• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ನೆನೆಗುದಿಗೆ ಈಜೀಪುರ ಫ್ಲೈ ಓವರ್ ಕಾಮಗಾರಿ : 203 ಕೋಟಿ ವೆಚ್ಚದ ಟೆಂಡರ್ ಅರ್ಧಕ್ಕೇ ಸ್ಥಗಿತ !

ಕರ್ಣ by ಕರ್ಣ
May 15, 2022
in ಕರ್ನಾಟಕ
0
ನೆನೆಗುದಿಗೆ ಈಜೀಪುರ ಫ್ಲೈ ಓವರ್ ಕಾಮಗಾರಿ : 203 ಕೋಟಿ ವೆಚ್ಚದ ಟೆಂಡರ್ ಅರ್ಧಕ್ಕೇ ಸ್ಥಗಿತ !
Share on WhatsAppShare on FacebookShare on Telegram

ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ಅತಿದೊಡ್ಡ ಫ್ಲೈಓವರ್ ಕಾಮಗಾರಿ ನಿಂತು ಹೋಗಿದೆ. ಈಜಿಪುರ ಫ್ಲೈಓವರ್​ ನಿರ್ಮಾಣವಾದ್ರೆ ಸಾಕು ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗುತ್ತೆ ಅಂತ ಜನರು ಕಾಯ್ತಿದ್ರು. ಆದ್ರೀಗ ಕೆಲಸವೇ ನಿಂತು ಹೋಗ್ತಿದ್ದು, ಟ್ರಾಫಿಕ್​ ಸಮಸ್ಯೆ ಕೂಡ ದೊಡ್ಡ ತಲೆನೋವಾಗಲಿದೆ. ಆದ್ರೆ ಈಜಿಪುರ ಫ್ಲೈಓವರ್ ಕೆಲಸ ಆರಂಭವಾಗಿ ಹಲವು ವರ್ಷ ಕಳೆದಿದ್ರು, ಕೆಲಸ ಮಾತ್ರ ಆಮೆಗತಿಯಲ್ಲಿ ಸಾಗ್ತಾಯಿತ್ತು, ಸದ್ಯ ಕಾಮಗಾರಿಯ ಟೆಂಡರ್ ಕ್ಯಾನ್ಸಲ್ ಆಗಿದೆ.

ADVERTISEMENT

ಈಜಿಪುರ ಫ್ಲೈಓವರ್ ಕಾಮಗಾರಿ ಟೆಂಡರ್ ರದ್ದಾಗಿದ್ದು, ಬಿಬಿಎಂಪಿ ಹೊಸದಾಗಿ ಟೆಂಡರ್ ಕರೆಯುವ ಅನಿವಾರ್ಯತೆ ಎದುರಾಗಿದೆ. ಈಜಿಪುರ ಫ್ಲೈಓವರ್ ಕೆಲಸ 2017 ರಲ್ಲಿ ಆರಂಭವಾಗಿದ್ದು ನಿಗದಿಯಂತೆ 2019 ಮೇ ನಲ್ಲಿ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಅದ್ರೆ ಗುತ್ತಿಗೆ ಪಡೆದ ಸಿಂಪ್ಲೆಕ್ಸ್ ಇನ್ಫ್ರಾಸ್ಟ್ರಕ್ಚರ್ ಪ್ರೈವೇಟ್ ಲಿಮಿಟೆಡ್ ಕಂಪನಿ 2022 ಮಾರ್ಚ್‌ವರೆಗೂ ಕೇವಲ 42 % ರಷ್ಟು ಕಾಮಗಾರಿ ನಡೆಸಿದ್ದು, ಈ ಹಿನ್ನಲೆ ಸಿಂಪ್ಲೆಕ್ಸ್ ಕಂಪನಿಗೆ ನೀಡಿದ್ದ ಟೆಂಡರ್ ರದ್ದು ಮಾಡಲಾಗಿದೆ.‌

ಹೀಗಾಗಿ ಶೀಘ್ರದಲ್ಲೆ ಹೊಸ ಟೆಂಡರ್ ಪ್ರಕ್ರಿಯೆ ಆರಂಭಿಸುವಂತೆ ಬಿಬಿಎಂಪಿ ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕೋರಮಂಗಲದ 100 ಫೀಟ್ ಮೈನ್ ರಸ್ತೆಯಿಂದ ಕೇಂದ್ರಿಯ ಸದನದವರೆಗೂ ಇರುವ ಫ್ಲೈ ಓವರ್ 2.4 ಕಿಲೋ‌ಮೀಟರ್ ಇದ್ದು ಸೋನಿ ಸಿಗ್ನಲ್ ಮಾರ್ಗವಾಗಿ ಹಾದು ಹೋಗಲಿದೆ. ನಗರದ ಎರಡನೇ ದೊಡ್ಡ ಫ್ಲೈ ಓವರ್ ಇದಾಗಿದ್ದು, ಫ್ಲೈ ಓವರ್ ನಿರ್ಮಾಣವಾದ್ರೆ ಈ ಭಾಗದ ಜನರಿಗೆ ಟ್ರಾಫಿಕ್ ನಿಂದ ಮುಕ್ತಿ ಸಿಗಲಿದೆ. ಆದಷ್ಟು ಬೇಗ ಫ್ಲೈಓವರ್ ಕಂಪ್ಲೀಟ್ ಮಾಡುವಂತೆ ವಾಹನ ಸವಾರರು, ಸ್ಥಳೀಯ ನಿವಾಸಿಗಳು ಒತ್ತಾಯಿಸ್ತಾರೆ.

ಈ ಫ್ಲೈ ಓವರ್ ನಿರ್ಮಾಣಕ್ಕಾಗಿ ನಗರೋತ್ಥಾನ ಯೋಜನೆಯಡಿ 203.20 ಕೋಟಿ ಬಿಡುಗಡೆ ಮಾಡಲಾಗಿದ್ದು , 2021 ಸೆಪ್ಟೆಂಬರ್ ವರೆಗೂ 75.11 ಕೋಟಿ ಪಾವತಿ ಮಾಡಲಾಗಿದೆ.‌ 2017 ರಿಂದ ಕೆಲಸ ಆರಂಭವಾದ್ರೂ ಆಮೆಗತಿಯಲ್ಲಿ ಕೆಲಸ ಸಾಗ್ತಾಯಿತ್ತು. ಹೀಗಾಗಿ ಬಿಬಿಎಂಪಿ ಸಿಂಪ್ಲೆಕ್ಸ್ ಕಂಪನಿಗೆ ಹಲವು ಬಾರಿ ನೋಟಿಸ್ ನೀಡಿತ್ತು.‌ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಸ್ಥಳೀಯರು, ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಿದ್ರು.‌ ಆದ್ರೂ ಕಾಮಗಾರಿಯಲ್ಲಿ ಯಾವುದೇ ಅಭಿವೃದ್ದಿ ಕಾಣದ ಹಿನ್ನಲೆ ಟೆಂಡರ್ ರದ್ದು ಮಾಡಲಾಗಿದೆ.‌

ನಿಯಮದ ಪ್ರಕಾರ ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರಿಂದ ಕಾಮಗಾರಿ ಮಾಡುತ್ತಿದ್ದ ಗುತ್ತಿಗೆ ರದ್ದುಪಡಿಸಲಾಗಿದೆ. ಇನ್ನೊಂದು ತಿಂಗಳಿನಲ್ಲಿ ಟೆಂಡರ್ ಕರೆದು ಫ್ಲೈ ಓವರ್ ಕಾಮಗಾರಿ ಶುರು ಮಾಡಲಾಗುವುದು ಎನ್ನುತ್ತಾರೆ ಬಿಬಿಎಂಪಿ ಮುಖ್ಯ ಇಂಜಿನಿಯರ್ ಲೋಕೇಶ್. ಸದ್ಯ ಹೊಸ ಟೆಂಡರ್ ಕರೆದು ಕಾಮಗಾರಿ ಪೂರ್ಣಗೊಳಿಸಲು ಒಂದು ವರ್ಷಗಳ ಕಾಲ ಸಮಯ ಬೇಕಾಗುತ್ತದೆ.‌

Previous Post

ಮಾಜಿ ಕ್ರಿಕೆಟಿಗ ಆ್ಯಂಡ್ರ್ಯೂ ಸೈಮಂಡ್ಸ್ ಕಾರು ಅಪಘಾತದಲ್ಲಿ ಸಾವು

Next Post

ಕಾಂಗ್ರೆಸ್ಗೆ ಹಾರ್ದಿಕ್ ಪಟೇಲ್ ರಾಜೀನಾಮೆ ?

Related Posts

ಬಿಜೆಪಿಗೆ ಮರುಪ್ರವೇಶಕ್ಕೆ ಎಸ್.ಟಿ. ಸೋಮಶೇಖರ್ ಯಿಂದ ಯಡಿಯೂರಪ್ಪರಿಗೆ 13 ಪ್ರಶ್ನೆಗಳ ಸವಾಲು
ಕರ್ನಾಟಕ

ಬಿಜೆಪಿಗೆ ಮರುಪ್ರವೇಶಕ್ಕೆ ಎಸ್.ಟಿ. ಸೋಮಶೇಖರ್ ಯಿಂದ ಯಡಿಯೂರಪ್ಪರಿಗೆ 13 ಪ್ರಶ್ನೆಗಳ ಸವಾಲು

by ಪ್ರತಿಧ್ವನಿ
March 31, 2026
0

ಬಿಜೆಪಿ ಪಕ್ಷದಿಂದ ಉಚ್ಚಾಟನೆಯಾದ ಶಾಸಕ ಎಸ್. ಟಿ. ಸೋಮಶೇಖರ್ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸುದೀರ್ಘ ಪತ್ರ ಬರೆದು, ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವಂತೆ ಮನವಿ...

Read moreDetails
ಏಪ್ರಿಲ್ 1ರಿಂದ ಮನೆಮನೆಗೆ ಕಸ ವಿಂಗಡಣೆ ಕಡ್ಡಾಯ: ನಿಯಮ ಉಲ್ಲಂಘನೆ ಮಾಡಿದರೆ ದಂಡ

ಏಪ್ರಿಲ್ 1ರಿಂದ ಮನೆಮನೆಗೆ ಕಸ ವಿಂಗಡಣೆ ಕಡ್ಡಾಯ: ನಿಯಮ ಉಲ್ಲಂಘನೆ ಮಾಡಿದರೆ ದಂಡ

March 30, 2026
ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು

ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು

March 30, 2026
ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್ ಪತ್ತೆ: ವಿಡಿಯೋ ವೈರಲ್!

ಪರಪ್ಪನ ಅಗ್ರಹಾರ ಜೈಲಿನಲ್ಲಿ ಮತ್ತೆ ಮೊಬೈಲ್ ಪತ್ತೆ: ವಿಡಿಯೋ ವೈರಲ್!

March 30, 2026
ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ : ತೀವ್ರ ಕುತೂಹಲ ಕೆರಳಿಸಿದ ಬಲಿಷ್ಠ ತಂಡಗಳ ಕಾದಾಟ..

ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ : ತೀವ್ರ ಕುತೂಹಲ ಕೆರಳಿಸಿದ ಬಲಿಷ್ಠ ತಂಡಗಳ ಕಾದಾಟ..

March 28, 2026
Next Post
ಕಾಂಗ್ರೆಸ್ಗೆ ಹಾರ್ದಿಕ್ ಪಟೇಲ್ ರಾಜೀನಾಮೆ ?

ಕಾಂಗ್ರೆಸ್ಗೆ ಹಾರ್ದಿಕ್ ಪಟೇಲ್ ರಾಜೀನಾಮೆ ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada