ಲೋಕಸಭಾ ಚುನಾವಣೆಯಲ್ಲಿ ನನ್ನ ಮಗನಿಗೆ ಟಿಕೆಟ್ ಮಿಸ್ ಆಗಿದೆ. ನಿನ್ನೆ ನನ್ನ ಮನೆಗೆ ಅಭ್ಯರ್ಥಿ ಆಗಮಿಸಿದ್ರು. ನಾನು ಮನೆಯಲ್ಲಿ ಇರಲಿಲ್ಲ. ನಮಗೆ ಬೇಸರ ಇರುವುದು ನಿಜ. ನನಗೆ ಮೊದಲೇ ತಿಳಿಸಿದ್ರೆ ನಾನು ಮನೆಯಲ್ಲಿಯೇ ಇರುತ್ತಿದ್ದೆ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ತಿಳಿಸಿದ್ದಾರೆ.

ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಇಲ್ಲಿ ಸಿಂಪಥಿ ಗಿಟ್ಟಿಸಿಕೊಳ್ಳುವ ತಂತ್ರ ಬೇಡ. ನಾವು ಬಿಜೆಪಿಯಲ್ಲಿದ್ದೇವೆ. ಅದಕ್ಕಾಗಿಯೇ ಕೆಲಸ ಮಾಡುತ್ತೇವೆ ಎಂದಿದ್ದಾರೆ.
