ಎಲೆಕ್ಟೊರಲ್ ಬಾಂಡ್ (electoral bond) ವಿಚಾರದಲ್ಲಿ ಸುಪ್ರೀಂ ಕೋರ್ಟ್ (Supreme Court) ನೀಡಿರುವ ಆದೇಶ ಕೇಂದ್ರ ಸರ್ಕಾರ (central government) ನಿಟ್ಟುಸಿರು ಬಿಡುವಂತೆ ಮಾಡಿದೆ. SBI ಗೂ ಕೂಡ ಈ ಆದೇಶ ನಿರಾಳ ತಂದಿದೆ. ಆದ್ರೆ ಈ ಆದೇಶದ ಸುತ್ತ ಸಾಕಷ್ಟು ಚರ್ಚೆಗಳು ಕೂಡ ಗರಿಗೆದರಿದೆ.

ಎಲೆಕ್ಟೊರಲ್ ಬಾಂಡ್ (electoral bond ) ಗಳ ಸಂಪೂರ್ಣ ವಿವರ ಒದಗಿಸಲು SBI ಜೂನ್ ೩೦ರ ವರೆಗೆ ಸಮಯಾವಕಾಶ ಕೋರಿತ್ತು. ಇದನ್ನ ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ (Supreme Court ), ಮಾರ್ಚ್ ೧೨ರ ಒಳಗೆ ಮಾಹಿತಿ ಒದಗಿಸಬೇಕು ಎಂದು ಆದೇಶ ಮಾಡಿದೆ. ಆದ್ರೆ ಮಾಹಿತಿ ಸಲ್ಲಿಕೆ ಮಾಡಬೇಕಿರುವ ಸ್ವರೂಪದಲ್ಲಿ SBI ಗೆ ಸುಪ್ರೀಂ ಕೋರ್ಟ್ (Supreme Court )ರಿಯಾಯಿತಿ ನೀಡಿದೆ ಅನ್ನೋ ವಿಚಾರ ಈಗ ತೀವ್ರ ಚರ್ಚೆಗೆ ನಾಂದಿ ಹಾಡಿದೆ.

ಫೆಬ್ರವರಿ ೧೫ ರಂದು ಎಲೆಕ್ಟೊರಲ್ ಬಾಂಡ್ (electoral bond) ಗಳಿಗೆ ಸಂಬಂಧಪಟ್ಟಂತೆ ಸುಪ್ರೀಂ ಕೋರ್ಟ್ (Supreme Court) ಮಹತದ್ವದ ಆದೇಶ ಹೊರಡಿಸಿತ್ತು. ೨೦೧೯ ರ ಏಪ್ರಿಲ್ ನಂತರ ಯಾರೆಲ್ಲಾ ಬಾಂಡ್ ಗಳನ್ನ ಖರೀದಿಸೋದ್ದಾರೆ ಅವರ ವಿವರ ಮತ್ತು ಖರೀದಿ ವೆಚ್ಚವನ್ನ SBI ಮಾರ್ಚ್ ೬ರ ಒಳಗಾಗಿ ಚುನಾವಣಾ ಆಯೋಗಕ್ಕೆ ನೀಡಬೇಕು ಮತ್ತು ಒಂದು ವಾರದೊಳಗೆ ಚುನಾವಣಾ ಆಯೋಗ (election commission) ಈ ಮಾಹಿತಿಯನ್ನು ತನ್ನ ವೆಬ್ಸೈಟ್ ನಲ್ಲಿ ಪ್ರಕಟಿಸಬೇಕು ಎಂದು ಆದೇಶ ನೀಡಿತ್ತು.

ಆದ್ರೆ ಕಳೆದ ೫ ವರ್ಷಗಳಲ್ಲಿ (5 years) ಸರಿ ಸುಮಾರು ೨೨ ಸಾವಿರಕ್ಕೂ ಅಧಿಕ ಬಾಂಡ್ ಗಳು ಖರೀದಿಯಾಗಿದ್ದು ಅಷ್ಟೂ ದತ್ತಾಂಶ ಒದಗಿಸಬೇಕಿರೋದ್ರಿಂದ ಹೆಚ್ಚಿನ ಸಮಯಾವಕಾಶ ಬೇಕು ಎಂದು ಬ್ಯಾಂಕ್ ಕೋರ್ಟ್ ಬಳಿ ಮನವಿ ಮಾಡಿಕೊಂಡಿತ್ತು.
ಇದೀಗ ಸುಪ್ರೀಂ ಕೋರ್ಟ್ ನ (Supreme Court ) ಆದೇಶಲ್ಲಿರುವ ಅಂಶ ಏನಂದ್ರೆ.. ಯಾರೆಲ್ಲ ಬಾಂಡ್ ಖರೀದಿ ಮಾಡಿದ್ದಾರೆ ಎಂಬ ಒಂದು ಪಟ್ಟಿ, ಯಾವ ರಾಯಕಿಯ ಪಕ್ಷಕ್ಕೆ (political parties )ಎಷ್ಟು ದೇಣಿಗೆ ಹೋಗಿದೆ ಎಂಬ ಮತ್ತೊಂದು ಪಟ್ಟಿ.. ಎರಡನ್ನೂ ಪ್ರತ್ಯೇಕವಾಗಿ ನೀಡಲು ಕೋರ್ಟ್ (court )ಸೂಚಿಸಿದೆ. ಆ ಮೂಲಕ ಯಾವ ವ್ಯಕ್ತಿ ಎಷ್ಟರ ಬೆಲೆಯ ಬಾಂಡ್ ಖರೀದಿ ಮಾಡಿದ್ದರೆ ಮತ್ತು ಅದನ್ನು ಯಾವ ಪಕ್ಷಕ್ಕೆ ನೀಡಿದ್ದರೆ ಎಂಬ ಅಂಶಗಳನ್ನು ತಾಳೆ ಮಾಡುವ ಅಥವಾ ಮ್ಯಾಚ್ ಮಾಡುವ ಅವಶ್ಯಕತೆ ಇಲ್ಲ. ಕೇವಲ ಎರಡು ಪಾರ್ತ್ಯೇಕ ಪಟ್ಟಿ ಕೊಡಿ ಅನ್ನೋ ಆದೇಶ ನೀಡಿದೆ.

ಇದು ಕಳ್ಳನ ಕೈಗೆ ಕೀಲಿ ಕೊಟ್ಟಂತಾಗಿದೆ ಅನ್ನೋದು ಬಹಳ ಜನರ ಅಭಿಪ್ರಾಯವಾಗಿದ್ದು, ತಪ್ಪಿಸಿಕೊಳ್ಳಲು ದಾರಿ ಹುಡುಕುತ್ತಿದ್ದ ಕೇಂದ್ರ ಸರ್ಕಾರ ಮತ್ತು SBI ಗೆ ಸುಪ್ರೀಂ ಕೋರ್ಟ್ ನ ಆದೇಶ ರಹದಾರಿ ಸಿಕ್ಕಂತಾಗಿದೆ ಎಂಬ ಚರ್ಚೆಗಳು ಜೋರಾಗಿದೆ.