ಕರ್ನಾಟಕದಲ್ಲಿ ಹಿಜಾಬ್ ನಿಷೇಧ ಕುರಿತ ಪ್ರಕರಣವನ್ನು ‘ಸೂಕ್ತ ಸಮಯದಲ್ಲಿ’ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ಖಂಡಿತವಾಗಿಯೂ ಹಿಜಾಬ್ ವಿಚಾರವನ್ನು ನಾವು ಪರಿಶೀಲಿಸುತ್ತೇವೆ. ಸಾಂವಿಧಾನಿಕ ಹಕ್ಕುಗಳನ್ನು ನಾವು ರಕ್ಷಿಸಬೇಕಾಗಿದೆ ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ತಿಳಿಸಿದ್ದಾರೆ.
ಹಿಜಾಬ್ ಪ್ರಕರಣ ವಿಚಾರಣೆಯ ಸಂದರ್ಭದಲ್ಲಿ ಕಾಲೇಜುಗಳಲ್ಲಿ ಧಾರ್ಮಿಕ ಸಂಕೇತ ಉಡುಪುಗಳನ್ನು ಧರಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಮಧ್ಯಂತರ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕದ ವಿದ್ಯಾರ್ಥಿಯೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅರ್ಜಿ ಸಲ್ಲಿಸಿದ್ದರು.
ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ದೇವದತ್ತ್ ಕಾಮತ್ ಅವರು, ಮುಸ್ಲಿಮರಿಗೆ ಮಾತ್ರವಲ್ಲದೆ ಇತರ ಧಾರ್ಮಿಕ ಗುಂಪುಗಳಿಗೂ ಹಿಜಾಬ್ ಪರಿಣಾಮ ವಿವಾದ ಬೀರುತ್ತಿದೆ. ಉದಾಹರಣೆಗೆ ಸಿಖ್ಖರು ಪೇಟವನ್ನು ಧರಿಸುತ್ತಾರೆ. ಇದರರ್ಥ ಆರ್ಟಿಕಲ್ 25 [ಧರ್ಮದ ಸ್ವಾತಂತ್ರ್ಯ] ಹಕ್ಕುಗಳ ಸಂಪೂರ್ಣ ಉಲ್ಲಂಘನೆ. ಮುಸ್ಲಿಂ ವಿದ್ಯಾರ್ಥಿಗಳು ತಮ್ಮ ಸಮವಸ್ತ್ರದ ಅದೇ ಬಣ್ಣದ ಹಿಜಾಬ್‌ಗಳನ್ನು ಧರಿಸಲು ಮಾತ್ರ ಅನುಮತಿ ಕೇಳುತ್ತಿದ್ದಾರೆ ಎಂದು ವಕೀಲರು ವಾದಿಸಿದರು.

ಏತನ್ಮಧ್ಯೆ, ಹೈಕೋರ್ಟ್ ತನ್ನ ಆದೇಶವನ್ನು ಪೂರ್ಣವಾಗಿ ಹೇಳಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದ್ದಾರೆ. ಪ್ರತಿಭಟನೆಯಿಂದ ಪರೀಕ್ಷೆಗಳು ಬಾಧಿತವಾಗಿದ್ದರೆ ಸೂಕ್ತ ಸಮಯದಲ್ಲಿ ಈ ವಿಷಯವನ್ನು ಕೈಗೆತ್ತಿಕೊಳ್ಳುವುದಾಗಿ ನ್ಯಾಯಾಲಯ ಹೇಳಿತು.
ಈ ವಿಷಯಗಳನ್ನು ರಾಷ್ಟ್ರಮಟ್ಟದಲ್ಲಿ ಹರಡಬೇಡಿ. ಸೂಕ್ತ ಸಮಯದಲ್ಲಿ ಮಾತ್ರ ನಾವು ಮಧ್ಯಪ್ರವೇಶಿಸುತ್ತೇವೆ ಎಂದು ಮುಖ್ಯ ನ್ಯಾಯಮೂರ್ತಿ ರಮಣ ಅವರು ಕಾಮತ್‌ಗೆ ತಿಳಿಸಿದರು.
ಹಿಜಾಬ್ ಧರಿಸುವ ಹಕ್ಕು ಸಂವಿಧಾನದ ಪರಿಚ್ಛೇದ 19(1)(ಎ) ಅಡಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು, ಖಾಸಗಿತನದ ಹಕ್ಕು ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕಿನೊಳಗೆ ಬರುತ್ತದೆ. ಫೆಬ್ರವರಿ 5 ರಂದು ಕರ್ನಾಟಕ ಸರ್ಕಾರವು “ಸಮಾನತೆ, ಸಮಗ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ” ಬಟ್ಟೆಗಳನ್ನು ನಿಷೇಧಿಸುವ ಆದೇಶವನ್ನು ಜಾರಿಗೊಳಿಸಿದೆ. ಈ ಆದೇಶವು ಸಮಾನತೆ, ಜೀವನ ಮತ್ತು ತಾರತಮ್ಯದಿಂದ ರಕ್ಷಣೆಗಾಗಿ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಅರ್ಜಿದಾರ ಪರ ವಕೀಲ ಕಾಮತ್ ತಮ್ಮ ವಾದದಲ್ಲಿ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ, ಹಿಂದೂ ವಿದ್ಯಾರ್ಥಿಗಳು ಮತ್ತು ಪುರುಷರ ಗುಂಪುಗಳು ಕರ್ನಾಟಕದ ಹಲವಾರು ಸ್ಥಳಗಳಲ್ಲಿ ಕಾಲೇಜಿಗೆ ಹಿಜಾಬ್ ಧರಿಸಿ ಮಹಿಳೆಯರ ವಿರುದ್ಧ ಪ್ರತಿಭಟನೆ ನಡೆಸುತ್ತಿವೆ. ಕೆಲವು ಸ್ಥಳಗಳಲ್ಲಿ ಕೇಸರಿ ಸ್ಕಾರ್ಫ್‌ಗಳನ್ನು ಧರಿಸಿರುವ ಪುರುಷರು ಮುಸ್ಲಿಂ ವಿದ್ಯಾರ್ಥಿಗಳನ್ನು ಹೆದರಿಸುವ ಮತ್ತು ಬೆದರಿಸುವ ವೀಡಿಯೊಗಳು ಕೂಡ ಹರಿದಾಡುತ್ತಿವೆ.
 
			
 
                                 
                                 
                                