ಕನ್ನಡ ಪ್ರಸಿದ್ಧ ಯೂಟ್ಯೂಬರ್ ಡಾ. ಬ್ರೋ (Dr.bro) ಸದಾ ಒಂದಲ್ಲ ಒಂದು ವಿಚಾರಕ್ಕೆ ಸದ್ದು ಮಾಡ್ತಾನೆ ಇರ್ತಾರೆ. ಈಗ ಮತ್ತೆ ಡಾ. ಬ್ರೋ ತಮ್ಮ ಕನ್ನಡ ಪ್ರೇಮದಿಂದ ಸದ್ದು ಮಾಡಿದ್ದಾರೆ.
ಸದಾ ಒಂದಲ್ಲ ಒಂದು ದೇಶಗಳಿಗೆ ಭೇಟಿ ಕೊಟ್ಟು ಅಲ್ಲಿವ ವಿಡಿಯೋಗಳನ್ನು ಕನ್ನಡಿಗರಿಗೆ ತೋರಿಸುವ ಡಾ. ಬ್ರೋ ಈ ಬಾರಿ ನೈಜೀರಿಯಾಗೆ (Naigeria) ಭೇಟಿ ಕೊಟ್ಟಿದ್ದಾರೆ. ಹೀಗೆ ನೈಜೀರಿಯಾದ ಪ್ರವಾಸದಲ್ಲಿರುವ ವೇಳೆ, ಡಾ. ಬ್ರೋ ಅಲ್ಲಿನ ಮಕ್ಕಳಿಗೆ ಕನ್ನಡ (Kannada) ಭಾಷೆಯನ್ನು ಹೇಳಿಕೊಟ್ಟಿದ್ದಾರೆ. ಈ ಮೂಲಕ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.
ಡಾ. ಬ್ರೋ ನೈಜೀರಿಯಾದ ಸ್ಲಂ ಪ್ರದೇಶಕ್ಕೆ ತೆರಳಿ ಅಲ್ಲಿನ ಶಾಲೆಯೊಂದಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅಲ್ಲಿನ ಮಕ್ಕಳಿಗೆ ಮೊದಲು ನಮ್ಮ ದೇಶ ಹಾಗೂ ರಾಜ್ಯದ ಬಗ್ಗೆ ಹೇಳಿದ್ದಾರೆ. ಇದಾದ ಬಳಿಕ ನಮ್ಮ ಕನ್ನಡ ಭಾಷೆಯನ್ನು ಭಾರತದ ರಾಷ್ಟ್ರ ಭಾಷೆ (Indian national language Kannada) ಎಂದು ಹೇಳಿದ್ದು ಕನ್ನಡ ಭಾಷೆಯಲ್ಲೇ ಪಾಠ ಮಾಡಿದ್ದಾರೆ. ನಾನೀಗ ನಿಮಗೆ ಇಂಡಿಯಾದ ನ್ಯಾಷನಲ್ ಲ್ಯಾಂಗ್ವೇಜ್ ಹೇಳಿಕೊಡ್ತೀನಿ ಎಂದು ʼಅ, ಆ, ಇ, ಈʼ ಎಂದು ಕನ್ನಡದ ಅಕ್ಷರಮಾಲೆಯನ್ನು ಅಂ, ಅಃ ವರೆಗೆ ಹೇಳಿಕೊಟ್ಟಿದ್ದಾರೆ.
ಡಾ. ಬ್ರೋ ಅವರ ಈ ನಡೆಗೆ ಕನ್ನಡಿಗರು ಮನಸೋತಿದ್ದಾರೆ. ಇದಕ್ಕೆ ನಮಗೆ ಡಾ. ಬ್ರೋ ಅಂದ್ರೆ ಇಷ್ಟ ಆಗೋದು ಅಂತ ಹಲವರು ಜನ ಈ ವಿಡಿಯೋ ಗೆ ಕಾಮೆಂಟ್ ಮಾಡಿದ್ದಾರೆ.