ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕೊರೋನಾ ಲಾಕ್ ಡೌನ್ನಿಂದಾಗಿ ದಿಕ್ಕಾಪಾಲಾಗಿರುವ ಆಟೋ ಚಾಲಕರ ಜೀವನ ಇದೀಗ ಬೀದಿಗೆ ಬಿದ್ದಿದೆ. ಕೊರೋನಾ ಎರಡನೇ ಅಲೆ ಬಳಿಕ ನಗರದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಆಟೋ ಚಾಲಕರ ಬದುಕು ದುಸ್ತರವಾಗಿದೆ. ದುಡಿಮೆ ಇಲ್ಲದೆ ಇಎಮ್ಐ ಕಟ್ಟಲಾಗದೆ ನಗರದಲ್ಲಿ 30 ಸಾವಿರಕ್ಕೂ ಹೆಚ್ಚು ಆಟೋಗಳನ್ನು ಫೈನಾನ್ಸ್ ಹಾಗೂ ಸಾಲ ನೀಡಿರುವ ಕಂಪನಿಗಳು ಸೀಜ್ ಮಾಡಿದೆ.
ನಗರದಲ್ಲಿ ಒಟ್ಟು 2.20 ಲಕ್ಷಕ್ಕೂ ಅಧಿಕ ಆಟೋಗಳು ಓಡಾಡುತ್ತಿತ್ತು. ಆದರೆ, ಈ ಪೈಕಿ ಸುಮಾರು 30 ಸಾವಿರ ಆಟೋಗಳ ಮಾಲೀಕರು ಸಾಲ ಮರುಪಾವತಿ ಮಾಡದ ಹಿನ್ನೆಲೆ ಆಟೋಗಳನ್ನು ಸೀಜ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಕೊರೋನಾ ಎರಡನೇ ಅಲೆ ತಗ್ಗಿದ ಬಳಿಕ ನಗರದಲ್ಲಿ ಆಟೋಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ನಿರೀಕ್ಷಿತ ಮಟ್ಟದಲ್ಲಿ ದುಡಿಮೆ ಆಗದ ಹಿನ್ನೆಲೆ ಆಟೋಚಾಲಕರು ಆಟೋ ಬಿಟ್ಟು ಇತರೆ ವೃತಿಯಲ್ಲಿ ತೊಡಗಿದ್ದಾರೆ. ಆಟೋದಲ್ಲಿ ತರಕಾರಿ, ಹಣ್ಣು, ತಿಂಡಿ ತಿನಿಸುಗಳ ಮಾರಾಟಕ್ಕೆ ಇಳಿದಿರುವುದು ಕಂಡು ಬರುತ್ತದೆ.
ಕೊರೋನಾ ಬರುವ ಮೊದಲು ನಗರದಲ್ಲಿ 2.20 ಲಕ್ಷ ಆಟೋಗಳು ಓಡಾಡುತ್ತಿದವು ಆದರೆ, ಕೊರೋನಾ ಲಾಕ್‌ಡೌನ್ ನಂತರ 1.45 ಲಕ್ಷ ಆಟೋಗಳಷ್ಟೇ ರಸ್ತೆಗೆ ಇಳಿದಿರುವ ಸಾಧ್ಯತೆ ಕಂಡು ಬಂದಿದೆ ಇದರ ಜೊತೆ 30 ಸಾವಿರಕ್ಕೂ ಅಧಿಕ ಆಟೋಗಳು ಸೀಜ್ ಆಗಿವೆ
ಆಟೋ ಚಾಲಕರ ಬದುಕು ಮುಳುಗಿಸುತ್ತಿರುವ ಸರ್ಕಾರದ ವಿರುದ್ಧ ಆಟೋ ಯೂನಿಯನ್ ಆಕ್ರೋಶ !
ಕೊರೋನಾ ಎರಡನೇ ಅಲೆ ಲಾಕ್‌ಡೌನ್ ಸಮಯದಲ್ಲಿ ಆಟೋ ಚಾಲಕರಿಗೆ ಸರ್ಕಾರ 5 ಸಾವಿರ ರೂ. ಪರಿಹಾರ ನೀಡುವ ಭರವಸೆ ನೀಡಿತ್ತು. ಆದರೆ, ಕೆಲವೇ ಕೆಲವು ಮಂದಿಗೆ ಆ ಹಣ ಸಿಕ್ಕಿದೆ ಅದು ಬಿಟ್ಟರೆ ಇನ್ಯಾರಿಗು ಹಣ ತಲುಪಿಲ ಈ ಬಗ್ಗೆ ಕೇಳಿದರೆ ಆದಷ್ಟು ಬೇಗ ನಿಮ್ಮ ಖಾತೆಗೆ ಹಣ ಸಂದಾಯವಾಗುತ್ತದೆ ಇನ್ನು ಅಧಿಕಾರಿಗಳ ಕಡೆಯಿಂದ ನಿಮ್ಮ ಅರ್ಜಿಗೆ ಅನುಮೋದನೆ ಸಿಕ್ಕಿಲ್ಲ ಎಂದು ಹೇಳುತ್ತಾರೆ. ಆದರೆ ಸರ್ಕಾರ ಕೊಟ್ಟ ಮಾತು ತಪ್ಪಿದೆ ಎಂದು ಆಟೋ ಚಾಲಕರು ಆಕ್ರೋಶವನ್ನು ಹೊರ ಹಾಕಿದ್ದಾರೆ.
ಆಟೋ ಚಾಲಕರನ್ನು ನಂಬಿ ಮನೆಯಲ್ಲಿ ಐದಾರು ಜನ ಬದುಕುತ್ತಿದ್ದಾರೆ ಸರ್ಕಾರ ಲಾಕ್‌ಡೌನ್ ಘೋಷಿಸುತ್ತದೆ ಮತ್ತು ಕೊರೋನಾ ಸಮಯದಲ್ಲಿ ಇಎಮ್ಐ ಕಟ್ಟಲು ಅವಕಾಶ ಕೊಡಬೇಕು ಎಂದು ಸರ್ಕಾರ ಆದೇಶವೇ ಮಾಡಿತ್ತು. ಆದರೆ, ಅದನ್ನೂ ಫೈನಾನ್ಸ್ ಸಂಸ್ಥೆಗಳು ಮತ್ತು ಸಾಲ ನೀಡಿರುವ ಬ್ಯಾಂಕ್ಗಳು ಮತ್ತು ಕಂಪನಿಗಳು ಸರ್ಕಾರದ ನಿಯಮಗಳನ್ನು ಪಾಲಿಸಿದೆ 30 ಸಾವಿರಕ್ಕೂ ಅಧಿಕ ಆಟೋಗಳನ್ನು ಸೀಜ್ ಮಾಡಿದೆ.
ಈಗ ಅಂಥವರ ಬದುಕು ಬೀದಿಗೆ ಬಿದ್ದಿದೆ ಇದರಿಂದ ಆಟೋ ಚಾಲಕರ ಮಕ್ಕಳ ಶಿಕ್ಷಣ ಮೊಟಕುಗೊಂಡಿದೆ ಮತ್ತು ಅವರುಗಳು ಶಿಕ್ಷಣವನ್ನು ಮುಂದುವರೆಸಲು ಕಷ್ಟವಾಗುತ್ತಿದೆ. ಈ ಬಗ್ಗೆ ಮುಖ್ಯಮಂತ್ರಿ,ಕಂದಾಯ ಸಚಿವರು, ಗೃಹ ಸಚಿವರೆಲ್ಲರಿಗು ಮನವಿ ಸಲ್ಲಿಸಿದ್ದರು ಯಾವುದೇ ಕ್ರಮ ಜರುಗಿಸಿಲ್ಲ. ಆದಷ್ಟು ಬೇಗ ಸರ್ಕಾರ ಒಂದು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಆಟೋ ಚಾಲಕರ ಮತ್ತು ಮಾಲೀಕರ ಒಕ್ಕೂಟ ಆಗ್ರಹಿಸಿದೆ.