ಇಂದು ಮಾನ್ಯ ಸಮಾಜ ಕಲ್ಯಾಣ ಸಚಿವರಾದ ಡಾ ಹೆಚ್ ಸಿ ಮಹದೇವಪ್ಪನವರು ಪಿರಿಯಾಪಟ್ಟಣ ಸಮೀಪದ ಬೈಲುಕುಪ್ಪೆಯಲ್ಲಿ 14 ನೇ ಟಿಬೆಟಿಯನ್ ಧರ್ಮಗುರು ಶ್ರೀ ದಲೈ ಲಾಮಾ ಅವರನ್ನು ಸೌಹಾರ್ದಯುತವಾಗಿ ಭೇಟಿಯಾಗಿ ಅವರ ಆರೋಗ್ಯವನ್ನು ವಿಚಾರಿಸಿದರು.
ಸಾಮಾಜಿಕ ಶಾಂತಿಯ ಜೊತೆಗೆ ಬುದ್ಧನ ತತ್ವಗಳನ್ನು ಪಸರಿಸುವ ಕೆಲಸ ಮಾಡುತ್ತಿರುವ ಅವರ ಕಾರ್ಯಗಳು ಮತ್ತು ಅವರ ವಿಚಾರಗಳ ಬಗ್ಗೆ ಕೆಲಹೊತ್ತು ಮಾತುಕತೆ ನಡೆಸಿದ ಸಚಿವರು ಅವರ ಬೇಡಿಕೆಗಳನ್ನು ಆಲಿಸಿ ಅವರ ಪ್ರೀತಿಯ ಆತಿಥ್ಯ ಸ್ವೀಕರಿಸಿದರು.
ಇದೇ ವೇಳೆ ಬುದ್ಧನ ನೆಲವಾಗಿ ರೂಪುಗೊಂಡಿರುವ ಬೈಲುಕುಪ್ಪೆಯಲ್ಲಿ ನಿರ್ಮಿಸಲಾದ ಬೌದ್ಧ ಮಂದಿರವನ್ನು ನಮ್ಮ ಆಪ್ತ ಸಿಬ್ಬಂದಿ ವರ್ಗದೊಡನೆ ವೀಕ್ಷಣೆ ಮಾಡಿದರು
ಭಾರತದ ಮೂಲ ಧರ್ಮವಾದ ಬೌದ್ಧ ಧರ್ಮದ ಬಗ್ಗೆ ಅಲ್ಲಿನ ಜನರಿಗೆ ಇರುವ ಸ್ಪಷ್ಟತೆ ಮತ್ತು ಕಾಳಜಿಯನ್ನು ಕಂಡು ಸಂತಸ ವ್ಯಕ್ತಪಡಿಸಿದ ಸಚಿವರು ಬುದ್ಧನ ನಾಡು ಕಟ್ಟುವ ಪ್ರಾಮುಖ್ಯತೆಯನ್ನು ಅಲ್ಲಿನ ಬೌದ್ದ ಬಿಕ್ಕುಗಳ ಜೊತೆಗೆ ಚರ್ಚಿಸಿದರು.
ಇದೇ ವೇಳೆ ತಮ್ಮ ಟಿಬೆಟಿಯನ್ ವಾಸಿ ಪ್ರದೇಶಕ್ಕೆ ಸಂಬಂಧಿಸಿದ ಕೆಲವು ಬೇಡಿಕೆಗಳ ಬಗ್ಗೆಯೂ ಸಚಿವರು ಚರ್ಚಿಸಿದರು.