ಮಕ್ಕಳು ಚೆನ್ನಾಗಿ ಓದ್ಬೇಕು ಅಂತ ಅನೇಕರು ತಮ್ಮ ಮಕ್ಕಳನ್ನ ಹೆಚ್ಚುವರಿ ಕಲಿಕೆಗಾಗಿ ಮನೆ ಪಾಠ ಅಥ್ವಾ ಟ್ಯುಟೋರಿಯಲ್ಗಳಿಗೆ ಕಳಿಸ್ತಾರೆ. ಆದ್ರೆ ಅಲ್ಲಿ ಮಕ್ಕಳಿಗೆ ಎಷ್ಟು ಸೇಫ್ ಅನ್ನೋದ್ರ ಬಗ್ಗೆ ಯಾರು ಕೂಡಾ ಗಮನ ಹರಿಸೋದಿಲ್ಲ. ಹೀಗಾಗಿಯೇ ಶಿಕ್ಷಣ ಇಲಾಖೆ ಇದೀಗ ಈ ರೀತಿ ಅನಧಿಕೃತ ಮನೆಪಾಠ ಅಥ್ವಾ ಟ್ಯುಟೋರಿಯಲ್ ಸೆಂಟರ್ಗಳಿಗೆ ಶಾಕ್ ನೀಡಿದೆ.
ಹೌದು, ಇಂತಹದೊಂದ ಕಾನೂನನ್ನ ಶಿಕ್ಷಣ ಇಲಾಖೆ ತರ್ತಿದೆ. ಇಷ್ಟು ದಿನ ಮನೆಯಲ್ಲಿ ಕೆಲ ಮಕ್ಕಳಿಗೆ ಬೇಕಾಬಿಟ್ಟಿ ಪಾಠಗಳನ್ನು ಹೇಳಿಕೊಡ್ತಿದ್ದವರಿಗೆ ಇದು ನಿಜಕ್ಕೂ ಶಾಕಿಂಗ್ ವಿಷ್ಯವಾಗಿದೆ. ಮನೆ ಪಾಠ ಅಥ್ವಾ ಕೋಚಿಂಗ್ ಸೆಂಟರ್ಗಳಲ್ಲಿ ಯಾವುದೇ ರೀತಿಯ ಮಾನದಂಡಗಳು ಇರಲಿಲ್ಲ.ಟ್ಯೂಷನ್ ಕೋಚಿಂಗ್ ಸೆಂಟರ್ಗಳಲ್ಲಿ ಮಕ್ಕಳಿಗೆ ರಕ್ಷಣೆ ಇಲ್ಲ. ಹೀಗಾಗಿ ಅನಧಿಕೃತ ಮನೆ ಪಾಠ, ಟ್ಯೂಷನ್ಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ಬಂದ ಹಿನ್ನೆಲೆ, ಶಿಕ್ಷಣ ಇಲಾಖೆ ಈ ಕಾರ್ಯಕ್ಕೆ ಮುಂದಾಗಿದೆ.
ಇದೀಗ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಿದ್ದು, 1 ನೇ ತರಗತಿಯಿಂದ 7 ಹಾಗೂ 8ರಿಂದ 10 ನೇ ತರಗತಿಗಳ ಟ್ಯುಟೋರಿಯಲ್ಗೆ ನೋಂದಣಿ ಕಡ್ಡಾಯ ಮಾಡಿದೆ. ಶಿಕ್ಷಣ ಕಾಯ್ದೆಯನ್ನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳೋದಾಗಿ ಸೂಚನೆ ನೀಡಿದೆ.ಆದೇಶದ ಪ್ರಕಾರ ಎಲ್ಲಿ ಟ್ಯುಟೋರಿಯಲ್ ನಡೆಸಲಾಗುವುದು. ಎಷ್ಟು ಮಕ್ಕಳಿಗೆ ಪಾಠ ಹೇಳಿಕೊಡಲಾಗ್ತಿದೆ, ಎಷ್ಟು ಹಣವನ್ನು ಪಡೆಯಲಾಗ್ತಿದೆ ಎಂದು ಮಾಹಿತಿ ನೀಡಬೇಕು. ಈ ಮೂಲಕ ನೀಡಿರುವ ಮಾಹಿತಿ ಸರಿಯಿದ್ದರೆ ಅಂಥವರಿಗೆ ನೋಂದಣಿ ನೀಡಲಾಗುವುದು.
ಶಿಕ್ಷಣ ಇಲಾಖೆಯಿಂದ ಆದೇಶವೇನೋ ಹೊರಡಿಸಿದೆ. ಆದ್ರೆ ಇದು ಕಣ್ಣೊರೆಸೋ ಕೆಲಸವಾಗಿದ್ದು, ಕಠಿಣ ಕ್ರಮ ಕೈಗೊಂಡಿಲ್ಲ. ನಾವು ಅನೇಕ ಬಾರಿ ಮನವಿ ಮಾಡಿದ್ರು ಕೂಡ ಈ ಬಗ್ಗೆ ಇಲಾಖೆ ಗಮನ ಹರಿಸಿಲ್ಲ ಅಂತ ಖಾಸಗಿ ಶಾಲಾ ಒಕ್ಕೂಟದಿಂದ ಆರೋಪ ಮಾಡಲಾಗ್ತಿದೆ. ಒಟ್ನಲ್ಲಿ ಇಷ್ಟು ವರ್ಷಗಳ ಬಳಿಕ ಟ್ಯುಷನ್ಗಳಿಗೆ ಮಾನದಂಡಗಳನ್ನು ಅಳವಡಿಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಇದು ಎಷ್ಟರ ಮಟ್ಟಿಗೆ ಸಕ್ಸಸ್ ಆಗುತ್ತೆ ಅನ್ನೋದನ್ನ ನೋಡ್ಬೇಕು.