ಇದ್ದಕ್ಕಿದ್ದ ಹಾಗೆ ಕೆಲವು ಬಾರಿ ಕಿವಿ ನೋವು ಶುರುವಾಗುತ್ತದೆ.ಸಾಮಾನ್ಯವಾಗಿ ರಾತ್ರಿ ಮಲಗಿದಾಗ ಅಥವಾ ತಲೆನೋವು ಶೀತ ನೆಗಡಿ ಆದಾಗಲೂ ಕಿವಿ ನೋವು ಕಾಣಿಸಿಕೊಳ್ಳುತ್ತದೆ. ಕಿವಿ ನೋವಿನ ಜೊತೆಗೆ ತಲೆನೋವು ಕೂಡ ಕಾಣಿಸಿಕೊಳ್ಳುತ್ತದೆ ಇಂಥ ಸಂದರ್ಭದಲ್ಲಿ ಒಂದು ರೀತಿಯ ಕಿರಿಕಿರಿ ಹಾಗೂ ರಾತ್ರಿ ಸಮಯದಲ್ಲಿ ನಿದ್ದೆಯೂ ಬರುವುದಿಲ್ಲ. ಸಡನ್ ಆಗಿ ಕಿವಿ ನೋವು ಕಾಣಿಸಿಕೊಂಡಾಗ ಗಾಬರಿಯಾಗುವ ಅವಶ್ಯಕತೆ ಇಲ್ಲ.ಬದಲಿಗೆ ಈ ಸರಳ ಮದ್ದುಗಳನ್ನ ಉಪಯೋಗಿಸಿ ನೋವಿನಿಂದ ಹೊರಬನ್ನಿ.

ಸಾಸಿವೆ ಎಣ್ಣೆ
ಇದ್ದಕ್ಕಿದ್ದ ಹಾಗೆ ಕಿವಿ ನೋವು ಶುರುವಾದಾಗ ಒಂದೆರಡು ಡ್ರಾಪ್ ಸಾಸಿವೆ ಎಣ್ಣೆಯನ್ನು ಕಿವಿಯೊಳಗೆ ಹಾಕಿ ಕೆಲ ನಿಮಿಷಗಳ ಕಾಲ ಹಾಗೆ ಬಿಡಿ. ಇದರಿಂದ ಕಿವಿ ನೋವು ತಕ್ಷಣವೇ ಕಡಿಮೆಯಾಗುತ್ತದೆ. ಸಾಸಿವೆ ಎಣ್ಣೆಯಲ್ಲಿ ನೋವನ್ನ ಹೀರಿಕೊಳ್ಳುವ ಶಕ್ತಿ ಇರುತ್ತದೆ. ಇದೊಂದು ಉತ್ತಮ ಔಷಧಿ.
ಶುಂಠಿ
ಕಿವಿ ನೋವು ಬಂದಾಗ ಶುಂಠಿಯನ್ನು ಕೂಡ ಔಷಧಿಯಾಗಿ ಉಪಯೋಗಿಸಬಹುದು. ಶುಂಠಿಯನ್ನು ಜಜ್ಜಿ ರಸ ತೆಗೆದು ಕಿವಿಯ ಹೊರಭಾಗದಲ್ಲಿ ಆ ರಸವನ್ನು ಹಾಕಿ ಕೆಲ ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿನಲ್ಲಿ ಒಂದು ಟವಲ್ ನೆನಸಿ ಅದರಿಂದ ಕಿವಿಯನ್ನ ವರಿಸುವುದರಿಂದ ಬೇಗನೆ ಕಿವಿ ನೋವು ನಿವಾರಣೆಯಾಗುತ್ತದೆ.

ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಸಾಕಷ್ಟು ಔಷಧಿ ಅಂಶಗಳಿದ್ದು ನೋವನ್ನ ನಿವಾರಣೆ ಮಾಡಲು ಉತ್ತಮ. ಎರಡರಿಂದ ಮೂರು ಎಸಳು ಬೆಳ್ಳುಳ್ಳಿಯನ್ನು ಜಜ್ಜಿ ಸಾಸಿವೆ ಎಣ್ಣೆಯೊಂದಿಗೆ ಮಿಶ್ರಣ ಮಾಡಿ ಸ್ವಲ್ಪ ಬಿಸಿ ಮಾಡಿ. ಕಿವಿಯ ಹೊರ ಭಾಗದಲ್ಲಿ ಆ ಎಣ್ಣೆಯನ್ನು ಆ ಎಣ್ಣೆಯನ್ನ ಹಾಕುವುದರಿಂದ ಕಿವಿ ನೋವು ತಕ್ಷಣಕ್ಕೆ ಕಡಿಮೆ ಆಗುತ್ತದೆ.
ಒಟ್ಟಿನಲ್ಲಿ ಕಿವಿನೋವು ಬಂದಾಗ ಹೆಚ್ಚು ಚಿಂತಿಸಬೇಡಿ ಬದಲಿಗೆ ಈ ಮದ್ದನ್ನ ಟ್ರೈ ಮಾಡುವುದರಿಂದ ತಕ್ಷಣಕ್ಕೆ ಕಿವಿ ನೋವು ಕಡಿಮೆ ಆಗುತ್ತದೆ.
