ಲಾಟರಿ ಕಿಂಗ್ (Lottery king) ಅಕ್ರಮ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಡಿ (ED) ಅಧಿಕಾರಿಗಳು ದೇಶದ ಹಲವು ರಾಜ್ಯಗಳಲ್ಲಿ ಬೃಹತ್ ದಾಳಿ ನಡೆಸಿದ್ದು ಕೋಟಿ ಕೋಟಿ ಹಣ ವಶಪಡಿಸಿಕೊಂಡಿದ್ದಾರೆ. ಕರ್ನಾಟಕ ಸೇರಿದಂತೆ ತಮಿಳುನಾಡು, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಮೇಘಾಲಯ ಮತ್ತು ಪಂಜಾಬ್ ಸೇರಿದಂತೆ 22 ರಾಜ್ಯಗಳಲ್ಲಿ ಇಡಿ ದಾಳಿ ಏಕಕಾಲಕ್ಕೆ ದಾಳಿ ನಡೆಸಿದೆ.
ಕೈಗಾರಿಕೋದ್ಯಮಿ ಸ್ಯಾಂಟಿಯಾಗೊ ಮಾರ್ಟಿನ್ (Santiago martin) ಮತ್ತು ಈತನ ಸಂಸ್ಥೆ M/s ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಇತರ ಸಹವರ್ತಿ ಮನೆಗಳ ಮೇಲೆ ದಾಳಿ ನಡೆಸಲಾಗಿದ್ದು, 2002 ರ PMLA ಆಕ್ಟ್ ಅಡಿಯಲ್ಲಿ ಇಡಿ ಶೋಧ ಕಾರ್ಯ ನಡೆಸಿದೆ.
ಹೀಗೆ ಹಲವೆಡೆ ದಾಳಿ ಮಾಡಿ ಕಾರ್ಯಾಚರಣೆ ನಡೆಸಿದ ಸಮಯದಲ್ಲಿ, ದಾಖಲೆಗಳು, ಡಿಜಿಟಲ್ ಡಿವೈಸ್ ಸೇರಿದಂತೆ, ದಾಳಿಯಲ್ಲಿ ಒಟ್ಟು 12.41 ಕೋಟಿ ನಗದು ವಶಪಡಿಸಿಕೊಂಡಿರುವ ಇಡಿ ಇನ್ನೂ ದಾಳಿ ಮುಂದುವರೆಸಿದೆ. ಇದರ ಜೊತೆಗೆ ಅಕೌಂಟಗಳಲ್ಲಿರುವ ಎಫ್‌ಡಿಆರ್ (FDR) ಜೊತೆಗೆ ರೂ. 6.42 ಕೋಟಿ ಹಠವನ್ನು ಫ್ರೀಜ್ ಮಾಡಲಾಗಿದೆ.