ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದು, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ “ಅಪರಾಧದ ಪಾಲುದಾರರು” ಎಂದು ಆರೋಪಿಸಿದ್ದಾರೆ.
ಪಂಜಾಬ್‌ನ ಪಠಾಣ್‌ಕೋಟ್‌ನಲ್ಲಿ ನಡೆದ ಚುನಾವಣಾ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, ಎಎಪಿಯನ್ನು ಕಾಂಗ್ರೆಸ್‌ನ “ಫೋಟೋಕಾಪಿ” ಎಂದು ಜರಿದರು.
ಅಯೋಧ್ಯೆ ದೇವಸ್ಥಾನ ಅಥವಾ ಸೇನೆಯು ಏನನ್ನಾದರೂ ಮಾಡಿದಾಗ ಅವರಿಬ್ಬರಿಗೂ ಸಂತೋಷವಿಲ್ಲ. ಈ ಪಕ್ಷದವರನ್ನು ಸಹಿಸಬೇಡಿ. ಒಂದು ಪಕ್ಷವು ಪಂಜಾಬ್ ಅನ್ನು ಲೂಟಿ ಮಾಡಿದೆ. ಮತ್ತು ಇನ್ನೊಂದು ಪಕ್ಷ ದೆಹಲಿಯಲ್ಲಿ ಭ್ರಷ್ಟಾಚಾರ ಮಾಡುತ್ತಿದೆ ಎಂದು ಕುಟುಕಿದರು.
ದೆಹಲಿಯಲ್ಲೂ ಸರ್ಕಾರ ರಚಿಸಲು ಎಎಪಿ ಕಾಂಗ್ರೆಸ್‌ನ ಬೆಂಬಲವನ್ನು ಪಡೆದುಕೊಂಡಿದೆ. ಬಿಜೆಪಿ ಪಂಜಾಬ್ ಅನ್ನು ಪಂಜಾಬಿಯತ್ ದೃಷ್ಟಿಕೋನದಿಂದ ನೋಡುತ್ತದೆ. ಆದರೆ ಅವರ ಪ್ರತಿಸ್ಪರ್ಧಿಗಳು ರಾಜಕೀಯ ಶಕ್ತಿಯ ನೋಟದ ಮೂಲಕ ರಾಜ್ಯವನ್ನು ನೋಡುತ್ತಾರೆ ಎಂದು ತಿಳಿಸಿದರು.
ಕರ್ತಾರ್‌ಪುರ್ ಸಾಹಿಬ್ ಕಾರಿಡಾರ್ – ಪಾಕಿಸ್ತಾನದ ದರ್ಬಾರ್ ಸಾಹಿಬ್ ಕರ್ತಾರ್‌ಪುರಕ್ಕೆ (ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ಅವರ ಅಂತಿಮ ವಿಶ್ರಾಂತಿ ಸ್ಥಳ) ರಸ್ತೆಯ ಬಗ್ಗೆಯೂ ಪ್ರಧಾನಿ ಪ್ರಸ್ತಾಪಿಸಿ, “ಅವರು (ಕಾಂಗ್ರೆಸ್) ಪಾಕಿಸ್ತಾನದ ಕರ್ತಾರ್‌ಪುರ ಗುರುದ್ವಾರವನ್ನು ಕೈಬಿಟ್ಟರು. ಅದನ್ನು ಭಾರತದಲ್ಲಿ ಉಳಿಸಿಕೊಳ್ಳಲು ಅವರು ಪ್ರಯತ್ನಗಳನ್ನು ಮಾಡಲಿಲ್ಲವೇಕೆ? 1965 ರಲ್ಲಿ ಅವರು ಪ್ರಯತ್ನಿಸಿದೇ ಈಗ ಮಾತನಾಡುತ್ತಾರೆ ಎಂದರು.
2016ರ ಪಠಾಣ್‌ಕೋಟ್ ದಾಳಿಯಲ್ಲಿ ಮಡಿದ ಯೋಧರ ತ್ಯಾಗವನ್ನು ಕಾಂಗ್ರೆಸ್ ಅವಮಾನಿಸಿದೆ. ಆ ದಾಳಿಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿ ದೇಶವೇ ಒಟ್ಟಾಗಿದೆ. ಸೈನಿಕರ ತ್ಯಾಗವನ್ನು ಅವರು ಅವಮಾನಿಸಿದ್ದಾರೆ. 2019ರಲ್ಲಿ ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ವಾರ್ಷಿಕೋತ್ಸವದ ಸಂದರ್ಭದಲ್ಲಿಯೂ ಕಾಂಗ್ರೆಸ್ ಅದನ್ನೇ ಮಾಡುತ್ತಿದೆ. “ಪುಲ್ವಾಮಾ ವಾರ್ಷಿಕೋತ್ಸವದಂದು ಸಹ ಅವರು ತಮ್ಮ ‘ಪಾಪ್ ಲೀಲಾ’ವನ್ನು ಮುಂದುವರೆಸಿದ್ದಾರೆ ಎಂದು ಲೇವಡಿ ಮಾಡಿದರು.
ಫೆಬ್ರವರಿ 14, 2019 ರಂದು, ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಗುಂಪು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್ (ಸಿಆರ್‌ಪಿಎಫ್) ನ ಬೆಂಗಾವಲು ಪಡೆ ಮೇಲೆ ದಾಳಿ ಮಾಡಿ 40 ಪಡೆಯ ಸಿಬ್ಬಂದಿಯನ್ನು ಕೊಂದಿತ್ತು.
ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ಪಡೆಗಳು ನಡೆಸಿದ “ಸರ್ಜಿಕಲ್ ಸ್ಟ್ರೈಕ್” ಕುರಿತು ಪ್ರಶ್ನೆಗಳನ್ನು ಎತ್ತಿದ್ದಕ್ಕಾಗಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಬಿಜೆಪಿಯಿಂದ ಟೀಕೆಗೆ ಗುರಿಯಾಗುತ್ತಲೇ ಬಂದಿದ್ದಾರೆ.