ರಾಜಕೀಯ ಪಕ್ಷಗಳ ಹಾಲಿ ಶಾಸಕ, ಸಚಿವ, ಸಂಸದರು ಸೋಲುವ ಭೀತಿಯಿಂದ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಾರೆ. ಒಂದು ಕಡೆ ಸೋಲುತ್ತಾರೆ ಒಂದು ಕಡೇ ಗೆಲ್ಲುತ್ತಾರೆ. ಆದರೆ, ಕೆಲವೊಂದು ಭಾರೀ ಎರಡು ಕ್ಷೇತ್ರಗಳಲ್ಲಿಯೂ ಗೆದ್ದು ಒಂದನ್ನು ಉಳಿಸಿಕೊಂಡು ಮತ್ತೊಂದಕ್ಕೆ ರಾಜೀನಾಮೆ ನೀಡುತ್ತಾರೆ.
ಇದರಿಂದ ಭಾರತೀಯ ಚುನಾವಣ ಆಯೋಗಕ್ಕೆ ಹೆಚ್ಚು ಹೊರೆಯಾಗುತ್ತಿದೆ. ಈ ಹೊರೆಯನ್ನು ತಪ್ಪಿಸಲು ಆಯೋಗವು ಎರಡು ದಶಕಗಳ ಹಿಂದಿನ ಪ್ರಸ್ತಾವನೆಗೆ ಇಂಬು ನೀಡಿದೆ. ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸದಂತೆ ಕಾನೂನು ತರಬೇಕೆಂದು ಆಯೋಗವು ಕೇಂದ್ರ ಸರ್ಕಾರವನ್ನ ಒತ್ತಾಯಿಸಿದೆ.
ಒಂದು ವೇಳೆ ಕಾನೂನು ತರದಿದ್ದರೆ ಕ್ಷೇತ್ರ ತೆರವು ಮಾಡಿ ಉಪಚುನಾವಣೆಗೆ ಕಾರಣರಾದವರಿಗೆ ದಂಡ ವಿಧಿಸಬೇಕು ಎಂದು ತನ್ನ ಮನವಿಯಲ್ಲಿ ತಿಳಿಸಿದೆ.
ಇತ್ತೀಚಿಗೆ ಕಾನೂನು ಸಚಿವಾಲಯ ನಡೆಸಿದ ಸಭೆಯಲ್ಲಿ ಮುಖ್ಯ ಚುನಾವಣ ಆಯುಕ್ತ ರಾಜೀವ್ ಕುಮಾರ್ ಈ ಕ್ರಮಗಳನ್ನು ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ. 2004ರಲ್ಲಿ ಈ ಪ್ರಸ್ತಾವನೆಯನ್ನು ಅಂದಿನ ಆಯುಕ್ತರು ಪ್ರಸ್ತಾಪಿಸಿದ್ದರು.
ಸದ್ಯ ಅಸ್ತಿತ್ವವಿರುವ ಕಾನೂನಿನಲ್ಲಿ ಯಾವುದೇ ಅಭ್ಯರ್ಥಿಯು ಸರ್ವತ್ರಿಕ ಚುನಾವಣೆ ಅಥವಾ ಉಪಚುನಾವಣೆಯ ಸಮಯದಲ್ಲಿ ಎರಡು ವಿಭಿನ್ನ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅನುವು ಮಾಡಕೊಡಲಾಗಿದೆ.
ಒಬ್ಬ ವ್ಯಕ್ತಿ ಒಂದು ಸ್ಥಾನಕ್ಕಿಂತ ಹೆಚ್ಚಿನ ಸ್ಥಾನಗಳಲ್ಲಿ ಜಯಿಸಿದರೆ ಒಂದನ್ನು ಉಳಿಸಿಕೊಂಡು ಮತ್ತೊಂದಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ.
ಪ್ರಜಾಪ್ರತಿನಿಧಿ ಕಾಯ್ದೆ 1966ರ ಪ್ರಕಾರ ಒಬ್ಬ ವ್ಯಕ್ತಿಯೂ ಎರಡಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸದಂತೆ ನಿರ್ಭಂಧಿಸಲಾಗಿದೆ. ಈ ತಿದ್ದುಪಡಿ ತರುವುದಕ್ಕು ಮುನ್ನ ಅಭ್ಯರ್ಥಿಗೆ ಕ್ಷೇತ್ರಗಳ ಸಂಖ್ಯೆಗೆ ಯಾವುದೇ ಅಡ್ಡಿಯಿರಲಿಲ್ಲ.
ಈ ಹಿಂದೆ 2004ರಲ್ಲಿ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಕ್ಷೇತ್ರಗಳಲ್ಲಿ ಸ್ಪರ್ಧಿಸುವುದನ್ನು ತಡೆಯಲು ಪ್ರಜಾಪ್ರತಿನಿಧಿ ಕಾಯ್ದೆಯಲ್ಲಿನ ಕೆಲವು ಅಂಶಗಳಿಗೆ ಚುನಾವಣ ಆಯೋಗ ಮಾರ್ಪಾಡು ಮಾಡಲು ಚಿಂತಿಸಿತ್ತು.
ಸದ್ಯ ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ಉಳಿಸಿಕೊಳ್ಳಲು ಮುಂದಾದರೆ ಸ್ತಾನ ತೆರವು ಮಾಡುವ ಅಭ್ಯರ್ಥಿಯು ಉಪಚುನಾವಣೆಯ ಸಂಪೂರ್ಣ ವೆಚ್ಚವನ್ ಭರಿಸಬೇಕು ಎಂದು ಆಯೋಗ ಸಭೆಯಲ್ಲಿ ಒತ್ತಾಯಿಸಿದೆ.
ವಿಧಾನಸಭೆ ಹಾಗು ವಿಧಾನಪರಿಷತ್ ಚುನಾವಣೆಗೆ 5 ಲಕ್ಷರೂಪಾಯಿ ಲೋಕಸಭೆ ಚುನಾವಣೆಗೆ10 ಲಕ್ಷ ರೂಪಾಯಿ ದಂಡವನ್ನ ನಿಗದಿಪಡಿಸಬೇಕು ಮೊತ್ತವನ್ನ ಆಗಾಗ ಪರಿಷ್ಕರಿಸಬೇಕು ಎಂದು ತನ್ನ ಮನವಿಯಲ್ಲಿ ತಿಳಿಸಿದೆ.