ಈ ವರ್ಷ ಕೇಂದ್ರ ಸರಕಾರ ಘೋಷಿಸಿದಂತೆ ಆದಾಯ ೨೨ ಲಕ್ಷ ಕೋಟಿ ರೂ. ವೆಚ್ಚ ಸುಮಾರು ೪೦ ಲಕ್ಷ ರೂ. ಈ ಹಿಂದೆಯೂ ಸರಕಾರ ಅಂದಾಜು ಮಾಡಿದ ಆದಾಯದ ಶೇ. ೮೦ರಷ್ಟು ಮಾತ್ರ ಸಂಗ್ರಹಿಸಲು ಸರಕಾರ ಶಕ್ತವಾಗಿತ್ತು. ಅಂದರೆ ಆದಾಯದ ಅಂದಾಜು ಮೂಲತಃ ಸುಳ್ಳೇ ಅಂದಾಜು. ಸಾರ್ವಜನಿಕ ವಲಯದ ಉದ್ಯಮಗಳನ್ನು ಮಾರಿ ಎರಡು ಲಕ್ಷ ಕೋಟಿ ಬರುತ್ತದೆ ಎಂದು ಸರಕಾರ ಹೇಳಿತ್ತು. ವಾಸ್ತವದಲ್ಲಿ ಅದರ ೫% ಕೂಡಾ ಸಾದ್ಯವಾಗಲಿಲ್ಲ.
ದೊಡ್ಡ ಗೊಂಬೆಯ ಹಿಂದೆ ಹೋಗಿ ನೋಡಿದರೆ ಅಸ್ತಿಪಂಜರದ ರೀತಿಯ ಬಿದಿರ ತಟ್ಟಿ ಕೋಲುಗಳ ಹಂದರ ತರ ಇದು ಕಾಣಿಸುತ್ತದೆ. ಈ ಬಜೆಟ್ಟಗೆ ಮೊದಲು ಇಕಾನಾಮಿಕ್ ಸರ್ವೆಯ ಅಂಕಿ-ಅಂಶ, ಚಾರ್ಟುಗಳಲ್ಲಿ ತೌಡು ಕುಟ್ಟಿರುವುದು ಕಾಣುತ್ತದೆ.
ಈ ಚಾರ್ಟ್ ನೋಡಿ: ೨೦೧೪-೧೫ರಲ್ಲಿ ೫೧ ಲಕ್ಷ ಕೋಟಿ ರೂ. ಇದ್ದದ್ದು ೨೦೨೦-೨೧ರ ವೇಳೆಗೆ ೧೦೫ ಲಕ್ಷ ಕೋಟಿ ರೂ. ಗೆ ಏರಿದೆ. ಪ್ರಸ್ತುತ ಇದು ಪ್ರಾಯಶಃ ೧೩೫ ಲಕ್ಷ ಕೋಟಿ ರೂ.ಗೆ ಏರಬಹುದು.
ಹಾಗೇ ಬಾಹ್ಯ ಸಾಲ ೩.೬೬ ಲಕ್ಷ ಕೋಟಿ ರೂ. ಇದ್ದಿದ್ದು ೨೦೨೦-೨೧ಕ್ಕೆ ೬.೧೫ ಲಕ್ಷ ಕೋಟಿ ರೂ.ಗೆ ಏರಿದೆ. ಈಗ ಅದು ಇನ್ನಷ್ಟು ಏರಿರುವ ಸಾಧ್ಯತೆ ಇದೆ.

ವಿತ್ತೀಯ ಕೊರತೆ ೨೦೧೩ರಲ್ಲಿ ೩.೧೪ ಇದ್ದದ್ದು ಈಗ ೬.೯ಕ್ಕೆ ಏರಿದೆ
ವಿವಿಧ ಕ್ಷೇತ್ರಗಳಲಲ್ಲಾದ ಮೌಲ್ಯ ವರ್ಧನೆ ನೋಡಿದರೆ ಸೇವಾಕ್ಷೇತ್ರದ ಪಾಳು ೫೫ % ಇದ್ದದ್ದು ೫೩% ಕ್ಕೆ ಇಳಿದಿದೆ. ಅಂದರೆ ಜಿಡಿಪಿಯ ಸುಮಾರು ೧೮೦ ಲಕ್ಷ ಕೋಟಿಯಲ್ಲಿ ಸೇವಾಕ್ಷೇತ್ರದ ಪಾಳು ಸುಮಾರು ೧೦೦ ಕೋಟಿ. ಇದರ ಪಾಲು ಶೇ>೨ರಷ್ಟು ಇಳಿದಿದೆ ಅಂದರೆ ಅಂದಾಜು ೩.೬ ಲಕ್ಷ ಕೋಟಿ. ಇದರಿಂದ ಬರುವ ತೆರಿಗೆ ಅಂದಾಜು ೧೫% ಅಂತ ಇಟ್ಟುಕೊಂಡರೂ ಸುಮಾರು ೫೫ ಸಾವಿರ ಕೋಟಿ ಆದಾಯ ಖೋತಾ!

ಇನ್ನು ರಾಜ್ಯಗಳ ಸ್ಥಿತಿ ನೋಡಿ ಈ ಹಿಂದೆ ರಾಜ್ಯಗಳ ಸ್ವಂತ ತೆರಿಗೆ ಪ್ರಮಾಣ ಕಡಿಮೆ ಇತ್ತು. ಯಾಕೆಂದರೆ ಕೇಂದ್ರ ಸರಕಾರ ತನ್ನ ಪಾಲನ್ನೂ ನೀಡುತ್ತಿತ್ತು. ಈಗ ಮೋದಿ ಬಂದಮೇಲೆ ಕೇಂದ್ರ ನೀಡುವ ಪ್ರಮಾಣ ಕಡಿಮೆಯಾದ ಕಾರಣ ರಾಜ್ಯಗಳು ತೆರಿಗೆ ಸುಲಿಗೆ ಹೆಚ್ಚು ಮಾಡಿವೆ.
೨೦೧೬-೧೭ರಲ್ಲಿ ರಾಜ್ಯಗಳ ತೆರಿಗೆ ವಸೂಲಿ ಪ್ರಮಾಣ ೯.೪೬ ಲಕ್ಷ ಕೋಟಿ ಇದ್ದರೆ ಈಗ ಅದು ಸುಮಾರು ೧೬ ಲಕ್ಷ ಕೋಟಿಗೆ ಏರಿದೆ.

ಇನ್ನು ಜಿಡಿಪಿಯ ಪ್ರತಿಶತ ಪ್ರಮಾಣದಲ್ಲಿ ಕಾರ್ಪೋರೇಟು ತೆರಿಗೆ ಗಮನಾರ್ಹವಾಗಿ ಇಳಿದಿದೆ. ೨೦೧೭-೧೮ರಲ್ಲಿ ಈ ತೆರಿಗೆ ೩.೩% ಇದ್ದರೆ ಈಗ ಅದು ೨.೩ಕ್ಕೆ ಇಳಿದಿದೆ. ಅಂದರೆ ಸುಮಾರು ೧.೮೦ ಲಕ್ಷ ಕೋಟಿ ಆದಾಯ ಖೋತಾ!!
