ಹೊಟ್ಟೆ ಹಬ್ಬದ ಸಮಸ್ಯೆ ಹೆಚ್ಚು ಜನರಲ್ಲಿ ನಾವು ನೋಡಿರುತ್ತೇವೆ ದೊಡ್ಡವರು ಮಾತ್ರವಲ್ಲದೆ ಚಿಕ್ಕ ಮಕ್ಕಳಿಗೂ ಕೂಡ ಈ ಹೊಟ್ಟೆ ಉಬ್ಬರದ ಸಮಸ್ಯೆ ಕಾಡುವುದು ಸಹಜ. ಈ ಬ್ಲೋಟಿನ್ ಪ್ರಾಬ್ಲಮ್ ಇಂದ ಹೊರಬರಲು ಸಾಕಷ್ಟು ಮನೆಯ ಮದ್ದುಗಳನ್ನು ಮಾಡ್ತೀವಿ.ಅದ್ರಲ್ಲಿ ಶುಂಠಿ ಕಷಾಯ ಕುಡಿಯುವಂತದ್ದು ಅಥವಾ ಜೀರಿಗೆಯಿಂದ ಮಾಡಿದಂತಹ ಟೀ ಸೇವನೆ ಮಾಡುವಂತದ್ದು ಇವೆಲ್ಲವನ್ನ ಮಾಡಿ ಹೊಟ್ಟೆ ಒಬ್ಬರದ ಸಮಸ್ಯೆಯಿಂದ ಹೊರ ಬರುತ್ತಿವೆ. ಆದ್ರೆ ಕೆಲವೊಂದು ಪದಾರ್ಥಗಳನ್ನ ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬರ ಹೆಚ್ಚಾಗುತ್ತದೆ, ಹಾಗಾದರೆ ಯಾವು ಪದಾರ್ಥವನ್ನು ಮಿತಿಯಿಂದ ಸೇವಿಸಬೇಕು, ಎಂಬುದರ ಮಾಹಿತಿ ಹೀಗಿದೆ.

ಕ್ರೂಸಿಫೆರಸ್ ತರಕಾರಿಗಳು
ದಿನಕ್ಕೊಂದು ತರಕಾರಿಗಳನ್ನ ಬಳಸಿ ಅಡುಗೆ ಮಾಡುವಂತದ್ದು ಸಹಜ. ಆದ್ರೆ ಈ ಪದಾರ್ಥಗಳನ್ನು ಅತಿಯಾಗಿ ಸೇವಿಸುವುದರಿಂದ ಹೊಟ್ಟೆ ಉಬ್ಬರದ ಸಮಸ್ಯೆಗೆ ಕಾರಣವಾಗುತ್ತದೆ.ಬ್ರೊಕೊಲಿ, ಹೂಕೋಸು ಮತ್ತು ಎಲೆಕೋಸುಗಳಂತಹ ತರಕಾರಿಗಳು ರಫಿನೋಸ್ ಅನ್ನು ಹೊಂದಿರುತ್ತವೆ, ಇದು ಉಬ್ಬುವಿಕೆಗೆ ಪ್ರಮುಖ ಕಾರಣವಾಗುತ್ತದೆ.

ಹಾಲಿನ ಉತ್ಪನ್ನಗಳು
ಹಾಲು ,ಪನ್ನೀರ್, ಚೀಸ್ ಮತ್ತು ಐಸ್ ಕ್ರೀಮ್ ಹೀಗೆ ಹಾಲಿನ ಉತ್ಪನ್ನಗಳನ್ನ ಅತಿಯಾಗಿ ಸೇವನೆ ಮಾಡುವುದು ಕೂಡ ಆರೋಗ್ಯಕ್ಕೆ ಒಳಿತಲ್ಲ ಕಾರಣ ಲ್ಯಾಕ್ಟೋಸ್ ಅಸಹಿಷ್ಣುತೆ ಹಾಗೂ ಹೆಚ್ಚು ಜನರಲ್ಲಿ ಇದು ಹೊಟ್ಟೆ ಉಬ್ಬುವಿಕೆಗೆ ಕಾರಣವಾಗಬಹುದು.

ಫೈಬರ್ ಹೆಚ್ಚು ಇರುವ ಆಹಾರಗಳು
ನಾರಿನ ಅಂಶ ಹೆಚ್ಚಿರುವ ಪದಾರ್ಥಗಳು ಅಂದ್ರೆ ಓಟ್ಸ್ ಮತ್ತು ಕೆಲವು ಹಣ್ಣುಗಳು ಹಾಗೂ ತರಕಾರಿಯಲ್ಲಿ ಫೈಬರ್ ಅಧಿಕವಾಗಿರುತ್ತದೆ.ಈ ಆಹಾರಗಳು ಕೆಲವು ವ್ಯಕ್ತಿಗಳಲ್ಲಿ ಹೊಟ್ಟೆ ಉಬ್ಬರಕ್ಕೆ ಕಾರಣವಾಗುತ್ತದೆ .

ಸಕ್ಕರೆ ಅಂಶ ಹೆಚ್ಚಿರುವ ಪದಾರ್ಥಗಳು
ಸಕ್ಕರೆ ಅಂಶ ಹೆಚ್ಚಿರುವ ಪದಾರ್ಥಗಳು ಅಂದ್ರೆ ಕ್ಯಾಂಡಿ ,ಚಾಕ್ಲೆಟ್ಸ್, ಕೇಕ್, ಪೇಸ್ಟ್ರಿ ಹಾಗೂ ಕೆಲವೊಂದು ಸ್ವೀಟ್ ಐಟಂಗಳನ್ನು ಹೆಚ್ಚು ತಿನ್ನುವುದರಿಂದ ಹೊಟ್ಟೆ ಉಬ್ಬರ ಕೂಡ ಜಾಸ್ತಿಯಾಗುತ್ತದೆ.








