ಬೆಂಗಳೂರು : ಈ ಬಾರಿ ಡಿಸಿಎಂ ನಾನೊಬ್ಬನೇ ಆಗಬೇಕು ಎಂದಿರುವ ಡಿಕೆ ಶಿವಕುಮಾರ್ ಷರತ್ತಿಗೆ ಡಾ . ಜಿ ಪರಮೇಶ್ವರ್ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ದಲಿತ ನಾಯಕರಿಗೂ ಡಿಸಿಎಂ ಆಗುವ ಅವಕಾಶ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಬೆಂಗಳೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ದಲಿತ ಸಮುದಾಯ ಕಾಂಗ್ರೆಸ್ ಮೇಲೆ ನಿರೀಕ್ಷೆ ಇಟ್ಟುಕೊಂಡಿದೆ. ಹೀಗಿರುವಾಗ ದಲಿತ ಸಮುದಾಯದ ಜನರ ಭಾವನೆಯನ್ನು ಪಕ್ಷದ ವರಿಷ್ಠರು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ನನಗೆ ಡಿಸಿಎಂ ಸ್ಥಾನ ನೀಡದೇ ಹೋದಲ್ಲಿ ಸಹಜವಾಗಿ ದಲಿತ ಸಮುದಾಯ ಇದಕ್ಕೆ ಪ್ರತಿಕ್ರಿಯೆ ನೀಡೇ ನೀಡುತ್ತೆ ಎಂದು ಹೇಳುವ ಮೂಲಕ ಹೈಕಮಾಂಡ್ಗೆ ಪರೋಕ್ಷ ವಾರ್ನಿಂಗ್ ನೀಡಿದ್ದಾರೆ.