
ಆಂಧ್ರಪ್ರದೇಶ :ಪೊಲೀಸರು ವಶಪಡಿಸಿಕೊಂಡ ಅಕ್ರಮ ಮದ್ಯವನ್ನು ಧ್ವಂಸ ಮಾಡುತ್ತಿದ್ದ ವೇಳೆ ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗಲು ಕುಡುಕರು ಮುಗಿಬಿದ್ದ ಘಟನೆ ಗುಂಟೂರಿನಲ್ಲಿ ನಡೆದಿದೆ.
ಹಲವು ಪ್ರಕರಣಗಳಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದ ಸುಮಾರ 50 ಲಕ್ಷ ರೂಪಾಯಿ ಮೌಲ್ಯದ ಅಕ್ರಮ ಮದ್ಯವನ್ನು ಪೊಲೀಸರು ಬುಲ್ಡೋಜರ್ ಮೂಲಕ ಗುಂಟೂರು – ಏಟೂಕೂರು ರಸ್ತೆಯ ಡಂಪಿಂಗ್ ಯಾರ್ಡ್‌ನಲ್ಲಿ ನಾಶಪಡಿಸುತ್ತಿದ್ದರು.
ఏపీలో మందు బాబుల కక్కుర్తి..
— Telugu Scribe (@TeluguScribe) September 9, 2024
పట్టుబడిన అక్రమ మద్యాన్ని పోలీసులు ధ్వంసం చేస్తుండగా ఎగబడి ఎత్తుకెళ్లిన మందుబాబులు
గుంటూరు – పలు కేసుల్లో పట్టుబడిన రూ.50లక్షల విలువైన అక్రమ మద్యాన్ని పోలీసులు ఏటూకూరు రోడ్డులోని డంపింగ్ యార్డ్లో ధ్వంసం చేశారు.
ఈ నేపథ్యంలో కొందరు మందుబాబులు… pic.twitter.com/eCVphKavxb
ಈ ವೇಳೆ ಪೊಲೀಸರ ಎದುರೇ ಬೀಯರ್, ಕೆಲ ವೈನ್, ವಿಸ್ಕಿ ಬಾಟಲ್ಗಳನ್ನು ಮದ್ಯ ಪ್ರಿಯರು ತೆಗೆದುಕೊಂಡು ಹೋಗಿದ್ದಾರೆ. ಕೆಲವರನ್ನು ಪೊಲೀಸರು ತಡೆದು ಏಟು ಕೊಡುತ್ತಿದ್ದರೂ ಸರ್.. ಇದೊಂದು ಬಾಟಲಿ ಕೊಡಿ ಎಂದು ಏಟು ತಿಂದೂ ಬಾಟಲಿ ಬಿಡದೇ ಎಸ್ಕೇಪ್ ಆಗಿದ್ದಾರೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.