ಭಾರತದಲ್ಲಿ ತ್ರಿವಳಿ ತಲಾಖ್ ಬ್ಯಾನ್ ಆಗಿತ್ತು. ಭಾರೀ ದೊಡ್ಡ ಸುದ್ದಿಯೂ ಆಗಿತ್ತು. ಆನ್ಲೈನ್ನಲ್ಲಿ, ಇ- ಮೇಲ್ನಲ್ಲಿ ತಲಾಖ್ ನೀಡುವುದು ನಿಷಿದ್ಧ ಎಂದು ಭಾರತ ಸರ್ಕಾರ ತೀರ್ಮಾನ ಮಾಡಿತ್ತು. ಇದೀಗ ದುಬೈ ಶೇಕ್ ಪುತ್ರಿ ಇನ್ಸ್ಟಾದಲ್ಲಿ ತಲಾಖ್ ನೀಡಿದ್ದಾರೆ. ಅದೂ ಕೂಡ ತುಂಬಾ ಡಿಫರೆಂಟ್ ಆಗಿ ತಲಾಖ್ ನೀಡಿರುವುದು ಜನರನ್ನು ಚಕಿತರನ್ನಾಗಿ ಮಾಡಿದೆ.
ದುಬೈ ಆಡಳಿತಗಾರ ಹಾಗೂ ಪ್ರಧಾನಿಯ ಮಗಳು ರಾಜಕುಮಾರಿ ಶೇಖಾ ಮಹ್ರಾ ಬಿಂಟ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಪತಿಗೆ 3 ಬಾರಿ ತಲಾಖ್ ಹೇಳುವ ಮೂಲಕ ಸಾರ್ವಜನಿಕವಾಗಿ ವಿಚ್ಛೇದನ ಘೋಷಿಸಿದ್ದಾರೆ. ಇನ್ಸ್ಟಾದಲ್ಲಿ ಈ ಬಗ್ಗೆ ಒಂದು ಪೋಸ್ಟ್ ಹಾಕಿದ್ದಾರೆ.
ಪತಿ ಶೇಖ್ ಮಾನಾ ಬಿನ್ ಮೊಹಮ್ಮದ್ ಬಿನ್ ರಶೀದ್ ಬಿನ್ ಮಾನಾ ಅಲ್ ಮಕ್ತೌಮ್ ಅವರಿಗೆ ಇನ್ಸ್ಟಾಗ್ರಾಂನಲ್ಲಿ ವಿಚ್ಛೇದನ ನೀಡಿರುವುದು ಸಂಚಲನ ಮೂಡಿಸಿದೆ. ಈ ದಂಪತಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ ಎರಡನೇ ತಿಂಗಳಲ್ಲಿ ವಿಚ್ಛೇದನ ಪ್ರಕಟಣೆ ಹೊರ ಬಿದ್ದಿದೆ.
ಡಿಯರ್ ಹಸ್ಬೆಂಡ್ ಎಂದು ಶುರು ಮಾಡಿರುವ ರಾಜಕುಮಾರಿ ಶೇಖಾ ಮಹ್ರಾ ಬಿಂಟ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್, ನಿಮಗೆ ಬೇರೆ ಬೇರೆ ಸಂಗಾತಿಯರ ಜೊತೆ ನಂಟಿದೆ. ಹಾಗಾಗಿ ನಾನು ನಿಮಗೆ ಡಿವೋರ್ಸ್ ಕೊಡ್ತಿದ್ದೀನಿ.. ಡಿವೋರ್ಸ್ ಕೊಡ್ತಿದ್ದೀನಿ ಮತ್ತು ನಾನು ಡಿವೋರ್ಸ್ ಕೊಡ್ತಿದ್ದೀನಿ.. ಟೇಕ್ ಕೇರ್ ಇಂತಿ ನಿಮ್ಮ ಮಾಜಿ ಹೆಂಡ್ತಿ ಎಂದು ಪೋಸ್ಟ್ ಹಾಕಿರೋದು ಸಖತ್ ವೈರಲ್ ಆಗಿದೆ.
ಕೃಷ್ಣಮಣಿ