• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದಸರಾ ಮಹೋತ್ಸವ ಜನರ ಉತ್ಸವ ಆಗಬೇಕು: ಸಿ.ಎಂ.ಸಿದ್ದರಾಮಯ್ಯ

ಪ್ರತಿಧ್ವನಿ by ಪ್ರತಿಧ್ವನಿ
August 12, 2024
in Top Story, ಇದೀಗ, ಕರ್ನಾಟಕ, ರಾಜಕೀಯ, ವಿಶೇಷ
0
Share on WhatsAppShare on FacebookShare on Telegram

ದಸರಾ ಮಹೋತ್ಸವ ಆಯೋಜನೆಯ ಸಂಬಂಧ ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಹೈ ಪವರ್ ಕಮಿಟಿ ಸಭೆಯಲ್ಲಿ ಸಿ.ಎಂ.ಸಿದ್ದರಾಮಯ್ಯರವರು ದಸರಾ ಉತ್ಸವ ಜನರ ಉತ್ಸವ ಆಗಬೇಕು. ಕೊರೊನಾ – ಬರದ ಕಾರಣಕ್ಕೆ ಕಳೆದ ಬಾರಿ ವಿಜೃಂಭಣೆಯಿಂದ ಆಚರಣೆ ಮಾಡಲಾಗಲಿಲ್ಲ, ಆದರೆ ಈ ಬಾರಿಯ ದಸರಾ ಅದ್ಧೂರಿಯಾಗಿ ನಡೆಸೋಣ ಎಂದು ತಿಳಿಸಿದರು.

ADVERTISEMENT

ಸ್ಥಳೀಯ ಕಲಾವಿದರಿಗೆ ಹೆಚ್ಚಿನ‌ ಅವಕಾಶ ನೀಡಬೇಕು. ನಮ್ಮ ಕಲಾವಿದರು ಹೆಚ್ಚು ಸಮರ್ಥರಿದ್ದಾರೆ. ಟ್ಯಾಬ್ಲೋಗಳು ಹೆಚ್ಚು ಆಕರ್ಷಕ ಮತ್ತು ಅರ್ಥಪೂರ್ಣವಾಗಿರಬೇಕು. ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆ, ಆಹಾರ, ವಸ್ತು ಪ್ರದರ್ಶನ, ಕುಸ್ತಿ ಪ್ರದರ್ಶನ, ದೀಪಾಂಲಕಾರ ಸೇರಿ ಪ್ರತಿಯೊಂದೂ ಆಕರ್ಷಣೀಯ ಮತ್ತು ಅರ್ಥಪೂರ್ಣ ಆಗಿರಬೇಕು.

ಗ್ಯಾರಂಟಿ ಯೋಜನೆಗಳು ಮತ್ತು ಸರ್ಕಾರದ ಸಾರ್ಥಕ‌ ಕೆಲಸಗಳ ಪ್ರದರ್ಶನ ಮತ್ತು ತಿಳುವಳಿಕೆ ಮೂಡಿಸಬೇಕು. ಟ್ಯಾಬ್ಲೋಗಳಲ್ಲಿ ಹೊಸತನ ಇರಲಿ.
ಐತಿಹಾಸಿಕ ನಾಡ ಹಬ್ಬಕ್ಕೆ ಅಗತ್ಯವಿದ್ದಷ್ಟು ಹಣವನ್ನು ನಾವು ನೀಡುತ್ತೇವೆ.

ದೀಪಾಲಂಕಾರ ಈ ಬಾರಿ 21 ದಿನ ಇರಲಿ.
ಯುವ ದಸರಾ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸ್ಥಳೀಯ ಕಲೆ, ಪ್ರತಿಭೆ ಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಗೋಲ್ಡ್ ಕಾರ್ಡ್ ಗಳನ್ನು ಮುಂಚಿತವಾಗಿ ಮಾಡಬೇಕು. ಪಾರ್ಕಿಂಗ್, ಟ್ರಾಫಿಕ್, ಬಂದೋಬಸ್ತ್ ಕಡೆಗೆ ಪೊಲೀಸ್ ಇಲಾಖೆ ಹೆಚ್ಚಿನ ಗಮನ ಕೊಡಬೇಕು.

‘ಕರ್ನಾಟಕ ಸಂಭ್ರಮ -50’ ನವೆಂಬರ್ ವರೆಗೂ ನಡೆಯಲಿದೆ.
ದಸರಾದಲ್ಲಿ ಇದನ್ನು ಗಮನದಲ್ಲಿ ಇಟ್ಟುಕೊಂಡು ಕಾರ್ಯಕ್ರಮ ರೂಪಿಸಬೇಕು. ಏರ್ ಶೋಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದು ಮನವಿ ಮಾಡಲಾಗುವುದು. ಸ್ವಲ್ಪ ಹೆಚ್ಚಿನ ಸಮಯ ಏರ್ ಶೋ ನಡೆಸಲೂ ವಿನಂತಿಸಲಾಗುವುದು.

ಅಧಿಕಾರಿಗಳು ಈಗಿನಿಂದಲೇ ಸಿದ್ಧತೆ ಆರಂಭಿಸಬೇಕು. ಮಾಮೂಲು ಹಳೆ ಪದ್ಧತಿಗಳಲ್ಲೇ ಆಯೋಜನೆ ಮಾಡುವುದಕ್ಕಿಂತ ಈ ಬಾರಿಯ ದಸರಾದಲ್ಲಿ ವಿಶೇಷತೆ ಇರಲಿ ಎಂದು ವಿವರಿಸಿದರು..

Tags: congressDKShivakumarGT Devegowdahd kumarswamympMysoreMysore DusseraYaduveer Krishnadatta Chamaraja Wodeyarಸಿದ್ದರಾಮಯ್ಯ
Previous Post

ಟಿಬಿ ಡ್ಯಾಮ್ ಡ್ಯಾಮೇಜ್ : ನಿನ್ನೆಯಿಂದ ಇಲ್ಲಿಯವರೆಗೆ 13 ಟಿಎಂಸಿ ನೀರು ಖಾಲಿ

Next Post

ವಿದ್ಯುದ್ದೀಪಗಳಿಂದ ಝಗಮಗಿಸಲಿದೆ ಮೈಸೂರು: ಇಂಧನ ಸಚಿವ ಕೆ.ಜೆ. ಜಾರ್ಜ್‌

Related Posts

ಆರೋಪಗಳ ನಡುವೆಯೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಡಿಕೆಶಿ ಹೇಳಿದ್ದೇನು?
Top Story

ಆರೋಪಗಳ ನಡುವೆಯೇ ಸಚಿವ ಸ್ಥಾನಕ್ಕೆ ಬಿ. ನಾಗೇಂದ್ರ ರಾಜೀನಾಮೆ; ಡಿಕೆಶಿ ಹೇಳಿದ್ದೇನು?

by ಪ್ರತಿಧ್ವನಿ
August 29, 2026
0

ಬೆಂಗಳೂರು, ಆ. 28: ಪಕ್ಷಕ್ಕೆ ಮುಜುಗರ ಉಂಟಾಗಬಾರದು ಎಂಬ ಕಾರಣಕ್ಕೆ ಸಚಿವ ಬಿ. ನಾಗೇಂದ್ರ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕಾಂಗ್ರೆಸ್‌ ಹೈಕಮಾಂಡ್‌ ಜತೆ ಚರ್ಚಿಸಿ...

Read moreDetails
ಜಾತಿ ನೋಡದೆ ಆರ್ಥಿಕ ಸ್ಥಿತಿ ಆಧರಿಸಿ ಗ್ಯಾರಂಟಿ ಯೋಜನೆ ಜಾರಿ: ಡಿ.ಕೆ. ಶಿವಕುಮಾರ್

ಜಾತಿ ನೋಡದೆ ಆರ್ಥಿಕ ಸ್ಥಿತಿ ಆಧರಿಸಿ ಗ್ಯಾರಂಟಿ ಯೋಜನೆ ಜಾರಿ: ಡಿ.ಕೆ. ಶಿವಕುಮಾರ್

August 29, 2026
‘ಹಣ ಕೊಟ್ಟರೆ ಜೈಲಿನಲ್ಲಿ ರಾಜಾತಿಥ್ಯ’! ಮಂಡ್ಯ ಕಾರಾಗೃಹದ ಪತ್ರದಲ್ಲಿ ಗಂಭೀರ ಆರೋಪ

‘ಹಣ ಕೊಟ್ಟರೆ ಜೈಲಿನಲ್ಲಿ ರಾಜಾತಿಥ್ಯ’! ಮಂಡ್ಯ ಕಾರಾಗೃಹದ ಪತ್ರದಲ್ಲಿ ಗಂಭೀರ ಆರೋಪ

August 29, 2026
ರೋಗಿಗಳ ಜೀವದ ಜೊತೆ ಚೆಲ್ಲಾಟವೇ? ರಾಜ್ಯದಲ್ಲಿ 98 ಕಳಪೆ ಔಷಧ ಪತ್ತೆ

ರೋಗಿಗಳ ಜೀವದ ಜೊತೆ ಚೆಲ್ಲಾಟವೇ? ರಾಜ್ಯದಲ್ಲಿ 98 ಕಳಪೆ ಔಷಧ ಪತ್ತೆ

August 29, 2026
ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ

ಎಲ್ಲವೂ ಸರಿ ಇದೆಯೇ ʼSIRʼ? ಕರ್ನಾಟಕದ ಪ್ರಶ್ನೆ

August 29, 2026
Next Post

ವಿದ್ಯುದ್ದೀಪಗಳಿಂದ ಝಗಮಗಿಸಲಿದೆ ಮೈಸೂರು: ಇಂಧನ ಸಚಿವ ಕೆ.ಜೆ. ಜಾರ್ಜ್‌

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada