ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣಕ್ಕಾಗಿ ಸಂಗ್ರಹವಾಗುತ್ತಿರುವ ದೇಣಿಗೆಯಲ್ಲಿ ಅವ್ಯವಹಾರ ಆಗಿದೆ ಅದರ ಲೆಕ್ಕ ಕೊಡಿ ಎಂದು ಕೇಳಿದ ರಾಜಕಾರಣಿಗಳಿಗೆ ಪೇಜಾವರ ಶ್ರೀಗಳು ತಿರುಗೇಟು ನೀಡಿದ್ದು, ಯಾವುದಾದರೂ ಚುನಾವಣೆ ಬಂದಾಗಲೇ ಈ ಬಗ್ಗೆ ಪ್ರಶ್ನೆ, ಸಂದೇಹಗಳು ಬರ್ತಿವೆ ಎಂದು ಕಿಡಿಕಾರಿದ್ದಾರೆ.
ಗದಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಗಳು, ದೇಣಿಗೆ ಸಂಗ್ರಹಕ್ಕೆ ಸಂಬಂಧಿ ನನ್ನ ಬಳಿ ಕೇಳಿದರೆ ಏನು ಪ್ರಯೋಜನ ಅದಕ್ಕೆ ಟ್ರಸ್ಟ್ ಇದೆ ಇದನ್ನೆಲ್ಲ ಅವರ ಬಳಿ ಕೇಳಬೇಕು. ಸಾರ್ವಜನಿಕರ ಬಳಿ ಕೇಳುವುದು ಹಾಸ್ಯಾಸ್ಪದವಾದ. ಯಾವುದಾದರೂ ಚುನಾವಣೆ ಬಂದಾಗಲೇ ಈ ಬಗ್ಗೆ ಪ್ರಶ್ನೆ, ಸಂದೇಹಗಳು ಬರ್ತಿವೆ ಅಂತಾ ಅವರು ಕಿಡಿಕಿಡಿಯಾದರು.
ಎಲೆಕ್ಷನ್ ಬಳಿಕ ಅವರಿಗೆ ಉತ್ತರ ಸಿಗುತ್ತೋ, ಬಿಡುತ್ತೋ ಗೊತ್ತಿಲ್ಲ. ಈ ಹಿಂದೆಯೂ ಲೆಕ್ಕ ಕೇಳಿದ್ದರು, ಲೆಕ್ಕ ಕೊಟ್ಟಾಗಿದೆ. ವ್ಯರ್ಥ ಪ್ರಶ್ನೆಗಳನ್ನ ಕೇಳ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಮರಸ್ಯ ಇರಬೇಕು ಅಂದ್ರೆ ಮತಾಂತರ ಮಾಡಬಾರದು –
ಸಮಾಜದಲ್ಲಿ ಸಾಮರಸ್ಯ ಇರಬೇಕು ಅಂದ್ರೆ ಇಂತಹ ಅವ್ಯವಹಾರ ಮಾಡಬಾರದು. ಆಮಿಷ ಒಡ್ಡಿ ಒತ್ತಾಯಪೂರ್ವಕವಾಗಿ ಮತಾಂತರ ಮಾಡಬಾರದು. ಮತಾಂತರ ಕಾಯ್ದೆ ಜಾರಿಗೆಯಾಗಬೇಕು ಎಂದಿದ್ದಾರೆ.
ಪಾಕಿಸ್ತಾನದ ಕೃತ್ಯಗಳ ವಿರೋಧಿಸುವ ನಿಟ್ಟಿನಲ್ಲಿ ವರ್ಲ್ಡ್ ಕಪ್ ಟಿ20 ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಆಟ ಆಡಬಾರದು –
ಎರಡೂ ಕಡೆ ವಿರೋಧವಿದ್ದರೆ ಪಂದ್ಯ ವಾಡುವುದು ಬೇಡ. ಪಾಕಿಸ್ತಾನ ಮಾಡುವ ಕೃತ್ಯಗಳು ನಿಲ್ಲಬೇಕು. ಪಾಕಿಸ್ತಾನದ ಕೃತ್ಯಗಳ ವಿರೋಧಿಸುವ ನಿಟ್ಟಿನಲ್ಲಿ ಪಂದ್ಯ ಆಡುವುದು ಬೇಡ ಎಂದು ಗದಗನಲ್ಲಿ ಪೇಜಾವರ ಶ್ರೀಗಳು ಗುಡುಗಿದರು.
ಚುನಾವಣೆ ಪ್ರಕಾರದಲ್ಲಿ ತೊಡಗಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ರಾಮಮಂದಿರ ಹಣದಲ್ಲಿ ಅವ್ಯವಹಾರ ಆಗಿದೆ ಅದರ ಲೆಕ್ಕ ಕೊಡಿ ಎಂದು ಕೇಳಿದ್ದರು. ಈ ಕುರಿತು ಪೇಜಾವರ ಶ್ರೀಗಳು ಪ್ರತಿಕ್ರಿಯಿಸಿದ್ದಾರೆ.