ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ್ದ ಮೂಡಾ ಅಕ್ರಮ ನಿವೇಶನ ಹಂಚಿಕೆ ಕೇಸ್‌ನಲ್ಲಿ (Muda case) ಹೈಕೋರ್ಟ್ ನೀಡಿರುವ ಆದೇಶವನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ (Cm siddaramaiah) ಕಾನೂನು ಸಲಹೆಗಾರ ಪೊನ್ನಣ್ಣ (A S Ponnanna)ಹೇಳಿದ್ದಾರೆ.

ಈ ಬಗ್ಗೆ ದೆಹಲಿಯಲ್ಲಿ ಮಾತ್ನಾಡಿದ ಪೊನ್ನಣ್ಣ,ನಟೇಶ್ ಪ್ರಕರಣದಲ್ಲೂ ಇ.ಡಿ ತನಿಖೆ ಹೇಗೆ ಸಾಧ್ಯವಿಲ್ಲವೋ, ಅದೇ ರೀತಿ ಪಾರ್ವತಿ ಅವರ ಕೇಸ್‌ನಲ್ಲಿ ಕೂಡ ಸಾಧ್ಯವಿಲ್ಲ.ಈ 14 ಸೈಟ್ ಹೊರತುಪಡಿಸಿ ತನಿಖೆ ನಡೆಯಲಿದೆ ಎಂದಿದ್ದಾರೆ.
ಈಗಾಗಲೇ ಸೈಟ್ ಗಳನ್ನು ವಾಪಾಸ್ ನೀಡಿರುವ ಕಾರಣ ಮತ್ತೆ ತನಿಖೆ ನಡೆಯುವ ಅಗತ್ಯ ಇಲ್ಲ.ಜೊತೆಗೆ ಈ ಸೈಟ್ ನಿಂದ ಯಾವುದೇ ವ್ಯವಹಾರ ಮಾಡಿರದೆ ಇರುವುದರಿಂದ ಅಕ್ರಮ ಹಣ ವರ್ಗಾವಣೆ ಆಗಿಲ್ಲ. ಹಾಗಾಗಿ ಪಾರ್ವತಿ ಅವರ ಮೇಲೆ ತನಿಖೆ ಮಾಡುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಇದರ ಜೊತೆಗೆ ಪಾರ್ವತಿ ಪ್ರಕರಣದಲ್ಲಿ ಹೈಕೋರ್ಟ್ ಇಸಿಐಆರ್ ರದ್ದು ಮಾಡಿದೆ.ಹೀಗಾಗಿ ಈ ಕೇಸ್ ನಲ್ಲಿ ಇ.ಡಿ ತನಿಖೆ ನಡೆಸುವ ಸಾಧ್ಯತೆಗಳು ಬರುವುದಿಲ್ಲ. ಈ ಕಾರಣದಿಂದಾಗಿ ಸಿಎಂ ಸಿದ್ದರಾಮಯ್ಯ ಕುಟುಂಬದ ಮೇಲೆ ತನಿಖೆಗೆ ಮುಂದಾದ್ರೆ,ಆಗ ನ್ಯಾಯಾಂಗ ನಿಂದನೆ ಮಾಡಿದಂತಾಗಲಿದೆ ಎಂದು ಹೇಳಿದ್ದಾರೆ.