• Home
  • About Us
  • ಕರ್ನಾಟಕ
Thursday, December 4, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Top Story

Early puberty in Indian Girls and its related problems : ಅವಧಿಗೆ ಮುನ್ನವೇ ಋತುಮಾತಿಯಾಗುತ್ತಿರುವ ಭಾರತೀಯ ಹೆಣ್ಣುಮಕ್ಕಳು ಮತ್ತು ಅದರಿಂದಾಗುವ ಸಮಸ್ಯೆಗಳು

Any Mind by Any Mind
June 3, 2023
in Top Story, ಇತರೆ / Others, ಇದೀಗ, ರಾಜಕೀಯ
0
Early puberty in Indian Girls and its related problems : ಅವಧಿಗೆ ಮುನ್ನವೇ ಋತುಮಾತಿಯಾಗುತ್ತಿರುವ ಭಾರತೀಯ ಹೆಣ್ಣುಮಕ್ಕಳು ಮತ್ತು ಅದರಿಂದಾಗುವ ಸಮಸ್ಯೆಗಳು
Share on WhatsAppShare on FacebookShare on Telegram

ಹುಡುಗಿಯೊಬ್ಬಳು ಋತುಮತಿಯಾಗುವುದು ಅತ್ಯಂತ ಸಹಜ ನೈಸರ್ಗಿಕ ಪ್ರಕಿಯೆಯಾಗಿದ್ದರೂ ಸಹ ಬದುಕಿನ ಆ ಘಟ್ಟವು ಅತ್ಯಂತ ಅಸ್ಥಿರ ಮತ್ತು ಭಾವನಾತ್ಮಕ ಏರುಪೇರುಗಳ ಹಂತವೂ ಹೌದು. ಅದರಲ್ಲೂ ಗೊಂಬೆಗಳ ಜೊತೆ, ಆಟಿಕೆಗಳ ಜೊತೆ ಆಟವಾಡುವ ವಯಸ್ಸಲ್ಲಿ ಹುಡುಗಿ ಋತುಮತಿಯಾದರೆ ಅದು ಅವಳ ಮನಸ್ಸಿನ ಮೇಲೆ ಮತ್ತು ದೇಹದ ಮೇಲೆ ಬೀರುವ ಪ್ರಭಾವ ಅಪಾರ. ಅಂಥದ್ದರಲ್ಲಿ ಈಗೀಗ ಭಾರತದ ನಗರ ಪ್ರದೇಶದ ಹುಡುಗಿಯರಲ್ಲಿ ಎಂಟು ವರ್ಷ ಆಗುವ ಮುನ್ನವೇ ಋತುಮತಿಯಾಗುತ್ತಿರುವ ಅಥವಾ ಋತುಸಾವ್ರದ ಆರಂಭಿಕ ಲಕ್ಷಣಗಳು ಗೋಚರಿಸುತ್ತಿವೆ. ಗ್ರಾಮೀಣ ಪ್ರದೇಶದಲ್ಲಿ ಇನ್ನೂ 15-16 ವರ್ಷ ವಯಸ್ಸಿನಲ್ಲೇ ಹುಡುಗಿಯರು ಮುಟ್ಟಾಗುವುತ್ತಿರುವುದು ನಿರಾಂತಕ ಮೂಡಿಸಿದರೂ ನಗರದ ಪ್ರವೃತ್ತಿಯೇ ಹಳ್ಳಿಗಳಿಗೆ ಹಬ್ಬದು ಎಂದು ಹೇಳಲು ಸಾಧ್ಯವಿಲ್ಲ‌.

ADVERTISEMENT

ಅವಧಿಗೆ ಮೊದಲೇ ಮುಟ್ಟಾಗುವುದು ಬಹಳಷ್ಟು ಮಾನಸಿಕ ಸಮಸ್ಯೆಗಳಿಗೆ ಮತ್ತು ದೈಹಿಕ ಅಸ್ವಸ್ಥತೆಗಳಿಗೆ ಕಾರಣವಾಗುತ್ತದೆ. ಏಕೆಂದರೆ ಮನಸ್ಸು ಮತ್ತು ದೇಹವು ಬದಲಾವಣೆಗಳನ್ನು ಎದುರಿಸಲು ಸಾಕಷ್ಟು ಪ್ರಬುದ್ಧವಾಗಿಲ್ಲದೇ ಇದ್ದಾಗ ಮೂಡ್ ಬದಲಾವಣೆಗಳನ್ನು, PMS ತರಹದ ಲಕ್ಷಣಗಳನ್ನು ಮತ್ತು ಇತರ ‘ಹದಿಹರೆಯದ ಸಮಸ್ಯೆಗಳನ್ನು’ ಎದುರಿಸಲು ಕಷ್ಟವಾಗುತ್ತದೆ . ಈ ಬಗ್ಗೆ ಮಾತನಾಡಿರುವ ದೆಹಲಿಯ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಹಾಸ್ಪಿಟಲ್‌ನ ಪೀಡಿಯಾಟ್ರಿಕ್ ಎಂಡೋಕ್ರೈನಾಲಜಿಯ ಅಸೋಸಿಯೇಟ್ ಕನ್ಸಲ್ಟೆಂಟ್ ಆಗಿರುವ ಡಾ. ವೈಶಾಕಿ ರುಸ್ತಗಿಯವರು “ಅವಧಿಗೆ ಮುನ್ನವೇ ಋತುಮತಿಯಾಗುವುದರಿಂದ ಚಿಕ್ಕ ವಯಸ್ಸಿನಲ್ಲೇ ಲೈಂಗಿಕ ಪ್ರಚೋದನೆಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಹುಡುಗಿಯರು ಈ ಪ್ರಚೋದನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ರಚನಾತ್ಮಕವಾಗಿ ವ್ಯವಹರಿಸಲು ಮಾನಸಿಕವಾಗಿ ಪ್ರಬುದ್ಧವಾಗಿಲ್ಲದಿರುವುದರಿಂದ ಇದು ಅಪಾಯಕಾರಿ” ಎನ್ನುತ್ತಾರೆ.

ತಮ್ಮ ಗೆಳತಿಯರಿಗಿಂತ ಮುಂಚೆಯೇ ಋತುಮತಿಯಾಗುವ ಹುಡುಗಿಯರು ಸಾಮಾನ್ಯವಾಗಿ ಏನು ಮಾಡಬೇಕೆಂದು ತಿಳಿಯದೆ ಗಾಬರಿಯಾಗುತ್ತಾರೆ. ಗೈನೆಕ್‌ವರ್ಲ್ಡ್‌ನ ನಿರ್ದೇಶಕ ಮತ್ತು ಇಂಡಿಯನ್ ಸೊಸೈಟಿ ಆಫ್ ಅಸಿಸ್ಟೆಡ್ ರಿಪ್ರೊಡಕ್ಷನ್ (ISAR) ನ ಅಧ್ಯಕ್ಷರಾದ ಡಾ ದುರು ಷಾ “ದೇಹದ ಬಗ್ಗೆ ವಿಪರೀತವಾಗಿ ಚಿಂತಿಸುವ ಅವರಲ್ಲಿ ಆತ್ಮವಿಶ್ವಾಸದ ಮಟ್ಟವೂ ಕಡಿಮೆ ಇರುತ್ತದೆ. ಇದರಿಂದ ಅವರು ಖಿನ್ನತೆಗೂ ಒಳಗಾಗಬಹುದು. ಪೋಷಕರು ಇಲ್ಲಿ ಮುಖ್ಯವಾದ ಪಾತ್ರ ವಹಿಸಬೇಕಾಗುತ್ತದೆ. ಅಗತ್ಯ ಬಿದ್ದರೆ ಹುಡುಗಿ ಮತ್ತು ಪೋಷಕರು ಕೌನ್ಸಿಲಿಂಗ್ ಅನ್ನೂ ಪಡೆಯಬೇಕು. ಮಗು ಈಸ್ಟ್ರೊಜೆನ್ ಅಥವಾ ಟೆಸ್ಟೋಸ್ಟೆರಾನ್ ಹೊಂದಿರುವ ಹಾರ್ಮೋನ್ ಔಷಧಿಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳುವುದಿಲ್ಲ ಎಂಬುವುದನ್ನೂ ಪೋಷಕರು ಖಚಿತಪಡಿಸಿಕೊಳ್ಳುವುದು ಮುಖ್ಯವಾಗಿದೆ” ಎನ್ನುತ್ತಾರೆ.

ಮಥುರಾದ ನಯತಿ ಮಲ್ಟಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರಜ್ಞರಾಗಿರುವ
ಡಾ. ವರ್ಣ ವೇಣುಗೋಪಾಲ್ ರಾವ್ ಅವರು ಹುಡುಗಿಯರು ಬಹುಬೇಗ ಋತುಮತಿಯಾಗಲು ಕೆಲವು ಕಾರಣಗಳನ್ನು ಪಟ್ಟಿ ಮಾಡಿದ್ದಾರೆ.

1.ಜಡ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಗಳಿಂದ ಬಾಲ್ಯದ ಬೊಜ್ಜು ಹೆಚ್ಚಾಗುವುದು.

  1. ಹಾರ್ಮೋನುಗಳು ಮತ್ತು ಆ್ಯಂಟಿಬಯಾಟಿಕ್ ಬಳಸಿದ ಫಾರಂ ಕೋಳಿ ಮತ್ತು ಮಾಂಸವನ್ನು ತಿನ್ನುವುದು . ಜೆನೆಟಿಕ್ ಇಂಜಿನಿಯರಿಂಗ್ ಮಾಡಿರುವ ತರಕಾರಿಗಳು ಮತ್ತು ಧಾನ್ಯಗಳನ್ನು ತಿನ್ನುವುದು.
    3.ಪ್ಲಾಸ್ಟಿಕ್‌ಗಳಲ್ಲಿರುವ ಬಿಸ್ಫೆನಾಲ್ ಎ (BPA) ನಂತಹ ಸಂಶ್ಲೇಷಿತ ರಾಸಾಯನಿಕಗಳು
  2. ಡಿಕ್ಲೋಬೆಂಜಿನ್‌ಗಳ ಅತಿಯಾದ ಬಳಕೆ
  3. ಕೀಟನಾಶಕಗಳು.
  4. ಮಗುವಿನ ಬಾಲ್ಯದಲ್ಲಿರುವ ತೀವ್ರವಾದ ಒತ್ತಡ ಮತ್ತು ಸಂಘರ್ಷ
  5. ಮಗು ಗರ್ಭದಲ್ಲಿದ್ದಾಗ ತಾಯಿಯು ಸೇವಿಸುವ ಸೋಯಾ ಬೆರೆತ ಆಹಾರ
  6. ಬಹುಪಾಲು ಸಾರ್ವಜನಿಕ ನೀರಿನ ಸರಬರಾಜುಗಳಿಗೆ ಸೇರಿಸಲಾದ ಫ್ಲೋರೈಡ್ ಮೆಲಟೋನಿನ್

ಆದರೆ ಜೀವನಶೈಲಿ, ಪರಿಸರ ಮಾಲಿನ್ಯ ಮತ್ತು ಸಾಮಾಜಿಕ ಅಂಶಗಳಂತಹ ಸಂಗತಿಗಳು ಹುಡುಗಿಯರು ಬೇಗ ಋತುಮತಿಯಾಗುವುದಕ್ಕೆ ಪ್ರಮುಖ ಕಾರಣಗಳಾಗಿದ್ದರೂ ಸಹ ಸಹ ಪೋಷಕರು ಇವೇ ಕಾರಣಗಳಿಂದ ತಮ್ಮ ಮಗು ಬೇಗ ಋತುಮತಿಯಾಗಿದೆ ಎಂದು ನಿರ್ಣಯಕ್ಜೆ ಬಾರದೇ ಆ ಮಗುವನ್ನು ವೈದ್ಯರ ಬಳಿ ಒರೀಕ್ಷೆ ಮಾಡಿಸಿಕೊಳ್ಳುವುದು ಒಳಿತು ಎನ್ನುತ್ತಾರೆ ತಜ್ಞರು.

ನಾವು ಏನು ಮಾಡಬಹುದು
ಮಗುವು ಅವಧಿಗೂ ಮುನ್ನ ಋತುಮತಿಯಾದರೆ ಕೆಲವೇ ಕೆಲವು ಪೋಷಕರು ಮಾತ್ರ ವೈದರನ್ನು ಸಂಪರ್ಕಿಸುತ್ತಾರೆ. “ಸಮಾಜವು ಬೇಗ ಋತುಮತಿಯಾಗುವುದನ್ನು ಒಂದು ಟ್ರೆಂಡ್ ಆಗಿ ಸ್ವೀಕರಿಸಲು ಪ್ರಾರಂಭಿಸಿದೆ. ನನ್ನ 25 ವರ್ಷಗಳ ಅನುಭವದಲ್ಲಿ, ನಾನು ಕೆಲವೇ ಕೆಲವು ಅಕಾಲಿಕ‌ ಮುಟ್ಟಿನ ಪ್ರಕರಣಗಳನ್ನು ಕಂಡಿದ್ದೇನೆ” ಎನ್ನುವ ವೇಣುಗೋಪಾಲ್ ಅವರು

  1. ಮಗುವಿಗೆ ಕಡ್ಡಾಯವಾಗಿ ಸ್ತನಪಾನ ಮಾಡುವುದು
  2. ಗರ್ಭಿಣಿಯಾಗಿದ್ದಾಗ ಸೋಯಾ ರಹಿತ ಆಹಾರಗಳನ್ನು ಬಳಸುವುದು ಮತ್ತು ಮಗುವಿಗೂ ಸೋಯಾ ಇಲ್ಲದ ಆಹಾರಗಳನ್ನು ನೀಡುವುದು
  3. ಸಾವಯವ ಆಹಾರವನ್ನು ಸೇವಿಸುವುದು ಮತ್ತು ತಾಜಾ ಮಾಂಸ ಸೇವಿಸುವುದು
  4. ಸಂಸ್ಕರಿಸಿದ ಆಹಾರಗಳನ್ನು ತ್ಯಜಿಸುವುದು
  5. ಆಹಾರಗಳನ್ನು ಪ್ಲಾಸ್ಟಿಕ್‌ಗೆ ಬದಲಾಗಿ ಗಾಜಿನಲ್ಲಿ ಸಂಗ್ರಹಿಸಿಡುವುದು
    6.ಮಗುವಿನ ಆಟಿಕೆಗಳನ್ನು ಬಿಪಿಎ ಮುಕ್ತವಾಗಿರುವಂತೆ ನೋಡಿಕೊಳ್ಳುವುದು
    ಮುಂತಾದ ಕ್ರಮಗಳ ಮೂಲಕ ಅವಧಿಗೆ‌ ಮುನ್ನ ಋತುಮತಿಯಾಗುವುದನ್ನು ತಪ್ಪಿಸಬಹುದು ಅನ್ನುತ್ತಾರೆ.
Tags: Early pubertyIndian Girlsmenopause beforerelated problemssymptoms
Previous Post

Odisha Tragedy : ಒಡಿಶಾ ರೈಲು ದುರಂತ ; ಅಪಘಾತದಲ್ಲಿ ಮೃತಪಟ್ಟಿವರಿಗೆ ರಷ್ಯಾ ಅಧ್ಯಕ್ಷ ವ್ಲಾದ್ಮಿರ್ ಪುಟಿನ್‌ ಸಂತಾಪ..!

Next Post

PM Modi arrives at crash site in Balasore : ಒಡಿಶಾ ದುರಂತ : ರೈಲು ಅಪಘಾತದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

Related Posts

Top Story

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

by ಪ್ರತಿಧ್ವನಿ
December 3, 2025
0

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಅನ್ನಪೂರ್ಣದೇವಿ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರೊಂದಿಗೆ ಚರ್ಚೆ. ನೌಕರರ ಪ್ರಮುಖರ ಜತೆ ಅನ್ನಪೂರ್ಣದೇವಿ ಅವರನ್ನು ಭೇಟಿಯಾಗಿ ಚರ್ಚಿಸಿದ ಹೆಚ್ಡಿಕೆ...

Read moreDetails

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

December 3, 2025

ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್..!!

December 3, 2025
Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

December 3, 2025
ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

December 3, 2025
Next Post
PM Modi arrives at crash site in Balasore : ಒಡಿಶಾ ದುರಂತ : ರೈಲು ಅಪಘಾತದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

PM Modi arrives at crash site in Balasore : ಒಡಿಶಾ ದುರಂತ : ರೈಲು ಅಪಘಾತದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

Please login to join discussion

Recent News

Top Story

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

by ಪ್ರತಿಧ್ವನಿ
December 3, 2025
Top Story

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

by ಪ್ರತಿಧ್ವನಿ
December 3, 2025
Top Story

ಅದ್ದೂರಿಯಾಗಿ ನಡೆಯಲಿದೆ “JAM JUNXION” ಬೆಂಗಳೂರಿನ ಬಿಗೆಸ್ಟ್ ಮ್ಯೂಸಿಕಲ್ ನೈಟ್..!!

by ಪ್ರತಿಧ್ವನಿ
December 3, 2025
Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!
Top Story

Raj Bhavan: ಕರ್ನಾಟಕದ ರಾಜ ಭವನದ ಹೆಸರು ದಿಢೀರ್‌ ಬದಲಾವಣೆ..!!

by ಪ್ರತಿಧ್ವನಿ
December 3, 2025
ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
Top Story

ವೇದಿಕೆಯಲ್ಲೇ ಕೆ.ಸಿ ವೇಣುಗೋಪಾಲ್ ಜೊತೆ ಗುಸು ಗುಸು- ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

by ಪ್ರತಿಧ್ವನಿ
December 3, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HDK: ಅಂಗನವಾಡಿ, ಅಕ್ಷರ ದಾಸೋಹ, ಆಶಾ ನೌಕರರ ಬೇಡಿಕೆ ಬಹುತೇಕ ಈಡೇರಿಕೆಗೆ ಕೇಂದ್ರ ಸಮ್ಮತಿ..!!

December 3, 2025

KJ George: ಇಂಧನ ಇಲಾಖೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ನಡೆಸಿದ ಕೆಜೆ ಜಾರ್ಜ್‌..!!

December 3, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!