ಹೆಣ್ಣು ಮಕ್ಕಳಿಗೆ ತಮಗೆ ಯಾವ ತರ ಕೂದಲಿದ್ದರೂ ಕೂಡ ಇನ್ನೊಬ್ಬರ ಕೂದಲನ್ನು ನೋಡಿದರೆ ನಮಗೂ ಕೂದಲು ಹೀಗಿರಬೇಕಿತ್ತು ಅಂತ ಆಸೆ ಪಡೋರು ಹೆಚ್ಚು ಜನ ಇದ್ದಾರೆ. ಸ್ಟ್ರೈಟ್ ಹೇರ್ ಇದ್ದವರಿಗೆ ಕರ್ಲಿ ಹೇರ್ ಇಷ್ಟವಾಗುತ್ತೆ ಹಾಗೂ ಕರ್ಲಿ ಹೇರ್ ಇದ್ದವರಿಗೆ ಸ್ಟ್ರೈಟ್ ಹೇರ್ ಇಷ್ಟ ಆಗುತ್ತೆ.
ಇತ್ತೀಚಿಗೆ ಬಂದಿರುವ ಉಪಕರಣದಲ್ಲಿ ಕರ್ಲಿ ಹೇರ್ ನಾ ಸ್ಟ್ರೇಟ್ ಮಾಡಿಕೊಳ್ಳ ಬಹುದು ಅಥವಾ ಸ್ಟ್ರೇಟ್ ಹೇರನ್ನ ಕರ್ಲಿ ಮಾಡಿಕೊಳ್ಳಬಹುದು. ಆದರೆ ಈ ಉಪಕರಣನ ಬಳಸುವುದರಿಂದ ಕೂದಲಿಗೆ ತುಂಬಾನೇ ಹಾನಿಯಾಗುತ್ತದೆ ,ಹೇರ್ ಫಾಲ್, ಡ್ಯಾಮೇಜ್ ಹೀಗೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತದೆ. ನಿಮ್ಮ ಕೂದಲಿನ ಆರೋಗ್ಯಕ್ಕೆ ಈ ಉಪಕರಣಗಳು ಒಳಿತಲ್ಲ. ಹಾಗಿದ್ರೆ ಈ ಸಿಂಪಲ್ ಹ್ಯಾಕ್ ಮೂಲಕ ನಿಮ್ಮ ನಿಮ್ಮ ಹೇರನ್ನ ಹೇಗೆ ಕರ್ಲ್ ಮಾಡಿಕೊಳ್ಳಬಹುದು ಅನ್ನೋದರ ಕಂಪ್ಲೀಟ್ ಡಿಟೇಲ್ಸ್ ಈ ಕೆಳಗಿನಂತಿದೆ.
ಜಡೆ
ರಾತ್ರಿ ಮಲಗುವುದಕ್ಕಿಂತ ಮುಂಚೆ ನಿಮ್ಮ ಕೂದಲನ್ನು ಎರಡು ಭಾಗಗಳನ್ನಾಗಿ ಮಾಡಿ ಎರಡು ಸೈಡ್ ಕೂಡ ಜಡೆಯನ್ನು ಹೆಣೆದು ಮಲಗಬೇಕು. ಬೆಳಗ್ಗೆ ಎದ್ದ ತಕ್ಷಣ ನೀವು ರೆಡಿಯಾಗುವ ಹೊತ್ತಿಗೆ ಆ ಜಡೆಯನ್ನು ಬಿಡಿಸಿದಾಗ. ನಿಮ್ಮ ಕೂದಲು ನ್ಯಾಚುರಲ್ ಆಗಿ ಕರ್ಲ್ ಆಗಿರುತ್ತದೆ. ಜಡೆಯನ್ನ ಹೆಣೆಯ ಬೇಕಾದರೆ ಸ್ವಲ್ಪ ಟೈಟಾಗಿಯೇ ಹೆಣೆಯೋದ್ರಿಂದ ನಿಮ್ಮ ಹೇರ್ ಕರ್ಲ್ ಹೆಚ್ಚಾಗುತ್ತದೆ..ಇದೊಂದು ಸುಲಭ ಹಾಗೂ ಸಿಂಪಲ್ ಹ್ಯಾಕ್.
ಪಿನ್ ಕರ್ಲ್
ನಿಮ್ಮ ಕೂದಲಿಗೆ ನೀರನ್ನು ಸ್ಪ್ರೇ ಮಾಡಿ ಕೆಲ ನಿಮಿಷಗಳು ಹಾಗೆ ಬಿಡಿ. ನಂತರ ನಿಮ್ಮ ಕೂದಲನ್ನು ಚಿಕ್ಕದಾಗಿ ಸೆಕ್ಷನ್ಗಳನ್ನ ಮಾಡಿ, ಒಂದೊಂದು ಸೆಕ್ಷನ್ ತಗೊಂಡು ನಿಮ್ಮ ಬೆರಳಿನ ಸಹಾಯದಿಂದ ಕೂದಲನ್ನು ಸುರುಳಿ ನಂತರ ಪಿನ್ ಮಾಡಿ.ಹೀಗೆ ಪ್ರತಿ ಸೆಕ್ಷನ್ ನ ವ್ರಾಪ್ ಮಾಡಿ. ರಾತ್ರಿ ಪೂರ್ತಿ ಹಾಗೆ ಬಿಟ್ಟು ಬೆಳಗ್ಗೆ ಎದ್ದಗ ಆ ಪಿನ್ ಗಳನ್ನು ತೆಗೆಯುವುದರಿಂದ ನ್ಯಾಚುರಲ್ ಕರ್ಲಿ ಹೇರ್ ನಿಮ್ಮದಾಗುತ್ತದೆ..
ಹೇರ್ ಬ್ಯಾಂಡ್ ಕರ್ಲ್
ಎಲಾಸ್ಟಿಕ್ ಅಥವಾ ಫ್ಯಾಬ್ರಿಕ್ ಹೇರ್ ಬಂದ ನ ನಿಮ್ಮ ತಲೆಗೆ ಹಾಕಿ.ನಂತರ ನಿಮ್ಮ ಕೂದಲನ್ನ ಚಿಕ್ಕ ಸೆಕ್ಷನ್ ಮಾಡಿ..ಹೇರ್ ಬ್ಯಾಂಡ್ ಗೆ ಟ್ವಿಸ್ಟ್ ಮಾಡಿ ಕೂದಲನ್ನ ಸೇರಿಸಿ ಪಿನ್ ಹಾಕಿ..ಹೀಗೆ ಮಾಡಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಪಿನ್ ಮತ್ತು ಬ್ಯಾಂಡ್ ನ ತೆಗೆಯುವುದರಿಂದ ಈಜಿ ಅಂಡ್ ಕರ್ಲಿ ಹೇರ್ ನಿಮ್ಮದಾಗುತ್ತದೆ..