ಮೈಸೂರಿನ ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ (MUDA) ನಿವೇಶನ ಹಂಚಿಕೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂದು ಮತ್ತೊಂದು ಆರೋಪ ಮಾಡಿರುವ RTI ಕಾರ್ಯಕರ್ತ ಗಂಗರಾಜುಗೆ (Gangaraju) ವಿಚಾರಣೆಗೆ ಹಾಜರಾಗುವಂತೆ ED ನೋಟಿಸ್ ನೀಡಿತ್ತು.

ನೀವು ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ವಿಚಾರಣೆಗೆ ಹಾಜರಾಗಿ ಎಂದು ನೋಟಿಸ್ ನೀಡಲಾಗಿದ್ದು, ಹೀಗಾಗಿ ಇಂದು ಬೆಂಗಳೂರಿನ ED ಕಚೇರಿಗೆ ಗಂಗರಾಜು ಹಾಜರಾಗಲಿದ್ದಾರೆ.
ಕಳೆದ ತಿಂಗಳು (ಅಕ್ಟೋಬರ್ 28ರಂದು) ತಮ್ಮ ಆರೋಪಗಳಿಗೆ ಪೂರಕವಾದ ದಾಖಲೆಗಳನ್ನು ಗಂಗರಾಜು ED ಅಧಿಕಾರಿಗಳಿಗೆ ನೀಡಿದ್ದರು. ಬರೋಬ್ಬರಿ 8 ಕೋಟಿ ಲಂಚ ಸ್ವೀಕರಿಸಿದ ಲೋಕಾಯುಕ್ತ DYSP ಮಾಲೇಶ್ ಮಾಹಿತಿ ಸೋರಿಕೆ ಮಾಡಿದ್ದಾರೆ ಎಂದು ಗಂಗರಾಜು ಆರೋಪಿಸಿದ್ದಾರೆ.