ್ ಆದ ‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದಿರುವ ಯುವಕನ ಕಥೆ ಇಲ್ಲಿದೆ
Top Story

ಯಾರು ಈ ಅಭಿಜೀತ್ ದಿಪ್ಕೆ? ಕೆಲವೇ ದಿನಗಳಲ್ಲಿ ವೈರಲ್ ಆದ ‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದಿರುವ ಯುವಕನ ಕಥೆ ಇಲ್ಲಿದೆ

by ಪ್ರತಿಧ್ವನಿ
July 22, 2026
0

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ 'ಕಾಕ್ರೋಚ್ ಜನತಾ ಪಾರ್ಟಿ' (Cockroach Janata Party - CJP) ಹಿಂದೆ ನಿಂತಿರುವ ಪ್ರಮುಖ ವ್ಯಕ್ತಿ ಅಭಿಜೀತ್...

Read moreDetails
ಕಾಂಗ್ರೆಸ್ ಪಕ್ಷದ ಕಚೇರಿ ರಕ್ಷಣೆಗಾಗಿ ಕಾರ್ಯಕರ್ತರು ಪ್ರಾಣತ್ಯಾಗ ಮಾಡಲು ಸಿದ್ಧ-ಬಿ.ಕೆ ಹರಿಪ್ರಸಾದ್

ಕಾಂಗ್ರೆಸ್ ಪಕ್ಷದ ಕಚೇರಿ ರಕ್ಷಣೆಗಾಗಿ ಕಾರ್ಯಕರ್ತರು ಪ್ರಾಣತ್ಯಾಗ ಮಾಡಲು ಸಿದ್ಧ-ಬಿ.ಕೆ ಹರಿಪ್ರಸಾದ್

July 22, 2026
ಕಾವೇರಿ ನೀರು ಹಂಚಿಕೆ: ಮಳೆ ಸ್ಥಿತಿ ನೋಡಿದ ಬಳಿಕವೇ ಅಂತಿಮ ನಿರ್ಧಾರ

ಕಾವೇರಿ ನೀರು ಹಂಚಿಕೆ: ಮಳೆ ಸ್ಥಿತಿ ನೋಡಿದ ಬಳಿಕವೇ ಅಂತಿಮ ನಿರ್ಧಾರ

July 22, 2026
ನೀಟ್ ಪರೀಕ್ಷೆ ಅಕ್ರಮ: ಬಿಜೆಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ

ನೀಟ್ ಪರೀಕ್ಷೆ ಅಕ್ರಮ: ಬಿಜೆಪಿ ಕಚೇರಿಗೆ ಕಾಂಗ್ರೆಸ್ ಕಾರ್ಯಕರ್ತರ ಮುತ್ತಿಗೆ

July 22, 2026
ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಗಣನೀಯ ಏರಿಕೆ : ಸಚಿವ ಜಾರ್ಜ್‌ ಬಿಗ್‌ ಅಪ್ಡೇಟ್..!

ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದನೆ ಗಣನೀಯ ಏರಿಕೆ : ಸಚಿವ ಜಾರ್ಜ್‌ ಬಿಗ್‌ ಅಪ್ಡೇಟ್..!

July 22, 2026
Next Post
ಯಾರು ಈ ಅಭಿಜೀತ್ ದಿಪ್ಕೆ? ಕೆಲವೇ ದಿನಗಳಲ್ಲಿ ವೈರಲ್ ಆದ ‘ಕಾಕ್ರೋಚ್ ಜನತಾ ಪಾರ್ಟಿ’ ಹಿಂದಿರುವ ಯುವಕನ ಕಥೆ ಇಲ್ಲಿದೆ

ಯಾರು ಈ ಅಭಿಜೀತ್ ದಿಪ್ಕೆ? ಕೆಲವೇ ದಿನಗಳಲ್ಲಿ ವೈರಲ್ ಆದ 'ಕಾಕ್ರೋಚ್ ಜನತಾ ಪಾರ್ಟಿ' ಹಿಂದಿರುವ ಯುವಕನ ಕಥೆ ಇಲ್ಲಿದೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!