• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಡಬಲ್​ ಎಂಜಿನ್ ಸರ್ಕಾರವು ರೈತ ವಿರೋಧಿಯಂತೆ ವರ್ತಿಸುತ್ತಿದೆ : ಸಿದ್ದರಾಮಯ್ಯ ಆರೋಪ

ಪ್ರತಿಧ್ವನಿ by ಪ್ರತಿಧ್ವನಿ
April 11, 2023
in Top Story, ರಾಜಕೀಯ
0
ಡಬಲ್​ ಎಂಜಿನ್ ಸರ್ಕಾರವು ರೈತ ವಿರೋಧಿಯಂತೆ ವರ್ತಿಸುತ್ತಿದೆ : ಸಿದ್ದರಾಮಯ್ಯ ಆರೋಪ
Share on WhatsAppShare on FacebookShare on Telegram

ಬೆಂಗಳೂರು : ಡಬಲ್​ ಎಂಜಿನ್​ ಸರ್ಕಾರವು ಕಳೆದ ಕೆಲವು ವರ್ಷಗಳಿಂದ ನಮ್ಮ ರಾಜ್ಯದ ಹಾಲು ಉತ್ಪಾದಕರ ರೈತರ ಬೆನ್ನೆಲುಬು ಮುರಿಯಲು ಯತ್ನಿಸುತ್ತಿದ್ದಾರೆಂದು ನಾನು 2020ರಲ್ಲಿಯೇ ಹೇಳಿದ್ದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪುನರುಚ್ಛರಿಸಿದ್ದಾರೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು ಸರ್ಕಾರಕ್ಕೆ ಪತ್ರಗಳನ್ನು ಬರೆದು ಎಚ್ಚರಿಸಿದ್ದೇನೆ. ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ನನ್ನ ಸಲಹೆ, ಎಚ್ಚರಿಕೆ ಮತ್ತು ವಿರೋಧವನ್ನು ಬಿಜೆಪಿ ಸರ್ಕಾರ ಪರಿಗಣಿಸುವ ಬದಲು ರೈತರನ್ನು ಶತ್ರುಗಳು ಎಂದು ಭಾವಿಸಿ ಅವರ ಆರ್ಥಿಕ ಚೈತನ್ಯವನ್ನು ಮುರಿದು ಹಾಕಲು ಸನ್ನದ್ಧವಾಗಿ ನಿಂತಿದೆ ಎಂದು ಆರೋಪಿಸಿದ್ದಾರೆ .

ADVERTISEMENT


ಪ್ರಧಾನಿ ಮೋದಿ ಆಪ್ತ ಬಳಗದಲ್ಲಿರುವ ಅಂಬಾನಿಯ ಕಣ್ಣು ದೇಶದ ಹಾಲಿನ ಮೇಲೆ ಬಿದ್ದಿದೆ. ಈಗ ಬೇರೆ ದೇಶದಗಳಿಂದ ಏನೇ ಆಮದು ಮಾಡಿಕೊಂಡರೂ ಸಹ ಅಂಬಾನಿ ಮೂಲಕ ಆಮದು ಮಾಡಿಕೊಳ್ತಾರೆ. ಇದೇ ಕಾರಣಕ್ಕೆ ಅಮುಲ್​ ಎಂಡಿಯಾಗಿದ್ದ ಆರ್​ಎಸ್ ಸೋಧಿಯನ್ನು ರಿಲಯನ್ಸ್​ ಕಂಪನಿಗೆ ಸೇರಿಸಿಕೊಳ್ಳಲಾಗಿದೆ. ಅಮಿತ್​ ಶಾ ಕೆಲವು ದಿನಗಳ ಹಿಂದೆ ಹಾಲು ಮಹಾಮಂಡಲಗಳನ್ನು ಒಗ್ಗೂಡಿಸುತ್ತೇನೆಂದು ಹೇಳಿದ್ದರು. ಅದರ ಭಾಗವಾಗಿ ಈಗ ರಾಜ್ಯಕ್ಕೆ ಅಮುಲ್ ವಕ್ಕರಿಸಿಕೊಂಡಿದೆ. ಈಗ ನಂದಿನಿ ಆತಂಕ ಎದುರಿಸುತ್ತಿದೆ. ಮೋದಿ ಮತ್ತು ಅಮಿತ್ ಶಾ ಅವರು ನಮ್ಮ ನಂದಿನಿಯನ್ನಷ್ಟೆ ಅಲ್ಲ ಅಮುಲ್ ಅನ್ನೂ ಸಹ ಮುಳುಗಿಸಲು ಯೋಜನೆ ಹಾಕಿಕೊಂಡಿರುವಂತೆ ಕಾಣಿಸುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ .


ಇತ್ತೀಚೆಗೆ ಗುಜರಾತಿನಲ್ಲಿ ಮಾಲ್ದಾರಿ ಎಂಬ ಪಶುಪಾಲಕ ಸಮುದಾಯದವರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದರು. ಯಾವುದಾದರೂ ಹಸು ನಗರಗಳಲ್ಲಿ ಕಾಣಿಸಿಕೊಂಡರೆ ಅದರ ಮಾಲಿಕನಿಗೆ 5000 ದಿಂದ 50000 ರೂಪಾಯಿ ದಂಡ ಹಾಕುವ, ವರ್ಷಗಟ್ಟಲೆ ಜೈಲಿಗೆ ಅಟ್ಟುವ ಕಾನೂನುಗಳನ್ನು ಗುಜರಾತಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಕರ್ನಾಟಕದ ಬಿಜೆಪಿ ಸರ್ಕಾರದ ಹಾಗೆಯೆ ಅಲ್ಲಿಯೂ ಕೂಡ ಗೋಮಾಳಗಳು, ಹುಲ್ಲುಗಾವಲುಗಳನ್ನು ಖಾಸಗಿಯವರಿಗೆ ನೀಡಲಾಗುತ್ತಿದೆ.ದನಗಳು ಮೇಯಲು ಹುಲ್ಲು ಇಲ್ಲ. ಆಹಾರ ಹುಡುಕಿ ಬೀದಿಗಳಿಗೆ ಬಂದರೆ ಅವುಗಳ ಮಾಲಿಕರಿಗೆ ಜೈಲು ಮತ್ತು ದಂಡ ವಿಧಿಸಲಾಗುತ್ತಿದೆ. ಬಿಜೆಪಿಯ ಈ ಮನೆಹಾಳು ಕಾನೂನಿಗೆ ಬೇಸತ್ತು ಅಲ್ಲಿನ ಜನ ಹಸುಗಳನ್ನು ಸಾಕುವುದನ್ನೆ ನಿಲ್ಲಿಸುತ್ತಿದ್ದಾರೆ. ಹಾಗಾಗಿಯೆ ಇತ್ತೀಚೆಗೆ ಗುಜರಾತಿನ ಪಶುಪಾಲಕ ಸಮುದಾಯಗಳು ಮಹಾ ಪಂಚಾಯತ್ ಮಾಡಿ “ಬಿಜೆಪಿ ಎಂದರೆ ಹಸುಗಳ ವಿರೋಧಿ, ಬಿಜೆಪಿ ಎಂದರೆ ಪಶುಪಾಲಕ ವಿರೋಧಿ, ಬಿಜೆಪಿಯು ಹಸುಗಳ ಹೆಸರಲ್ಲಿ ರಾಜಕಾರಣ ಮಾಡುತ್ತಿದೆ, ಬಿಜೆಪಿಯು ನಂಬಿಕಾರ್ಹವಲ್ಲ” ಎಂದು ಘೋಷಣೆ ಕೂಗಿದ್ದರು. ತಾವು ಪಶು ಸಾಕಣೆಯ ಪರವಾಗಿದ್ದೇವೆಂದು ಹೇಳಿಕೊಳ್ಳುವ ಬಿಜೆಪಿ ಎಂದಿಗೂ ಪಶುಪಾಲಕರ ಪರವಾಗಿಲ್ಲ ಎಂದು ಗುಡುಗಿದ್ದಾರೆ.

Tags: Amit ShahamulBJP GovernmentCentral GovernmentFarmers of KarnatakaGujaratKMFNandinisiddaramaiah
Previous Post

ರಾಕಿಭಾಯ್‌ ಮಕ್ಕಳ ಆನೆ ಬಂತು ಆನೆ ಆಟ.. ಫ್ಯಾನ್ಸ್‌ ಫಿದಾ..!  

Next Post

‘2021ರಲ್ಲಿ ಅಮುಲ್​ ಉತ್ಪನ್ನಗಳ ಮಾರಾಟಕ್ಕೆ ನಂದಿನಿಯಿಂದ ಒಪ್ಪಿಗೆ’: ಕಾಂಗ್ರೆಸ್​ ಹೊಸಬಾಂಬ್​

Related Posts

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”
Top Story

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

by ಪ್ರತಿಧ್ವನಿ
April 29, 2026
0

ಬೆಂಗಳೂರು :  ಅಹಿಂದ ಸಮುದಾಯ ಹಿಂದುಳಿದಿದ್ದಕ್ಕೆ ಅಹಿಂದ ಶುರುವಾಗಿದೆ. ಶೈಕ್ಷಣಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿಯೂ ಈ ಸಮುದಾಯಗಳು ಹಿಂದೆ ಬಿದ್ದಿವೆ. ಹೀಗಾಗಿ ಅವರಿಗೆ ಉತ್ತೇಜನ ಕೊಡಲು ಅಹಿಂದಕ್ಕೆ...

Read moreDetails
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
Breking:ಮಂಡ್ಯದಲ್ಲಿ ಮೂವರು ವೈದ್ಯರ ಬಂಧನ, ಸರ್ಕಾರಿ ವೈದ್ಯೆ ನಾಪತ್ತೆ

Breking:ಮಂಡ್ಯದಲ್ಲಿ ಮೂವರು ವೈದ್ಯರ ಬಂಧನ, ಸರ್ಕಾರಿ ವೈದ್ಯೆ ನಾಪತ್ತೆ

April 29, 2026
ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

ಕೈ ಪಕ್ಷದ ವಿರುದ್ಧ ಅಹಿಂದ ಗುಡುಗು: ಹೊಸ ರಾಜಕೀಯ ತಿರುವು

April 29, 2026
ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

ತೀವ್ರ ಜಿದ್ದಾ ಜಿದ್ದಿನ ಬಂಗಾಳದ ಫೈಟ್‌ : ಎರಡನೇ ಹಂತದ ಮತದಾನಕ್ಕೆ ಏನೆಲ್ಲ ವ್ಯವಸ್ಥೆ, ಹೇಗಿದೆ ಭದ್ರತೆ..?

April 29, 2026
Next Post
‘2021ರಲ್ಲಿ ಅಮುಲ್​ ಉತ್ಪನ್ನಗಳ ಮಾರಾಟಕ್ಕೆ ನಂದಿನಿಯಿಂದ ಒಪ್ಪಿಗೆ’: ಕಾಂಗ್ರೆಸ್​ ಹೊಸಬಾಂಬ್​

‘2021ರಲ್ಲಿ ಅಮುಲ್​ ಉತ್ಪನ್ನಗಳ ಮಾರಾಟಕ್ಕೆ ನಂದಿನಿಯಿಂದ ಒಪ್ಪಿಗೆ’: ಕಾಂಗ್ರೆಸ್​ ಹೊಸಬಾಂಬ್​

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada