ನಟಿ ರನ್ಯಾ ರಾವ್ (Ranya rao) ಗೋಲ್ಡ್ ಸ್ಮಗ್ಲಿಂಗ್ (Gold smugly) ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿ.ಆರ್.ಐ (DRI) ವರದಿ ಸಿದ್ದಪಡಿಸಿದ್ದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ವರದಿ ಸಲ್ಲಿಸಲು ಮುಂದಾಗಿದೆ. ಹೀಗಾಗಿ ಕೆಲ ರಾಜಕಾರಣಿಗಳಿಗೆ ಎದೆಯಲ್ಲಿ ನಡುಕ ಶುರುವಾಗಿದೆ.

ಈಗಾಗಲೇ ಈ ಗೋಲ್ಡ್ ಸ್ಮಗ್ಲಿಂಗ್ ಕೇಸ್ ನಲ್ಲಿ ಇಬ್ಬರು ಸಚಿವರಿದ್ದಾರೆ ಎಂಬ ಚರ್ಚೆ ಜೋರಾಗಿದ್ದು, ಆದ್ರೆ ಈ ವರೆಗೂ ಆ ಹೆಸರುಗಳು ಮಾತ್ರ ಬಹಿರಂಗವಾಗಿಲ್ಲ. ಹೀಗಾಗಿ ಡಿ.ಆರ್.ಐ ಸಲ್ಲಿಕೆ ಮಾಡಲಿರುವ ವರದಿಯಲ್ಲಿ ಪ್ರಭಾವಿ ಸಚಿವರ ಪಾತ್ರದ ಬಗ್ಗೆ ವಿವರಣೆ ಇರಲಿದ್ಯಾ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಈ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸದ್ದು ಮಾಡಿದ ಹಿನ್ನಲೆ ಈ ಕೇಸ್ ನಲ್ಲಿ ಆಸಕ್ತಿ ಹೆಚ್ಚಿಸಿಕೊಂಡಿರುವ ಕೇಂದ್ರ ಹಣಕಾಸು ಸಚಿವಾಲಯ ಡಿ.ಆರ್.ಐ ನಿಂದ ವರದಿ ಕೇಳಿದೆ.ಡಿ.ಆರ್.ಐ ಕೂಡ ಹಣಕಾಸು ಸಚಿವಾಲಯದ ಆಡಿಯಲ್ಲೆ ಬರುವ ಸಂಸ್ಥೆಯಾಗಿದೆ.

ಹೀಗಾಗಿ ಗೋಲ್ಡ್ ಸ್ಮಗ್ಲಿಂಗ್ ನಲ್ಲಿ ಸಚಿವರ ಪಾತ್ರ, ಸ್ಮಗ್ಲಿಂಗ್ ನ ಪ್ರಾಥಮಿಕ ಮಾಹಿತಿ, ರನ್ಯಾಳ ವಿಚಾರಣೆ ಸೇರಿದಂತೆ ಹಲವು ವಿಚಾರಗಳನ್ನು ಉಲ್ಲೇಖಿಸಿ ವರದಿ ಸಿದ್ಧವಾಗಿರುವ ಸಾಧ್ಯತೆಗಳಿವೆ.ಇನ್ನೇನು ಬಹುತೇಕ ಇಂದು ಅಥವಾ ನಾಳೆ ಡಿ.ಆರ್.ಐ ವರದಿ ಸಲ್ಲಿಕೆ ಮಾಡಲಿದೆ.