ಮೂಡ ಹಗರಣ ಸಂಬಂಧ ಲೋಕಾಯುಕ್ತರ ತನಿಖೆ ನಡುವೆ ಜಾರಿ ನಿರ್ದೇಶನಾಲಯ ಕೂಡ ತನಿಖೆ ನಡೆಸುತ್ತಿದೆ.ಶಾಂತಿನಗರದ ಇ.ಡಿ ವಿಚಾರಣೆಗೆ ಶಿವಣ್ಣ ಹಾಜರಾಗಿದ್ದಾರೆ.ಭೂಮಿ ಪರಬಾರೆ ಸಂದರ್ಭದಲ್ಲಿ ಸಹಾಯ ಮಾಡಿದ್ದ ಆರೋಪ ಹೊತ್ತಿರುವ ಶಿವಣ್ಣ, ದಾಖಲೆ ಸಮೇತ ವಿಚಾರಣೆಗೆ ಬಂದಿದ್ದಾರೆ.
ಮುಡಾ ಮಾಜಿ ಅಧ್ಯಕ್ಷ ಮರಿಗೌಡ ಆಪ್ತನಾಗಿರುವ ಶಿವಣ್ಣ, ಮಲ್ಲಿಕಾರ್ಜುನ ಸ್ವಾಮಿಗೆ ಭೂಮಿ ಮಾರಾಟ ಮಾಡಲು ಸಹಾಯ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಮುಡಾ ಕೇಸ್ ತನಿಖೆ ತೀವ್ರಗೊಳಿಸಿರುವ ಇ.ಡಿ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಹಾಗು ಸಿಎಂ ಪತ್ನಿ ಪಾರ್ವತಿ ಅವರ ವಿಚಾರಣೆ ಬಹುತೇಕ ಸನ್ನಿಹಿತ ಆಗಿದೆ ಎನ್ನಲಾಗಿದೆ.
ಇದೇ ವಾರ ಸಿದ್ದರಾಮಯ್ಯ ವಿಚಾರಣೆ ಫಿಕ್ಸ್ ಎನ್ನಲಾಗ್ತಿದೆ. ಸೋಮವಾರ ಸಿಎಂ ಬಾಮೈದ ಮಲ್ಲಿಕಾರ್ಜನ ಸ್ವಾಮಿ ವಿಚಾರಣೆ ಮಾಡಲಾಗಿತ್ತು. ಸತತ 5 ಗಂಟೆ ವಿಚಾರಣೆ ಮಾಡಿರುವ ಇ.ಡಿ ತಂಡ, ಸಿಎಂ ಮತ್ತು ಪತ್ನಿ ಪಾರ್ವತಿ ವಿಚಾರಣೆ ಬಾಕಿ ಉಳಿಸಿಕೊಂಡಿದೆ. ಇದೇ ವಾರ ಇ.ಡಿ ನೋಟಿಸ್ ಕೊಡುವ ಸಾಧ್ಯತೆ ಇದ್ದು, ಸಿದ್ದರಾಮಯ್ಯಗೆ ಇ.ಡಿ ವಿಚಾರಣೆ ಟೆನ್ಷನ್ ಶುರುವಾಗಿದೆ.