ಸಕ್ಕರೆ ಸಚಿವರು ಮಗಳ ಎಲೆಕ್ಷನ್ ಗೆ ಕಾರ್ಖಾನೆ ಮಾಲೀಕರ ಬಳಿ ಶಿವಾನಂದ ಪಾಟೀಲ್(Shivananda patil) 50 ಲಕ್ಷ ಬೇಡಿಕೆ ಇಟ್ಟಿದ್ದಾರೆ ಎಂದು ಬಸನ ಗೌಡ ಪಾಟೀಲ್ ಯತ್ನಾಳ್ (Basana gowda patil yathnal ) ಹೊಸ ಬಾಂಬ್ ಸಿಡಿಸಿದ್ದಾರೆ. ಸಕ್ಕರೆ ಸಚಿವ ಶಿವಾನಂದ ಪಾಟೀಲ ವಿರುದ್ಧ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಮಗಳು ಸಂಯುಕ್ತಾ ಪಾಟೀಲ್ (Samyuktha patil) ಚುನಾವಣೆ ಕರ್ಚಿಗೆ , ಸಕ್ಕರೆ ಕಾರ್ಖಾನೆ ಮಾಲೀಕರ ಬಳಿ 50 ಲಕ್ಷ ರೂಪಾಯಿ (50 lakhs) ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಜರಿದ ಯತ್ನಾಳ್,ಇದೇ ಸಚಿವರು ಈ ಹಿಂದೆ ರೈತರು 5 ಲಕ್ಷ ರೂಪಾಯಿ ಸಲುವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂಬ ಬಾಲಿಶ ಹೇಳಿಕೆ ನೀಡಿದ್ದರು ಎಂದು ಟೀಕಿಸಿದ್ದಾರೆ.
ಇನ್ನು ಸಚಿವ ಸತೀಶ್ ಜಾರಕಿಹೊಳಿ (Satish jarakiholi) ವಿರುದ್ಧ ಕೂಡ ಕೆಂಡ ಕಾರಿರುವ ಯತ್ನಾಳ್, ಬೆಳಗಾವಿ(Belagavi ) ಕಬ್ಜ ಆದ್ರೆ, ಸಾಹುಕಾರನ ಮನೆಮುಂದೆ ಹೋಗಿ ಗಂಟೆ ಹೊಡೆಯಬೇಕು ಆಗುತ್ತದೆ ಅಂತ ಯತ್ನಾಳ್ ತ್ರೀವ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸತೀಶ ಜಾರಕಿಹೊಳಿ ಕುಟುಂಬದ ರಾಜಕಾರಣ ಮಾಡ್ತಾರೆ ಅಂತ ಯತ್ನಾಳ್ ಕಿಡಿ ಕಾರಿದ್ದು, ಉಪ್ಪಾರ, ಹಾಲುಮತ ಸಮಾಜದವರು ಏನ ಮಾಡಬೇಕು ಎಂದು ಕಾಂಗ್ರೆಸ್ ಗೆ ಪ್ರಶ್ನೆ ಮಾಡಿದ್ದರೆ.