ಕರ್ನಾಟಕದಲ್ಲಿ ಚಿಲುಮೆ ಸಂಸ್ಥೆ ಹಗರಣವನ್ನು ಬಯಲಿಗೆಳೆದ ಪ್ರತಿಧ್ವನಿ.ಕಾಂ ಇಂಪ್ಯಾಕ್ಟ್ ದೇಶದೆಲ್ಲೆಡೆ ಈಗ ಮತ್ತೆ ಸದ್ದು ಮಾಡುತ್ತಿದೆ.
ಹೌದು, ದೇಶದಲ್ಲಿ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಘೊಷಣೆಯಾಗುತ್ತಿದಂತೆ ಮತದಾರರ ಪಟ್ಟಿ ಪರಿಷ್ಕರಣೆ ವಿಚಾರವು ಮತ್ತೆ ಮುಂದೆ ಬಂದಿದ್ದು, ಚುನಾವಣೆ ಆಯೋಗ ಯಾವುದೇ ಕಾರಣಕ್ಕೂ ಖಾಸಗಿ ಸಂಸ್ಥೆಗಳಿಗೆ ಚುನಾವಣೆ ಕೆಲಸ ನೀಡುವುದಿಲ್ಲ ಎಂದು ಹೇಳಿದೆ.
ಕಳೆದ ಕರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ಚುನಾವಣೆಯ ಕೆಲಸವನ್ನು ಚಿಲುಮೆ ಎಂಬ ಖಾಸಗಿ ಸಂಸ್ಥೆಗೆ ನೀಡಿ, ಆ ಸಂಸ್ಥೆ ಮತದಾರರ ಮಾಹಿತಿಯನ್ನು ಕದಿಯುತ್ತಿರುವ ಬಗ್ಗೆ ಹಾಗೂ ಈ ಸಂಸ್ಥೆಯಿಂದ ಬೆಂಗಳೂರಿನ ಕೆಲವು ಕ್ಷೇತ್ರದಲ್ಲಿ ಮತದಾರರ ಪಟ್ಟಿಯನ್ನು ತಿರುಚಲಾಗಿದೆ ಎಂಬ ವರದಿಯನ್ನು ಪ್ರತಿಧ್ವನಿ.ಕಾಂ ಹಾಗೂ ದಿ ನ್ಯೂಸ್ ಮಿನಿಟ್ ಬಿತ್ತರಿಸಿತ್ತು. ಈ ವಿಷಯ ರಾಜಕೀಯ ವಲಯದಲ್ಲಿ ದೊಡ್ಡ ಕೋಲಾಹಲಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆ ಐದು ರಾಜ್ಯಗಳಲ್ಲಿ ವಿಧಾಸಭಾ ಚುನಾವಣೆ ಇದ್ದು, ಅಲ್ಲಿಯೂ ಈತರದ ಅವಾಂತರ ಆಗದೆ ಇರಲು ಚುನಾವಣಾ ಆಯೋಗ ಕಟ್ಟೆಚ್ಚರ ವಹಿಸಿದೆ. ಹಾಗಾಗಿ ಚುನಾವಣೆಯ ಕೆಲಸವನ್ನು ಖಾಸಗಿ ಸಂಸ್ಥೆಗೆ ಹೊರಗುತ್ತಿಗೆ ಕೊಡದೆ ಸರ್ಕಾರಿ ಅಧಿಕಾರಿಗಳಿಂದಲೇ ಕೆಲಸ ಮಾಡಿಸುವ ತೀರ್ಮಾನಕ್ಕೆ ಕೇಂದ್ರ ಚುನಾವಣೆ ಆಯೋಗ ಬಂದಿದೆ.
ಚುನಾವಣೆ ಕೆಲವನ್ನು ಗುತ್ತಿಗೆ ಸಂಸ್ಥೆ ಹಾಗೂ ಮತದಾರರಿಗೆ ಅರಿವು ಮೂಡಿಸುವ ನಾಗರಿಕ ಸಮಾಜ ಸಂಸ್ಥೆಗಳು ಕೂಡ ಕೆಲಸ ನಿರ್ಹಸುದಿಲ್ಲ. ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಬೂತ್ ಮಟ್ಟದ ಕೆಲವನ್ನು ಸರ್ಕಾರಿ ಅಧಿಕಾರಿಗಳೆ ನಿರ್ವಹಿಸಲಿದ್ದಾರೆ ಎಂದು ಕೇಂದ್ರ ಚುನಾವಣಾ ಮುಖ್ಯಸ್ಥ ರಾಜೀವ್ ಕುಮಾರ್ ಹೇಳಿದ್ದಾರೆ.