ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇಡಿ ತನ್ನ ಐದನೇ ಸುತ್ತಿನ ವಿಚಾರಣೆಯ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಇಡಿ ವಿರುದ್ಧ ಕಿಡಿಕಾರಿದ್ದು, “ಇಡಿ ಮತ್ತು ಅಂತಹ ಏಜೆನ್ಸಿಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ, ನನ್ನನ್ನು ವಿಚಾರಣೆ ನಡೆಸಿದ ಅಧಿಕಾರಿಗಳು ಸಹ ಕಾಂಗ್ರೆಸ್ ಪಕ್ಷದ ನಾಯಕನನ್ನು ಹೆದರಿಸಲು ಮತ್ತು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಅರ್ಥಮಾಡಿಕೊಂಡರು” ಎಂದು ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಹೇಳಿದರು.
ಇಡಿ ವಿಚಾರಣೆಯ ಸಮಯದಲ್ಲಿ ಬೆಂಬಲ ನೀಡಿದ ಪಕ್ಷದ ಕಾರ್ಯಕರ್ತರಿಗೆ ಕಾಂಗ್ರೆಸ್ ನಾಯಕ ರಾಹುಲ್ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಪ್ರಶ್ನೆಯ ಸಮಯದಲ್ಲಿ ನಾನು ಒಬ್ಬಂಟಿಯಾಗಿರಲಿಲ್ಲ ಪ್ರಜಾಪ್ರಭುತ್ವಕ್ಕಾಗಿ ಹೋರಾಡುವ ಎಲ್ಲರೂ ತಮ್ಮೊಂದಿಗೆ ಇದ್ದಾರೆ ಎಂದು ಹೇಳಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಯನಾಡ್ (ಕೇರಳ)ದ ಕಾಂಗ್ರೆಸ್ ಸಂಸದರ ರಾಹುಲ್ ಗಾಂಧಿಯನ್ನು ಇಡಿ ಐದು ದಿನ ಅಂದರೆ 50 ಗಂಟೆಗಳ ಕಾಲ ಪ್ರಶ್ನಿಸಿದೆ.

ಕಾಂಗ್ರೆಸ್ ನಾಯಕನನ್ನು ಜೂನ್ 13 ರಿಂದ ಸತತ ಮೂರು ದಿನಗಳ ಕಾಲ ವಿಚಾರಣೆ ನಡೆಸಲಾಯಿತು. ನಂತರ ಅವರು ಸೋಮವಾರ ಮತ್ತು ಮಂಗಳವಾರ ಇಡಿ ಮುಂದೆ ಹಾಜರಾಗಿದ್ದರು. ಹೊಸದಾಗಿ ಅವರಿಗೆ ಸಮನ್ಸ್ ಜಾರಿ ಮಾಡಿಲ್ಲ ಅದರೆ ವಿಚಾರಣೆ ಕೊನೆಗೊಂಡಿದೆ ಎಂದು ತಿಳಿದುಬಂದಿದೆ.








