ದುಬೈ (Dubai) ಮೂಲದ ಶ್ರೀಮಂತ ಉದ್ಯಮಿಯೋರ್ವ ತನ್ನ ಪತ್ನಿ ಬಿಕನಿ (Bikini) ಹಾಕ್ಕೊಂಡು ಬಿಂದಾಸ್ ಆಗಿ ಓಡಾಡಲು, ಸಮುದ್ರದ ತೀರದಲ್ಲಿ ಟು-ಪೀಸ್‌ನಲ್ಲಿ ನಲಿದಾಡಲು ಒಂದು ಖಾಸಗಿ ದ್ವೀಪವನ್ನೇ (Island) ಖರೀದಿ ಮಾಡಿದ್ದಾನೆ.
ಈ ಬಗ್ಗೆ ಈತನ ಮಹಿಳೆ ಸೌದಿ ಅಲ್ ನಡಕ್ (Soudi al nadak) ತಮ್ಮ ಇನ್‌ಸ್ಟಾಗ್ರಾಂನಲ್ಲಿ (Instagram) ಮಾಹಿತಿ ಹಂಚಿಕೊಂಡು ಸಂತಸ ಪಟ್ಟಿದ್ದಾರೆ. ಈ 26 ವರ್ಷದ ಸೌದಿ ಅಲ್ ನಡಕ್ ಸೋಷಿಯಲ್ ಮಮೀಡಿಯಾ ಇನ್‌ಪ್ಯೂಯೆನ್ಸರ್ (Social media Influencer) ಆಗಿದ್ದು ತನ್ನ ಐಷಾರಾಮಿ ಜೀವನಕ್ಕೆ ಈಕೆ ಹೆಸರುವಾಸಿ.
ದುಬೈನ ಕೋಟ್ಯಾಧಿಪತಿಗಳಲ್ಲಿ ಒಬ್ಬನಾದ ಜಮಾಲ್ ಅಲ್ ನಡಕ್‌ರನ್ನು (Jamal al nadak) ನಾಲ್ಕು ವರ್ಷದ ಹಿಂದೆ ಈಕೆ ಮದುವೆಯಾಗಿದ್ದಾರೆ. ಸೌದಿಗೆ ಬಿಕನಿ ಧರಿಸಿ ಬೀಚ್‌ನಲ್ಲಿ ಬಿಂದಾಸ್ ಆಗಿ ಓಡಾಡಬೇಕು ಅನ್ನೋ ಆಸೆಯಿತ್ತು. ಹೀಗಾಗಿ ಆಕೆಯ ಪತಿ ಜಮಾಲ್ ಸೌದಿಗಾಗಿ 418 ಕೋಟಿ (418 crores) ರೂಪಾಯಿ ಕೊಟ್ಟು ಒಂದು ಖಾಸಗಿ ದ್ವೀಪವನ್ನೇ ಖರೀದಿಸಿಬಿಟ್ಟಿದ್ದಾರೆ.