
ಫಿಲಿಪೈನ್ಸ್ ನಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ. ಈ ಪ್ರಾಕೃತಿಕ ವಿಕೋಪದಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದಾರೆಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಇನ್ನು ಫಿಲಿಪೈನ್ಸ್ ನಲ್ಲಿ ನಡೆದಿರುವ ಭೂಕಂಪನ ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.9 ಎಂದು ತಿಳಿದುಬಂದಿದ್ದು, ಸುನಾಮಿ ಅಪ್ಪಳಿಸುವ ಸಂಭವವಿದೆ ಎಂದು ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

ಇತ್ತ ಬೋಗೊ ಪಟ್ಟಣದಲ್ಲಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ಭೂಕಂಪದ ವೇಳೆ ಭೂಕುಸಿತ ಸಂಭವಿಸಿದ್ದು, ಇದರ ಪರಿಣಾಮದಿಂದಾಗಿ ಕಲ್ಲುಬಂಡೆಗಳು ಉರಳಿ ಗುಡಿಸಲುಗಳಿಗೆ ಬಿದ್ದು, ಗುಡಿಸಲುಗಳು ನಾಶವಾಗಿದೆ. ಇನ್ನು ರಕ್ಷಣಾ ಕಾರ್ಯಚರಣೆಯನ್ನು ಕೈಗೊಳ್ಳಲಾಗಿದ್ದು, ಅವಶೇಷಡಿಯಲ್ಲಿ ಸಿಲುಕಿರುವವರನ್ನು ಪೆತ್ತೆಹಚ್ಚಿ ರಕ್ಷಿಣೆ ಮಾಡಲಾಗುತ್ತಿದೆ ಎಂದು ವಿಕೋಪ ಪರಿಹಾರ ಅಧಿಕಾರಿ ರೆಕ್ಸ್ ಯೋಟ್ ಮಾಹಿತಿ ನೀಡಿದರು.














