ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರು ಸಂಚಾರ ನಿಮ ಉಲ್ಲಂಘನೆ ಕೇಸ್ ದಾಖಲು ಮಾಡುವುದನ್ನು ತಾತ್ಕಾಲಿಕ ನಿಲ್ಲಿಸಲಾಗಿತ್ತು. ಆದರೆ ಇದೀಗ ಹೊಸ ವರ್ಷ ಸಮೀಪಿಸುತ್ತಿರುವ ಹೊತ್ತಿನಲ್ಲಿ ಮತ್ತೆ ಮದ್ಯಪಾನ ತಪಾಸಣೆಗೆ ನಿರ್ಧಾರ ಮಾಡಿದ್ದಾರೆ. ಬೆಂಗಳೂರು ನಗರ ಪೊಲೀಸರು ಅಖಾಡಕ್ಕೆ ಈಗಾಗಲೇ ಇಳಿದಿದ್ದು, ಬೆಂಗಳೂರಿನಾದ್ಯಂತ ಟ್ರಾಫಿಕ್ ಪೊಲೀಸರಿಂದ ಡ್ರಂಕ್ ಅಂಡ್ ಡ್ರೈವ್ ಟೆಸ್ಟ್ ಮಾಡುತ್ತಿದ್ದಾರೆ.
ಪೊಲೀಸ್ ಆಯುಕ್ತರ ಸೂಚನೆ ಮೇರೆಗೆ ಡ್ರಂಕ್ ಅಂಡ್ ಡ್ರೈವ್ ತಪಾಸಣೆ ಶುರು ಮಾಡಲಾಗಿದೆ. ಹೊಸ ವರ್ಷದ ಮೋಜಿನಲ್ಲಿ ಕುಡಿದು ವಾಹನ ಚಾಲನೆ ಮಾಡೊ ಸಾಧ್ಯತೆಯಿದೆ. ಈ ಹಿನ್ನಲೆಯಲ್ಲಿ ಈಗಿನಿಂದಲೇ ಟ್ರಾಫಿಕ್ ಪೊಲೀಸರು ಎಚ್ಚರಿಕೆ ವಹಿಸಲಾಗ್ತಿದೆ. ಕುಡಿದು ಬರೋ ಚಾಲಕರನ್ನು ತಡೆದು ತಪಾಸಣೆ ನಡೆಸಲಿದ್ದು, ಯಾವುದೇ ಕಾರಣ ಕೊಟ್ರು ನೀಡದರೂ ಪೊಲೀಸರು ಬಿಟ್ಟು ಕಳುಹಿಸುವುದಿಲ್ಲ
ಕುಡಿದು ವಾಹನ ಚಾಲನೆ ಮಾಡುವ ಚಾಲಕರ ಕೈಗೆ ರೆಸಿಪ್ಟ್ ಇಟ್ಟು ವಾಹನ ಸೀಜ್ ಮಾಡ್ತಿದ್ದಾರೆ ಪೊಲೀಸರು. ದಂಡದ ಮೊತ್ತವನ್ನು ಪಾವತಿ ಮಾಡಿ ಮನೆಗೆ ಹೋಗಲು ಸಾಧ್ಯವಿಲ್ಲ. ಕೋರ್ಟ್‌ನಲ್ಲಿ ದಂಡ ಪಾವತಿಸಿ ಬಂದಾಗ ಮಾತ್ರ ವಾಹನ ರಿಲೀಸ್ ಮಾಡಲಾಗುತ್ತದೆ. ಪೊಲೀಸರ ಎದುರು ಕೆಲವರು ಹೈಡ್ರಾಮಾ ಮಾಡಿದ್ದಾರೆ. ನಾವು ಕುಡಿದೇ ಇಲ್ಲ ಎಂದು ಕೆಲವರು ಹೇಳಿದ್ದಾರೆ. ಆದರೆ ಆಲ್ಕೋ ಮೀಟರ್‌ನಲ್ಲಿ ತಪಾಸಣೆ ಮಾಡಿದ ಬಳಿಕ ಸೈಲೆಂಟ್ ಆಗಿದ್ದಾರೆ.