ಇಂಟೀರಿಯರ್ ಡಿಸೈನ್ ಹಾಗೂ ಪೀಠೋಪಕರಣಗಳ ರಿಟೇಲ್ ಬ್ರಾಂಡ್ ಆಗಿರುವ ಡ್ಯಾನ್ಯೂಬ್ ಹೋಮ್ ಇದೀಗ ರಾಜ್ಯ ರಾಜಧಾನಿಯಲ್ಲೂ ಆರಂಭವಾಗಿದೆ. ಬೆಂಗಳೂರಿನ ಮಾರತಹಳ್ಳಿಯಲ್ಲಿ ಆರಂಭವಾಗಿರುವ ಡ್ಯಾನ್ಯೂಬ್ ಹೋಮ್ ಮಳಿಗೆಯನ್ನ ಕೆಜಿಎಫ್ ಬೆಡಗಿ ಶ್ರೀನಿಧಿ ಶೆಟ್ಟಿ ಉದ್ಘಾಟಿಸಿದರು.
ಇಂಟೀರಿಯರ್ ಡಿಸೈನಿಂಗ್‌ನಲ್ಲಿ ಯುಎಇಯಲ್ಲಿ ತನ್ನದೇ ಛಾಪು ಮೂಡಿಸಿರುವ ʼಡ್ಯಾನ್ಯೂಬ್ ಹೋಮ್ʼ, ಪೀಠೋಪಕರಗಳ ರಿಟೇಲ್ ಬ್ರಾಂಡ್ ಆಗಿ ಗ್ರಾಹಕರನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಭಾರತದಲ್ಲೂ ಈಗಾಗಲೇ ಖ್ಯಾತಿ ಪಡೆದಿರುವ ಡ್ಯಾನ್ಯೂಬ್ ಹೋಮ್‌ನ ಮೂರನೇ ಮಳಿಗೆ ಇದೀಗ ಬೆಂಗಳೂರಿನಲ್ಲಿ ಆರಂಭವಾಗಿದೆ.
ಡ್ಯಾನ್ಯೂಬ್ ಹೋಮ್ ಕೈಗೆಟುಕುವ ಬೆಲೆಯಲ್ಲಿ ತನ್ನ ಗ್ರಾಹಕರಿಗೆ ಐಷಾರಾಮಿ ಉತ್ಪನ್ನಗಳು ಹಾಗೂ ಸರ್ವೀಸ್ ನೀಡುತ್ತಾ ಬಂದಿದೆ. ಗ್ರಾಹಕರ ಪಾಲಿಗೆ ಒನ್-ಸ್ಟಾಪ್-ಶಾಪಿಂಗ್ ತಾಣವಾಗಿರುವ ಈ ಬ್ರ್ಯಾಂಡ್, ಈಗಾಗಲೇ ಹೈದ್ರಾಬಾದ್‌ನಲ್ಲಿ ಸಾಕಷ್ಟು ಜನಮನ್ನಣೆ ಪಡೆದಿದೆ. ನೂತನ ಡ್ಯಾನ್ಯೂಬ್ ಹೋಮ್‌ನಲ್ಲಿ ಉತ್ತಮ ಗುಣಮಟ್ಟದ ಇಂಟೀರಿಯರ್ ಡಿಸೈನ್ ಮತ್ತು ಹೊರಾಂಗಣ ಪೀಠೋಪಕರಣಗಳು, ಕಾರ್ಪೆಟ್‍ಗಳು, ಪರದೆಗಳು, ಮಾಡ್ಯುಲರ್ ಕಿಚನ್, ಕಿಚನ್‍ವೇರ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ. ಇದಲ್ಲದೇ ಬಾತ್‍ಟಬ್‍ಗಳು, ಶವರ್ ಡಿಸೈನ್‌ಗಳು, ಬಾತ್ ಫಿಟ್ಟಿಂಗ್‌ಗಳನ್ನ ಹೊಂದಿದ್ದು, ಕಸ್ಟಮೈಸ್ಡ್ ವಿಂಡೋ ಕವರಿಂಗ್ ಸೌಲಭ್ಯ ಕೂಡ ಇದೆ.

ನೂತನ ಮಳಿಗೆ ಉದ್ಘಾಟನೆ ವೇಳೆ ತಮ್ಮ ಕಂಪನಿಯ ವಿಶೇಷತೆಗಳ ಬಗ್ಗೆ ಮಾಹಿತಿ ನೀಡಿದ ಡ್ಯಾನ್ಯೂಬ್ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಅಡೆಲ್ ಸಜನ್, ಗಾಲ್ಫ್‌ನ ಜನಪ್ರಿಯ ಕಂಪನಿಯನ್ನ ಬೆಂಗಳೂರಿನಂತಹ ಮೆಟ್ರೋಪಾಲಿಟನ್ ಸಿಟಿಯಲ್ಲಿ ಆರಂಭಿಸಲು ನಾವು ಉತ್ಸುಕರಾಗಿದ್ದೇವೆ. ಇಲ್ಲಿನ ಮಾರುಕಟ್ಟೆಯಲ್ಲಿ ನಮ್ಮ ಬ್ರ್ಯಾಂಡ್‌ಗೆ ಗ್ರಾಹಕರಿಂದ ಯಾವ ರೀತಿ ರೆಸ್ಪಾನ್ಸ್ ಬರಲಿದೆ ಎಂಬ ಬಗ್ಗೆಯೂ ನಮಗೆ ಕುತೂಹಲವಿದೆ. ಗ್ರಾಹಕರಿಗೆ ಅತ್ಯುತ್ತಮ ಸೌಲಭ್ಯ ಮತ್ತು ಅವರುಗಳ ಅಗತ್ಯತೆಗೆ ಅನುಗುಣವಾಗಿ ವಿಶೇಷ ವಿನ್ಯಾಸದ ಉತ್ಪನ್ನಗಳು ಮತ್ತು ಸೇವೆ ನೀಡುತ್ತೇವೆ ಎಂಬ ವಿಶ್ವಾಸ ನಮಗಿದೆ ಎಂದರು.
ಡ್ಯಾನ್ಯೂಬ್ ಹೋಮ್ ರಿಟೇಲ್ ಹೆಡ್ ಜಯರಾಜ್ ದಂಗಟಿ ಮಾತನಾಡಿ, ನಮ್ಮ ವಿನ್ಯಾಸ ಮತ್ತು ಅಭಿವೃದ್ಧಿ ಸೇವೆ ʼಐಸಿಂಗ್ ಆನ್ ದಿ ಕೇಕ್ʼ ಎಂಬ ರೀತಿಯಲ್ಲಿರಲಿದೆ. ಗ್ರಾಹಕರ ಆಯ್ಕೆ, ಆಲೋಚನೆಗೆ ಅನುಗುಣವಾಗಿರುವ ಮತ್ತು ಪ್ರತಿ ಜಾಗಕ್ಕೂ ಸಂಪೂರ್ಣವಾಗಿ ಹೊಂದಿಕೊಳ್ಳುವ ಕಸ್ಟಮೈಸ್ಡ್ ಸಲ್ಯೂಷನ್‌ಗಳನ್ನ ನೀಡುತ್ತೇವೆ. ಆ ಮೂಲಕ ಅವರ ಕನಸಿಗೆ ತಕ್ಕಂತೆ ಮನೆಗಳನ್ನು ವಿನ್ಯಾಸಗೊಳಿಸುತ್ತೇವೆ. ಗ್ರಾಹಕರು ಕಿಚನ್, ಬೆಡ್ ರೂಮ್ ಸೇರಿದಂತೆ ಎಲ್ಲಾ ಕಡೆಗಳಿಗೂ ವಿಭಿನ್ನ ರೀತಿಯಲ್ಲಿ ಡಿಸೈನ್‌ಗಳನ್ನು ವಿನ್ಯಾಸಗೊಳಿಸಬಹುದು. ಜೊತೆಗೆ 3ಡಿ ವಿಶ್ಯೂಯಲ್ ಸೌಲಭ್ಯಗಳ ವಿನ್ಯಾಸಕ್ಕೆ 30 ರಿಂದ 45 ದಿನಗಳವರೆಗೆ ತೆಗೆದುಕೊಳ್ಳಬಹುದು ಎಂದು ಮಾಹಿತಿ ನೀಡಿದರು.

ಡ್ಯಾನ್ಯೂಬ್ ಹೋಮ್ ವಿಶ್ವದೆಲ್ಲೆಡೆ 23 ದೇಶಗಳಲ್ಲಿ 50 ಸಾವಿರಕ್ಕೂ ಹೆಚ್ಚು ಉತ್ಪನ್ನಗಳ ಪೋರ್ಟ್‍ಫೋಲಿಯೊ ಮತ್ತು ಗ್ರಾಹಕರ ಮನೆಗಳಿಗೆ ಸಂಪೂರ್ಣವಾಗಿ ಕಸ್ಟಮೈಸ್ ಮಾಡಿದ ಲುಕ್‌ಗಳನ್ನು ರೂಪಿಸುತ್ತಾ ಬಂದಿದೆ. ಭಾರತದಲ್ಲೂ ಸಹ ಪ್ರತಿ ಮನೆಗೆ ಅಗತ್ಯವಿರುವ ಒನ್ ಸ್ಟಾಪ್ ಶಾಪಿಂಗ್ ತಾಣವಾಗಿ ಸೇವೆ ಒದಗಿಸಲಿದೆ. ಭಾರತದಲ್ಲಿ ಈಗಾಗಲೇ 2 ಡ್ಯಾನ್ಯೂಬ್ ಹೋಮ್ ಶೋರೂಮ್‍ಗಳನ್ನು ಆರಂಭಿಸಿ ಆ ಮೂಲಕ ಭಾರತೀಯ ಗ್ರಾಹಕರು ಏನು ಬಯಸುತ್ತಾರೆ ಎಂಬುದನ್ನ ಅರಿತಿದ್ದೇವೆ. ಅಲ್ಲದೇ ನಮ್ಮ ಸೇವೆಯನ್ನು ವಿಸ್ತರಿಸುವ ಉದ್ದೇಶದೊಂದಿಗೆ ಮೂರನೇ ಶೋರೂಂ ಅನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದೇವೆ. ಮುಂದೆ ದೇಶದ ಪ್ರತಿ ಮಹಾನಗರಗಳಲ್ಲಿ ಕನಿಷ್ಠ ಒಂದು ಡ್ಯಾನ್ಯೂಬ್ ಹೋಮ್ ಮಳಿಗೆ ಆರಂಭಿಸಲು ಬಯಸಿದ್ದೇವೆ ಎಂದು ಜಯರಾಜ್ ತಿಳಿಸಿದರು.