ತುಮಕೂರಿನಲ್ಲಿ (Tumkur) ಸೋಡಿಯಂ ಮೆಟಲ್ (Sodium metal) ಸ್ಫೋಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡ್ರೋನ್ ಪ್ರತಾಪ್ (Drine Prathap) ಜೈಲಿನಿಂದ ರಿಲೀಸ್ ಆಗಿದ್ದಾರೆ.
ಕಳೆದ 9 ದಿನಗಳ ಸೆರೆವಾಸದಿಂದ ಡ್ರೋನ್ ಪ್ರತಾಪ್ ನ್ಯಾಯಾಂಗ ಬಂಧನದಲ್ಲಿದ್ದರು. ಇಂದು ಬಂಧನದ ಅವಧಿ ಮುಕ್ತಾಯವಾಗಿದೆ.
ತುಮಕೂರಿನ ಮಧುಗಿರಿ ಉಪಕಾರಾಗೃಹದಿಂದ ಡ್ರೋನ್ ಪ್ರತಾಪ್ ಹೊರ ಬಂದಿದ್ದಾರೆ. ಕೃಷಿ ಹೊಂಡದ ನೀರಿನಲ್ಲಿ ಸೋಡಿಯಂ ಸ್ಪೋಟಿಸಿ ಡ್ರೋನ್ ಪ್ರತಾಪ್ ಜೈಲು ಸೇರಿದ್ದರು. ಮಧುಗಿರಿಯ ಜನಕಲೋಟಿ ಬಳಿಯ ಫಾರ್ಮ್ ಹೌಸ್ ನಲ್ಲಿ ಸೋಡಿಯಂ ಸ್ಪೋಟಿಸಿದ್ದ ಪ್ರತಾಪ್ ರನ್ನು ಪೊಲೀಸರು ಬಂಧಿಸಿದ್ದರು.
ಮೊದಲು 3 ದಿನಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ಡ್ರೋನ್ ಪ್ರತಾಪ್,ಬಳಿಕ 9 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದರು.ಇಂದು ಜೈಲಿನಿಂದ ಹೊರಬಂದು ಬೆಂಗಳೂರಿನತ್ತ ಡ್ರೋನ್ ಪ್ರತಾಪ್ ಪ್ರಯಾಣ ಬೆಳೆಸಿದ್ದಾರೆ.